ಏಕದಿನ ಕ್ರಿಕೆಟ್‌ನಲ್ಲಿ ಪ್ರಮುಖ ಬದಲಾವಣೆಗೆ ಸಲಹೆ ನೀಡಿದ ಭಾರತದ ಮಾಜಿ ಕೋಚ್ ರವಿ ಶಾಸ್ತ್ರಿ

ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ಗಳ ಮಧ್ಯೆ ಏಕದಿನ ಕ್ರಿಕೆಟ್‌ನ ಪ್ರಸ್ತಿತತೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಅದರಲ್ಲೂ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಇತ್ತೀಚೆಗೆ ಏಕದಿನ ಮಾದರಿಗೆ ನಿವೃತ್ತಿ ಘೋಷಣೆ ಮಾಡಿದ ಬಳಿಕ ಈ ವಿಚಾರವಾಗಿ ದೊಡ್ಡ ಮಟ್ಟದ ಚರ್ಚೆಗಳು ಆರಂಭವಾಗಿದೆ. ಅನೇಕ ಕ್ರಿಕೆಟ್ ವಿಶ್ಲೇಷಕರು ಏಕದಿನ ಕ್ರಿಕೆಟ್ ಮಾದರಿ ಸಾಯುತ್ತಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಕೋಚ್ ರವಿ ಶಾಸ್ತ್ರಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಏಕದಿನ ಕ್ರಿಕೆಟ್ ಅಧಪತನ ಕಾಣದಂತೆ ಮಾಡಲು ಪ್ರಮುಖ ಬದಲಾವಣೆಯೊಂದನ್ನು ಮಾಡಬೇಕು ಎಂದು ರವಿ ಶಾಸ್ತ್ರಿ ಹೇಳಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರ ಅಭಿಪ್ರಾಯವನ್ನು ರವಿ ಶಾಸ್ತ್ರಿ ಬೆಂಬಲಿಸಿ ಮಾತನಾಡಿದ್ದಾರೆ.

40 ಓವರ್‌ಗಳ ಪಂದ್ಯಕ್ಕೆ ಶಾಸ್ತ್ರಿ ಬೆಂಬಲ
ಏಕದಿನ ಕ್ರಿಕೆಟ್‌ನ ರೋಚಕತೆಯನ್ನು ಹೆಚ್ಚಿಸಲು ಪಂದ್ಯದ ಓವರ್‌ಗಳ ಅವಧಿಯನ್ನು ಕಡಿತಗೊಳಿಸಬೇಕು ಎಂಬುದು ರವಿ ಶಾಸ್ತ್ರಿ ಅಭಿಪ್ರಾಯ. ಈಗ ಇರುವ 50 ಓವರ್‌ಗಳ ಪಂದ್ಯದ ಬದಲಿಗೆ 40 ಓವರ್‌ಗಳ ಆಟವನ್ನು ಆಡಿಸಬೇಕು ಎಂದಿದ್ದಾರೆ ರವಿ ಶಾಸ್ತ್ರಿ. ಹಾಗಿದ್ದಾಗ ಪಂದ್ಯಗಳು ಮತ್ತಷ್ಟು ಕುತೂಹಲಕಾರಿಯಾಗಬಹುದು, ಅದರಲ್ಲೂ ಮಧ್ಯಮ ಓವರ್‌ಗಳಲ್ಲಿ ಹೆಚ್ಚು ಕುತೂಹಲಕಾರಿಯಾಗಬಹುದು ಎಂದಿದ್ದಾರೆ ರವಿ ಶಾಸ್ತ್ರಿ.

ಬದಲಾವಣೆಗೆ ಸೂಕ್ತ ಕಾಲ ಎಂದ ಶಾಸ್ತ್ರಿ
"ನಾವು ವಿಶ್ವಕಪ್ ಗೆದ್ದಾಗ ಏಕದಿನ ಕ್ರಿಕೆಟ್ 60 ಓವರ್‌ಗಳ ಪಂದ್ಯವಾಗಿತ್ತು. ಬಳಿಕ 0 ಓವರ್ ಬಹಳ ಹೆಚ್ಚಾಯಿತು ಎಂಬ ಅಭಿಪ್ರಾಯಗಳು ಬಂದವು. 20ರಿಂದ 40ನೇ ಓವರ್‌ನ ಅವಧಿಯನ್ನು ಅರಗಿಸಿಕೊಳ್ಳುವುದು ನೋಡುಗರಿಗೆ ಕಠಿಣವಾಗಿತ್ತು. ಹಾಗಾಗಿ 60ರಿಂದ 50 ಓವರ್‌ಗಳಿಗೆ ಇಳಿಸಲಾಯಿತು. ನಾವು ಮುಂದಾಲೋಚನೆ ಮಾಡುತ್ತಿರಬೇಕು ಹಾಗೂ ಬೆಳವಣಿಗೆ ಸಾಧಿಸಬೇಕು. 50 ಓವರ್‌ಗಳ ಪಂದ್ಯ ಆರಂಭವಾಗಿ ಈಗ ಸುದೀರ್ಘ ಸಮಯವಾಗಿದೆ" ಎಂದಿದ್ದಾರೆ ಭಾರತದ ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ.
IND vs WI: ಸರಣಿ ಗೆದ್ದ ಬಳಿಕ ಪಾರ್ಟಿ ಮೂಡ್‌ನಲ್ಲಿ ಟೀಮ್ ಇಂಡಿಯಾ; ಚಿತ್ರ ಹಂಚಿಕೊಂಡ ಸೂರ್ಯಕುಮಾರ್ ಪತ್ನಿ

ಪಾಕ್ ಮಾಜಿ ನಾಯಕನಿಂದಲೂ ವ್ಯಕ್ತವಾಗಿತ್ತು ಇದೇ ಅಭಿಪ್ರಾಯ
ಇನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಕೂಡ ರವಿ ಶಾಸ್ತ್ರಿ ಅವರ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದರು. ಬೆನ್ ಸ್ಟೋಕ್ಸ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ ಬಳಿಕ ಪಾಕಿಸ್ತಾನದ ಮಾಧ್ಯಮ ಸಮಾ ಟಿವಿ ಜೊತೆಗೆ ಸಂವಾದದಲ್ಲಿ ಭಾಗಿಯಾಗಿದ್ದ ಶಾಹಿದ್ ಅಫ್ರಿದಿ ಏಕದಿನ ಕ್ರಿಕೆಟ್‌ಅನ್ನು ಮತ್ತಷ್ಟು ಮನರಂಜನೀಯ ಮಾದರಿಯನ್ನಾಗಿ ಮಾಡಬೇಕಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. "ಏಕದಿನ ಕ್ರಿಕೆಟ್ ಈಗ ನೀರಸವಾಗುತ್ತಿದೆ. ಈ ಮಾದರಿಯನ್ನು 50 ಓವರ್‌ಗಳಿಂದ 40 ಓವರ್‌ಗಳಿಗೆ ಕಡಿತಗೊಳಿಸಬೇಕಿದೆ. ಈ ಮೂಲಕ ಏಕದಿನ ಮಾದರಿಯನ್ನು ಹೆಚ್ಚು ಮನರಂಜನೆ ನೀಡುವ ಮಾದರಿಯನ್ನಾಗಿ ಮಾಡಬಹುದು ಎಂದಿದ್ದಾರೆ.

ಏಕದಿನ ಕ್ರಿಕೆಟ್ ಅಪ್ರಸ್ತುತ ಎಂದ ಅಕ್ರಂ, ಖವಾಜಾ
ಬೆನ್ ಸ್ಟೋಕ್ಸ್ ಏಕದಿನ ಮಾದರಿಗೆ ನಿವೃತ್ತಿ ಘೋಷಣೆ ಮಾಡಿದ ಬಳಿಕ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್ ಏಕದಿನ ಮಾದರಿ ಸದ್ಯ ಅಪ್ರಸ್ತುತ ಎಂದಿದ್ದರು. ಟೆಸ್ಟ್ ಕ್ರಿಕೆಟ್ ಹಾಗೂ ಟಿ20 ಕ್ರಿಕೆಟ್ ಮಾತ್ರವೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸಾಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಬಳಿಕ ಆಸ್ಟ್ರೇಲಿಯಾದ ಟೆಸ್ಟ್ ಆಟಗಾರ ಉಸ್ಮಾನ್ ಖವಾಜಾ ಕೂಡ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದರು. ಏಕದಿನ ಕ್ರಿಕೆಟ್ ಮಾದರಿ ನಿಧಾನವಾಗಿ ಸಾಯುತ್ತಿದೆ. ಈಗ ಈ ಮಾದರಿ ಕುತೂಹಲಕಾರಿಯಾಗಿ ಉಳಿದುಕೊಂಡಿಲ್ಲ. ವೈಯಕ್ತಿಕವಾಗಿ ತನಗೂ ಈ ಮಾದರಿ ಇಷ್ಟವಿಲ್ಲ ಎಂದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications