Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ravi Shastri: ರೋಹಿತ್ ಶರ್ಮಾ ಸಂತೋಷದಿಂದ ನಿವೃತ್ತಿಯಾಗಬೇಕೆಂದು ರವಿ ಶಾಸ್ತ್ರಿ ಸಲಹೆ

ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ರನ್ ಗಳಿಸಲು ಪರದಾಟ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾದರೂ ಆಶ್ಚರ್ಯವಿಲ್ಲ. ಟೆಸ್ಟ್ ಕ್ರಿಕೆಟ್‌ಗೆ ರೋಹಿತ್ ಸಂತೋಷದಿಂದ ವಿದಾಯ ಹೇಳಬೇಕು ಎಂದು ಎಂದು ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಸಿಡ್ನಿಯಲ್ಲಿ ನಡೆಯಲಿರುವ ಬಾರ್ಡರ್-ಗವಾಸ್ಕರ್ ಸರಣಿಯ ಅಂತಿಮ ಟೆಸ್ಟ್‌ನ ಮುನ್ನಾದಿನದಂದು ರೋಹಿತ್ ಶರ್ಮಾ ಅವರ ಟೆಸ್ಟ್ ವೃತ್ತಿಜೀವನ ಭವಿಷ್ಯದ ಬಗ್ಗೆ ಊಹಾಪೋಹಗಳು ತೀವ್ರಗೊಂಡಿವೆ. ಹೆಡ್‌ಕೋಚ್ ಗೌತಮ್ ಗಂಭೀರ್ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮೊದಲು ಪಿಚ್ ನೋಡಿದ ನಂತರ ಆಡುವ ಹನ್ನೊಂದರ ಬಳಗ ನಿರ್ಧಾರವಾಗಲಿದೆ ಎಂದು ಹೇಳಿದ್ದಾರೆ. ಶುಕ್ರವಾರ ಆರಂಭವಾಗಲಿರುವ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಆಡುವುದು ಖಚಿತವೇ? ಅಥವಾ ಇಲ್ಲವೇ? ಎಂಬುದು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕುತೂಹಲ ಮೂಡಿಸಿದೆ.

Ravi Shastri suggests Rohit Sharma should retire happily

ರವಿ ಶಾಸ್ತ್ರಿ ಹೇಳಿಕೆ

ಸಂದರ್ಶನವೊಂದರಲ್ಲಿ ಮಾತನಾಡಿರುವ ರವಿಶಾಸ್ತ್ರಿ, ಶುಭಮನ್ ಗಿಲ್ ಬೆಂಚ್ ಮೇಲೆ ಕುಳಿತು ಏನು ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಭಾರತವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ (ಫೈನಲ್) ಅರ್ಹತೆ ಪಡೆದರೆ ರೋಹಿತ್ ಶರ್ಮಾ ಮುನ್ನಡೆಯಬಹುದು. ಇಲ್ಲದಿದ್ದರೆ, ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ಆದರೆ ರೋಹಿತ್ ಶರ್ಮಾ ಸಿಡ್ನಿ ಟೆಸ್ಟ್ ಪಂದ್ಯವನ್ನು ಆಡಿದರೆ ಅದ್ಭುತ ಪ್ರದರ್ಶನ ನೀಡಬೇಕು. ನಾನು ರೋಹಿತ್ ಶರ್ಮಾ ಜೊತೆಗೆ ಇದ್ದರೆ, ಮೈದಾನದಲ್ಲಿ ಹೋಗಿ ಸುಮ್ಮನೆ ಬ್ಯಾಟ್ ಬೀಸು ಎಂದು ಹೇಳಿತ್ತಿದ್ದೆ. ಈ ಸಮಯದಲ್ಲಿ ರೋಹಿತ್ ಶರ್ಮಾ ಆಡಲು ಪ್ರಯತ್ನಿಸುತ್ತಿರುವ ರೀತಿ ಉತ್ತಮವಾಗಿ ಕಾಣುತ್ತಿಲ್ಲ. ಮೈದಾನಕ್ಕೆ ಹೋಗಿ ಎದುರಾಳಿ ತಂಡಗಳ ವಿರುದ್ಧ ಅಬ್ಬರಿಸಿದರೆ ಏನಾಗುತ್ತದೆ ನೋಡೋಣ ಎಂದಿದ್ದಾರೆ.

ಹಳೆಯಾಟ ಮರೆತ ಶರ್ಮಾ

ಹೊರಗಿನಿಂದ ನೋಡಿದಾಗ ರೋಹಿತ್ ಶರ್ಮಾ ಅವರು ಸ್ವಲ್ಪ ತಡವಾಗಿ ಚೆಂಡಿಗೆ ಬರುತ್ತಾರೆ ಎಂದು ನನಗೆ ಅನಿಸುತ್ತದೆ. ಅವರ ಕಾಲುಗಳು ಎಂದಿನಂತೆ ಕ್ರೀಸ್‌ನಲ್ಲಿ ಚಲಿಸುತ್ತಿಲ್ಲ. ಅವರು ಚೆಂಡಿನ ಕಡೆಗೆ ಹೆಚ್ಚು ಗಮನ ಹರಿಸುವಾಗ ಕ್ರೀಸ್‌ನಲ್ಲಿ ಕ್ಯಾಚ್ ಔಟಾಗಿದ್ದಾರೆ. ರೋಹಿತ್ ಶರ್ಮಾ ತಮ್ಮ ಸ್ವಾಭಾವಿಕ ಆಟವನ್ನು ಆಡದ ಕಾರಣ ಕಳೆದ ಕೆಲವು ತಿಂಗಳುಗಳಲ್ಲಿ ತಮ್ಮ ಫಾರ್ಮ್ ಅನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಅವರ ಪರಿಸ್ಥಿತಿಯನ್ನು ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್‌ ಉಸ್ಮಾನ್ ಖವಾಜಾ ಅವರಿಗೆ ಹೋಲಿಸಿದ್ದಾರೆ.

ಆಸ್ಟ್ರೇಲಿಯಾ 2-1 ಮುನ್ನಡೆ

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಶುಕ್ರವಾರದಿಂದ ಐದನೇ ಮತ್ತು ಅಂತಿಮ ಟೆಸ್ಟ್ ಆರಂಭವಾಗಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ 2-1 ಮುನ್ನಡೆ ಸಾಧಿಸಿದೆ. ಮುಂದಿನ ವರ್ಷ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (ಡಬ್ಲ್ಯೂಟಿಸಿ) ಫೈನಲ್‌ಗೆ ಪ್ರವೇಶಿಸುವ ಅವಕಾಶವನ್ನು ಉಳಿಸಿಕೊಳ್ಳಲು ಭಾರತವು ಸಿಡ್ನಿಯಲ್ಲಿ ಟೆಸ್ಟ್ ಪಂದ್ಯವನ್ನು ಗೆಲ್ಲಬೇಕಾಗಿದೆ. ಜೂನ್‌ನಲ್ಲಿ ಲಾರ್ಡ್ಸ್‌ನಲ್ಲಿ ಡಬ್ಲ್ಯೂಟಿಸಿ ಫೈನಲ್‌ ನಡೆಯಲಿದೆ.

Story first published: Thursday, January 2, 2025, 17:50 [IST]
Other articles published on Jan 2, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+