'ಕುಂಬ್ಳೆ, ಶಾಸ್ತ್ರಿ ಮುಖ್ಯರಲ್ಲ, ಆಟಗಾರರು ಮುಖ್ಯ'
ಮುಂಬೈ, ಜುಲೈ 19: ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸುವುದಕ್ಕೂ ಮುನ್ನ ಟೀಂ ಇಂಡಿಯಾದ ನೂತನ ಕೋಚ್ ರವಿಶಾಸ್ತ್ರಿ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರು ಬುಧವಾರದಂದು ಜಂಟಿ ಸುದ್ದಿಗೋಷ್ಠಿ ನಡೆಸಿದರು.
'ತಂಡ ಹಾಗೂ ತಂಡದ ಆಟಗಾರರು ಮುಖ್ಯ, ಕೋಚ್ ಗಳು ಇಲ್ಲಿ ಅಮುಖ್ಯ' ಎಂದು ರವಿಶಾಸ್ತ್ರಿ ಹೇಳಿದರು. ಶ್ರೀಲಂಕಾ ಪ್ರವಾಸದ ವೇಳೆ ಮೂರು ಟೆಸ್ಟ್, ಐದು ಏಕದಿನ ಪಂದ್ಯ ಹಾಗೂ ಏಕೈಕ ಟಿ20 ಪಂದ್ಯವನ್ನಾಡಲಿದೆ.

ರವಿಶಾಸ್ತ್ರಿ: ಶಾಸ್ತ್ರಿ, ಕುಂಬ್ಳೆಯಂಥವರು ಬರುತ್ತಾರೆ, ಹೋಗುತ್ತಾರೆ. ಆದರೆ, ವಿಶ್ವದ ನಂಬರ್ ಒನ್ ಶ್ರೇಯಾಂಕಿತ ಟೆಸ್ಟ್ ತಂಡ ಎನಿಸಿಕೊಂಡ ಖ್ಯಾತಿ ತಂಡಕ್ಕೆ ಸಲ್ಲಬೇಕು ಎಂದು ರವಿಶಾಸ್ತ್ರಿ ಹೇಳಿದ್ದಾರೆ. ಜೊತೆಗೆ, ತಂಡದ ಸದಸ್ಯರು ಯಾವುದೇ ಕಿರಿಕಿರಿ ಇಲ್ಲದೆ ಮೈದಾನಕ್ಕಿಳಿದರೆ ಮಾತ್ರ ಗೆಲುವು ಸಾಧ್ಯ ಎಂದರು.
ನಾವು ಶ್ರೀಲಂಕಾ ಸರಣಿ ಕೈಗೊಂಡು 24 ತಿಂಗಳು ಕಳೆದಿವೆ. ಮೊದಲ ಪಂದ್ಯ ಸೋತರೂ ಬಳಿಕ ಪುಟಿದೆದ್ದು
ಸರಣಿ ಗೆದ್ದಾಗ (2-1) ಇದ್ದ ಮನಸ್ಥಿತಿಯನ್ನು ಈಗಲೂ ಕಾಯ್ದುಕೊಳ್ಳಲಾಗುವುದು ಎಂದರು. ಇದೇ ವೇಳೆ ಭರತ್ ಅರುಣ್ ಆಯ್ಕೆಯನ್ನು ರವಿಶಾಸ್ತ್ರಿ ಸಮರ್ಥಿಸಿಕೊಂಡರು.
ವಿರಾಟ್ ಕೊಹ್ಲಿ: ಯಾವುದೇ ಸಂಬಂಧವಾದರೂ ಅರ್ಥ ಮಾಡಿಕೊಂಡು ಉತ್ತಮ ಸಂವಹನ ಮುಖ್ಯ. ನಾವಿಬ್ಬರೂ ಈ ಹಿಂದೆ ಒಟ್ಟಿಗೆ ಕಾರ್ಯ ನಿರ್ವಹಿಸಿದ್ದೇವೆ. ನಮ್ಮಿಂದ ಏನು ನಿರೀಕ್ಷಿಸಲಾಗುತ್ತಿದೆ ಎಂಬ ಅರಿವಿದೆ. ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವ ಭರವಸೆ ನೀಡುತ್ತೇನೆ ಎಂದರು.
Story first published: Wednesday, January 3, 2018, 10:05 [IST]
Other articles published on Jan 3, 2018
Read in English: Shastri-Kohli joint presser: Top quotes
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications