Virat Kohli: ನಾನಿದ್ದರೆ ಕೊಹ್ಲಿ ಕ್ಯಾಪ್ಟನ್ ಮಾಡುತ್ತಿದ್ದೆ: ರವಿ ಶಾಸ್ತ್ರಿ
ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಿದೆ. ಈ ವೇಳೆ ಭಾರತ ತಂಡ, ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ ವಿರುದ್ಧ ಆಡಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾಕ್ಕೆ ಅನುಭವಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅನುಪಸ್ಥಿತಿ ಬಹುವಾಗಿ ಕಾಡಲಿದೆ. ಈಗ ವಿರಾಟ್ ಕೊಹ್ಲಿ ನಿವೃತ್ತಿಯ ಬಗ್ಗೆ ಮಾಜಿ ಟೀಮ್ ಇಂಡಿಯಾ ಕೋಚ್ ದೊಡ್ಡ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಸದ್ಯ ಕ್ರಿಕೆಟ್ ವಲಯದಲ್ಲಿ ಬಿಸಿ ಬಿಸಿ ಚರ್ಚೆ ಆಗುವಂತೆ ಮಾಡಿದೆ. ಹಾಗಿದ್ದರೆ ವಿರಾಟ್ ಕೊಹ್ಲಿ ನಿವೃತ್ತಿಯ ಹಿಂದಿನ ಕಥೆ ಬೇರೆಯದ್ದೇ ಇತ್ತು ಎಂದು ತಿಳಿಸುವಂತಿದೆ.
ವಿರಾಟ್ ಕೊಹ್ಲಿ ಅವರನ್ನು ಬೇರೆಯದೇ ರೀತಿಯಾಗಿ ನಿಭಾಯಿಸಬಹುದಿತ್ತು. ನಾನು ಇದ್ದಿದ್ದರೆ ಹೀಗೆ ಮಾಡುತ್ತಿರಲಿಲ್ಲ. ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸುತ್ತಿದ್ದೆ ಎಂದು ರವಿ ಶಾಸ್ತ್ರಿ ತಿಳಿಸಿದ್ದಾರೆ. ಇವರ ಈ ಹೇಳಿಕೆ ಆಟಗಾರ, ಆಯ್ಕೆ ಸಮಿತಿ, ಕೋಚ್ ನಡುವಿನ ಮನಸ್ತಾಪವನ್ನು ಎತ್ತಿ ತೋರಿಸುವಂತೆ ಇದೆ.

ಶಾಸ್ತ್ರಿ ಹೇಳಿದ್ದೇನು?
ಒಬ್ಬ ಆಟಗಾರ ನಿವೃತ್ತಿ ಘೋಷಿಸಿದಾಗ ಆತ ಎಷ್ಟು ದೊಡ್ಡ ಆಟಗಾರ ಎಂದು ಅಭಿಮಾನಿಗಳಿಗೆ ಆಗತಾನೆ ತಿಳಿಯುತ್ತದೆ. ವಿರಾಟ್ ಕೊಹ್ಲಿ ವಿದಾಯ ಹೇಳಿದ್ದು ಬೇಸರದ ಸಂಗತಿ. ಅವರು ನಿವೃತ್ತಿಯನ್ನು ಇನ್ನು ಚೆನ್ನಾಗಿ ಪಡೆಯಬಹುದಿತ್ತು. ಅವರೊಂದಿಗೆ ಮ್ಯಾನೇಜ್ಮೆಂಟ್ ಮ್ಯಾನೇಜ್ಮೆಂಟ್ ನಡೆಸಬಹುದಿತ್ತು. ನನಗೆ ಏನಾದ್ರೂ ಜವಾಬ್ದಾರಿಗಳು ಇದ್ದಿದ್ದರೇ ನಾನು ಆಸ್ಟ್ರೇಲಿಯಾ ಪ್ರವಾಸದ ಬಳಿಕ ವಿರಾಟ್ ಅವರನ್ನು ನಾಯಕರನ್ನಾಗಿ ಮಾಡುತ್ತಿದೆ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಾವು ನಿವೃತ್ತಿ ಹೊಂದುತ್ತಿರುವುದಾಗಿ ಬಿಸಿಸಿಐ ಆಯ್ಕೆ ಸಮಿತಿಗೆ ಈಗಾಗಲೇ ತಿಳಿಸಿದ್ದರು. ಆದರೆ ರೋಹಿತ್ ಶರ್ಮಾ ನಿವೃತ್ತಿಯ ಬಳಿಕ ತಂಡಕ್ಕೆ ಅನುಭವಿಬೇಕು. ಹೀಗಾಗಿ ವಿರಾಟ್ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಬೇಕು ಎಂದು ಅಧಿಕಾರಿ ಯೊಬ್ಬರು ಬಯಸಿದ್ದರು. ಆದರೆ ವಿರಾಟ್ ಯಾರ ಮಾತನ್ನು ಕೇಳದೇ ನಿವೃತ್ತಿ ಪಡೆದರು. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇನ್ನು ಏಕದಿನ ಮಾದರಿಯಲ್ಲಿ ಮಾತ್ರ ಆಡಲಿದ್ದಾರೆ. ಈಗ ಎದ್ದಿರುವ ಒಂದು ಪ್ರಶ್ನೆ ಎಂದರೆ ಇವರಿಬ್ಬರೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲು ಬಯಸಿದ್ದರೇ, ರಣಜಿ ಟ್ರೋಫಿಯಲ್ಲಿ ಏಕೆ ಆಡಿದರು.

ಐಪಿಎಲ್ ಮಧ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ವಿದಾಯ ಹೇಳಿದರು. ಇವರ ಈ ದಿಢೀರ ನಿರ್ಧಾರ ಅಭಿಮಾನಿಗಳಿಗೆ ತಿವ್ರ ಬೇಸರ ತರಿಸಿದೆ. ಅಭಿಮಾನಿಗಳು ವಿರಾಟ್ ಮೈದಾನದಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಬೇಕಿತ್ತು ಎಂದು ತಿಳಿಸಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿ ಜೂನ್ 20 ರಿಂದ ಆರಂಭವಾಗಲಿದೆ. ಈ ವೇಳೆ ಯುವ ಭಾರತ ತಂಡವನ್ನು ಶುಭಮನ್ ಗಿಲ್ ಮುನ್ನಡೆಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications