Ravichandran Ashwin: ಧೋನಿ-ಕೊಹ್ಲಿ ನಾಯಕತ್ವದಲ್ಲಿ ಆಲ್‌ರೌಂಡರ್ ಅಶ್ವಿನ್ 2 ದಾಖಲೆಗಳು
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡದ ದಿಗ್ಗಜ ಸ್ಪಿನ್ನರ್ ರವಿಚಂದ್ರನ್ ಆಶ್ವಿನ್ ಸಾಧನೆಯ ಶಿಖರವನ್ನೇರಿದ್ದಾರೆ. ಅವರು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಹಲವು ಬೌಲರ್‌ಗಳ ದಾಖಲೆಗಳನ್ನು ಸರಿಗಟ್ಟಿದ್ದಾರೆ. ಆಶ್ವಿನ್ ತಮ್ಮ ಬೌಲಿಂಗ್ ಮೂಲಕ ಬಲಿಷ್ಠ ತಂಡಗಳಿಗೆ ಕಾಟ ನೀಡುವುದರ ಜೊತೆಗೆ ಬ್ಯಾಟಿಂಗ್‌ನಲ್ಲೂ ಕಮಾಲ್ ಮಾಡಿದ್ದಾರೆ. ಕೆಳ ಕ್ರಮಾಂಕದಲ್ಲಿ ಕ್ರೀಸ್‌ಗೆ ಬರುವ ಅವರು ದಾಖಲೆಗಳನ್ನು ಸೃಷ್ಟಿಸಿದ್ದಾರೆ.
8ನೇ ಕ್ರಮಾಂಕದಲ್ಲಿ ಸಾಧನೆ
2011ರಲ್ಲಿ ಟೀಮ್ ಇಂಡಿಯಾದ ಕಮಾಂಡ್ ಎಂಎಸ್ ಧೋನಿ ಕೈಯಲ್ಲಿತ್ತು. ಈ ಸಂದರ್ಭದಲ್ಲಿ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯನ್ನು ಆಡಲು ಭಾರತಕ್ಕೆ ಪ್ರವಾಸ ಕೈ ಗೊಂಡಿತ್ತು. ಈ ಸರಣಿಯ ಮೂರನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ವಿಂಡೀಸ್ 590 ರನ್ ಗಳಿಸಿತ್ತು.

ಇದಕ್ಕೆ ಉತ್ತರವಾಗಿ ವಿರಾಟ್, ಸಚಿನ್, ಗಂಭೀರ್, ಸೆಹ್ವಾಗ್ ಮತ್ತು ದ್ರಾವಿಡ್ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಆದರೆ ಅವರ ವಿಕೆಟ್ ನಂತರ, ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ 8ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಅಶ್ವಿನ್ ಎದುರಾಳಿ ವಿಂಡೀಸ್ ಬೌಲರ್‌ಗಳ ಬೆವರಿಳಿಸಿದ್ದರು.
ಆಶ್ವಿನ್ 103 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದರು. ಇದಾದ ನಂತರ ಅಶ್ವಿನ್ ಒಂದೇ ಪಂದ್ಯದಲ್ಲಿ ಶತಕ ಮತ್ತು 5 ವಿಕೆಟ್ ಪಡೆದ ಭಾರತದ ಮೂರನೇ ಬೌಲರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಇತಿಹಾಸ
ಧೋನಿ ನಂತರ, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್ ಪ್ರಾಬಲ್ಯ ಸಾಧಿಸಿತ್ತು. ಈ ಸಂದಭದಲ್ಲಿಯೂ ಅಶ್ವಿನ್ ಯಶಸ್ಸು ಮುಂದುವರೆಯಿತು. ವೆಸ್ಟ್ ಇಂಡೀಸ್ ವಿರುದ್ಧ ಆಶ್ವಿನ್ 253 ಎಸೆತಗಳಲ್ಲಿ 113 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿ ತಂಡ ಉತ್ತಮ ರನ್ ಕಲೆಹಾಕಲು ನೆರವಾಗಿದ್ದರು. ಅವರು ಬೌಲಿಂಗ್‌ನಲ್ಲಿಯೂ ಮಿಂಚಿದ್ದರು.
ವೆಸ್ಟ್ ಇಂಡೀಸ್ ಹೊರತಾಗಿ, ಅಶ್ವಿನ್ ತಮ್ಮ ಆಲ್ ರೌಂಡ್ ಪ್ರದರ್ಶನದಿಂದ ಇಂಗ್ಲೆಂಡ್ ತಂಡಕ್ಕೂ ನಡುಕ ಹುಟ್ಟಿಸಿದ್ದರು. ಚೆನ್ನೈನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 43 ರನ್ ನೀಡಿ 5 ವಿಕೆಟ್ ಪಡೆದು ಬ್ಯಾಟಿಂಗ್ ಮೂಲಕ ಛಾಪು ಮೂಡಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications