R Ashwin: ಆರ್.ಅಶ್ವಿನ್ ಫಿಟ್ ಆಗಿದ್ದರೂ ಸಹ ರಣಜಿ ಏಕೆ ಆಡುತ್ತಿಲ್ಲ?
ಟೀಮ್ ಇಂಡಿಯಾ ಆಟಗಾರರು ಸದ್ಯ ರೆಸ್ಟ್‌ನಲ್ಲಿದ್ದಾರೆ. ಈ ವೇಳೆಯಲ್ಲಿ ಇವರು ದೇಶೀಯ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ರಿಷಭ್ ಪಂತ್, ರೋಹಿತ್ ಶರ್ಮಾ ಮುಂತಾದ ಸ್ಟಾರ್ ಆಟಗಾರರು ರಣಜಿ ಟೂರ್ನಿಯಲ್ಲಿ ಮೈದಾನಕ್ಕೆ ಇಳಿಯುವ ಸಾಧ್ಯತೆ ಇದೆ. ಈಗ ಅಭಿಮಾನಿಗಳಲ್ಲಿ ಮೂಡಿರುವ ಪ್ರಶ್ನೆ ಒಂದೆ, ತಮಿಳು ನಾಡು ತಂಡದಲ್ಲಿ ರವಿಚಂದ್ರನ್ ಅಶ್ವಿನ್‌ಗೆ ಏಕೆ ಸ್ಥಾನ ಇಲ್ಲ ಎಂದು?
ಟೀಮ್ ಇಂಡಿಯಾದ ಕ್ಲಾಸಿಕ್ ಆಫ್ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರು ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ ಟೆಸ್ಟ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ವಿದಾಯದ ವೇಳೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿ ಸಾಕಾಯಿತು. ಈಗ ಕ್ಲಬ್ ಹಾಗೂ ಲೀಗ್‌ನಲ್ಲಿ ಆಡುವುದಾಗಿ ತಿಳಿಸಿದ್ದಾರೆ. ಅಶ್ವಿನ್ ಈ ಹೇಳಿಕೆಯಿಂದ ಇವರು ರಣಜಿ ಟೂರ್ನಿಯಲ್ಲಿ ಆಡುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಪ್ರಕಟಿತ ತಂಡದಲ್ಲಿ ಅಶ್ವಿನ್ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಮೂಲಗಳ ಪ್ರಕಾರ ಅಶ್ವಿನ್ ಮುಂದಿನ ಋತುವಿನೊಂದಿಗೆ ತಮಿಳುನಾಡು ಪರ ರಣಜಿ ಆಡಬಹುದು ಎಂದು ತಿಳಿದು ಬಂದಿದೆ. ರಣಜಿ ಟೂರ್ನಿಯ ಉಳಿದ ಪಂದ್ಯಗಳು ಜನವರಿ 23 ರಿಂದ ಆರಂಭವಾಗಿವೆ. ತಮಿಳು ನಾಡು "ಡಿ" ಗುಂಪಿನಲ್ಲಿ ಅಮೋಘ ಪ್ರದರ್ಶನ ನೀಡಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಸುಂದರ್‌ಗೆ ಇಲ್ಲ ಸ್ಥಾನ?
ಇನ್ನು ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ ಬೌಲರ್ ವಾಷಿಂಗ್ಟನ್ ಸುಂದರ್ ಅವರಿಗೂ ರಣಜಿ ತಂಡದಲ್ಲಿ ಸ್ಥಾನ ಪಡೆದಿಲ್ಲ. ಇದಕ್ಕೆ ಕಾರಣ ವಾಷಿಂಗ್ಟನ್ ಸುಂದರ್ ಅವರು ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಸ್ಥಾನ ಪಡೆದಿದ್ದರಿಂದ ಇವರು ರಣಜಿ ತಂಡದ ಭಾಗವಾಗಿಲ್ಲ. ಉಳಿದಂತೆ ತಂಡವನ್ನು ಸಾಯಿ ಕಿಶೋರ್ ಮುನ್ನಡೆಸುತ್ತಿದ್ದಾರೆ. ತಂಡಕ್ಕೆ ವೇಗಿ ಸಂದೀಪ್ ವಾರಿಯರ್ ಮರಳಿದ್ದು, ವೇಗಿ ಗುರುಜಪನೀತ್ ಸಿಂಗ್ ಗಾಯದ ಕಾರಣ ತಂಡದಿಂದ ಹೊರಗುಳಿಯಲಿದ್ದಾರೆ.
ಘೋಷಿತ ತಂಡ: ಸಾಯಿ ಕಿಶೋರ್ ಆರ್, ಜಗದೀಶನ್ ಎನ್, ವಿಜಯ್ ಶಂಕರ್, ಇಂದ್ರಜೀತ್ ಬಿ, ಮೊಹಮ್ಮದ್ ಅಲಿ ಎಸ್, ಆಂಡ್ರೆ ಸಿದ್ಧಾರ್ಥ್ ಸಿ, ಪ್ರದೋಷ್ ರಂಜನ್ ಪಾಲ್, ಭೂಪತಿ ವೈಷ್ಣ ಕುಮಾರ್, ಅಜಿತ್ ರಾಮ್ ಎಸ್, ಲಕ್ಷ್ಯ ಜೈನ್ ಎಸ್. , ಲೋಕೇಶ್ವರ್ ಎಸ್ (ವಿಕೆಟ್ ಕೀಪರ್), ಸಂದೀಪ್ ವಾರಿಯರ್, ಮೊಹಮ್ಮದ್ ಎಂ, ಸಿದ್ಧಾರ್ಥ್ ಎಂ, ತ್ರಿಲೋಕ್ ನಾಗ್

ತಮಿಳುನಾಡು ಸಾಧನೆ
ತಮಿಳುನಾಡು ಆಡಿದ 5 ಪಂದ್ಯಗಳಲ್ಲಿ 2 ಗೆಲುವು, 3 ಡ್ರಾ ಸಾಧಿಸಿದ್ದು, 19 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಜನವರಿ 23 ರಂದು ತಮಿಳುನಾಡು ಚಂಡೀಗಡ್ ವಿರುದ್ಧ ಆಡಲಿದ್ದು, ಈ ಪಂದ್ಯ ಸೇಲಂ ನಲ್ಲಿ ನಡೆಯಲಿದೆ. ಜಾರ್ಖಂಡ್ ವಿರದ್ಧ ಮತ್ತೊಂದು ಪಂದ್ಯ ನಡೆಯಲಿದ್ದು, ಜೇಮ್‌ಶೆಡ್‌ಪುರ್‍ದಲ್ಲಿ ನಡೆಯಲಿದೆ. ಈ ಎರಡೂ ಪಂದ್ಯಗಳಲ್ಲಿ ತಮಿಳು ನಾಡು ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶಿಸುವ ಕನಸು ಕಾಣುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications