For Quick Alerts
ALLOW NOTIFICATIONS  
For Daily Alerts
 

R Ashwin: ಟೀಮ್ ಇಂಡಿಯಾದಲ್ಲಿನ ಸೂಪರ್ ಸ್ಟಾರ್ ಸಂಸ್ಕೃತಿಯ ಬಗ್ಗೆ ಅಶ್ವಿನ್ ಗರಂ

ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಭಾರತ ತಂಡ ತವರಿನಲ್ಲಿ ಟಿ20 ಮತ್ತು ಏಕದಿನ ಸರಣಿಗಳನ್ನು ಗೆದ್ದು ಬೀಗಿದೆ. ಆದರೆ, ಇದಕ್ಕೂ ಮುನ್ನ ನಡೆದ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಗಳಲ್ಲಿ ಭಾರತ ಸೋಲು ಕಂಡಿತ್ತು. ಈ ಸಂದರ್ಭಗಳಲ್ಲಿ ಟೀಮ್ ಇಂಡಿಯಾ ಆಟಗಾರರು ಭಾರೀ ಟೀಕೆಗಳನ್ನು ಎದುರಿಸುವಂತಾಗಿತ್ತು. ಹಲವು ಟೀಮ್ ಇಂಡಿಯಾದಲ್ಲಿನ ಸೂಪರ್ ಸ್ಟಾರ್ ಸಂಸ್ಕೃತಿಯೇ ತಂಡದ ಸೋಲಿಗೆ ಕಾರಣ ಎಂದಿದ್ದರು. ಏಕೆಂದರೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಸೇರಿದಂತೆ ಹಲವು ಸ್ಟಾರ್ ಆಟಗಾರರು ಫಾರ್ಮ್‌ ಸಮಸ್ಯೆ ಎದುರಿಸುತ್ತಿದ್ದರೂ ತಂಡದಿಂದ ಅವರನ್ನು ಕೈ ಬಿಟ್ಟಿರಲಿಲ್ಲ.

ಈ ಎರಡು ಟೆಸ್ಟ್ ಸರಣಿ ಸೋಲುಗಳು ಬಳಿಕ ಟೀಮ್ ಇಂಡಿಯಾದಲ್ಲಿನ ಸೂಪರ್ ಸ್ಟಾರ್ ಸಂಸ್ಕೃತಿಯ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು. ಟೀಮ್ ಇಂಡಿಯಾ ಹೆಡ್‌ ಕೋಚ್ ಗೌತಮ್ ಗಂಭೀರ್ ಕೂಡ ತಂಡದಲ್ಲಿನ ಸೂಪರ್‌ಸ್ಟಾರ್ ಸಂಸ್ಕೃತಿಯನ್ನು ಟೀಕಿಸಿದ್ದರು. ಇದೀಗ ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ಆಕ್ರೋಶ ಹೊರ ಹಾಕಿದ್ದಾರೆ.

Ravichandran Ashwin angry over superstar culture in Team India

ಟೀಮ್ ಇಂಡಿಯಾದಲ್ಲಿರುವ ಸೂಪರ್‌ಸ್ಟಾರ್ ಸಂಸ್ಕೃತಿಯನ್ನು ರವಿಚಂದ್ರನ್ ಅಶ್ವಿನ್ ಟೀಕಿಸಿದ್ದಾರೆ. ಭಾರತ ತಂಡ ಕ್ರಿಕೆಟಿಗರು ದೇವರಲ್ಲಿ ನಂಬಿಕೆ ಇಡುವುದನ್ನು ನಿಲ್ಲಿಸಿ ಸರಳವಾಗಿ ಆಡಬೇಕು. ಆಗ ಅವರು ಸ್ಥಿರವಾಗಿ ನಿಲ್ಲುತ್ತಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಸ್ಟಾರ್ ಆಟಗಾರರು ಗಳಿಸಿದ ಶತಕಗಳನ್ನು ಸಾಮಾನ್ಯ ಶತಕಗಳಾಗಿ ತೆಗೆದುಕೊಳ್ಳಬೇಕು. ಏಕೆಂದರೆ ಅವರು ಈಗಾಗಲೇ ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಸಾಧಿಸಿದ್ದಾರೆ ಎಂದು ರವಿಚಂದ್ರನ್ ಅಶ್ವಿನ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಅಶ್ವಿನ್ ತಮ್ಮ ಹಿಂದಿ ಯೂಟ್ಯೂಬ್ ಚಾನೆಲ್ ಟೀಮ್ ಇಂಡಿಯಾದಲ್ಲಿರುವ ಸೂಪರ್‌ಸ್ಟಾರ್ ಸಂಸ್ಕೃತಿ ಬಗ್ಗೆ ಮಾತನಾಡಿದ್ದಾರೆ. ನೀವು ರೋಹಿತ್ ಶರ್ಮಾ ಅಥವಾ ವಿರಾಟ್ ಕೊಹ್ಲಿ ಆಗಿದ್ದರೆ, ನೀವು ಈಗಾಗಲೇ ನಿಮ್ಮ ವೃತ್ತಿಜೀವನದಲ್ಲಿ ಬಹಳಷ್ಟು ಸಾಧಿಸಿದ್ದೀರಿ. ಅಂತಹ ಪರಿಸ್ಥಿತಿಯಲ್ಲಿ, ಇನ್ನೊಂದು ಶತಕ ಗಳಿಸುವುದು ನಿಮ್ಮ ಸಾಧನೆಯಾಗಲು ಸಾಧ್ಯವಿಲ್ಲ. ಇದು ಸಾಮಾನ್ಯ ಮತ್ತು ಈ ಸಾಧನೆಗಳಿಗಿಂತ ದೊಡ್ಡ ಗುರಿಗಳು ಇರಬೇಕು ಎಂದು ಅಶ್ವಿನ್ ಹೇಳಿದ್ದಾರೆ.

ಭಾರತೀಯ ಕ್ರಿಕೆಟ್‌ನಲ್ಲಿ ವಿಷಯಗಳನ್ನು ಸಾಮಾನ್ಯ ಸ್ಥಿತಿಗೆ ತರುವ ಅವಶ್ಯಕತೆಯಿದೆ. ಭಾರತೀಯ ಕ್ರಿಕೆಟ್ ತಂಡದಲ್ಲಿರುವ ಈ ಸೂಪರ್‌ಸ್ಟಾರ್ ಸಂಸ್ಕೃತಿ ಮತ್ತು ಸೂಪರ್ ಸೆಲೆಬ್ರಿಟಿ ಸಂಸ್ಕೃತಿಯನ್ನು ನಾವು ಜಯಿಸಬೇಕು. ನಾವು ಕ್ರಿಕೆಟಿಗರು, ನಟರು ಅಥವಾ ಸೂಪರ್‌ಸ್ಟಾರ್‌ಗಳಲ್ಲ. ಸಾಮಾನ್ಯ ಮನುಷ್ಯನು ನಮ್ಮನ್ನು ತನ್ನ ಹತ್ತಿರದಿಂದ ಕಂಡುಕೊಳ್ಳುವ ಮತ್ತು ನಮ್ಮೊಂದಿಗೆ ತನ್ನನ್ನು ಹೋಲಿಸಿಕೊಳ್ಳುವ ರೀತಿಯಲ್ಲಿ ನಾವು ಇರಬೇಕು ಎಂದು ಅಶ್ವಿನ್ ತಿಳಿಸಿದ್ದಾರೆ.

Story first published: Sunday, February 16, 2025, 10:13 [IST]
Other articles published on Feb 16, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+