For Quick Alerts
ALLOW NOTIFICATIONS  
For Daily Alerts
 

ಸ್ಪಿನ್ನರ್‌ ಅಶ್ವಿನ್‌ಗೆ ಪ್ರಧಾನಿ ಮೋದಿ ಭಾವುಕ ಪತ್ರ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐದು ಟೆಸ್ಟ್‌ ಪಂದ್ಯಗಳ ಬಾರ್ಡರ್ ಗವಾಸ್ಕರ್ ಸರಣಿ ನಡೆಯುತ್ತಿದೆ. ಈ ಸರಣಿಯ ಮೂರನೇ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯಿತು. ಈ ಪಂದ್ಯದ ಬಳಿಕ ಟೀಮ್ ಇಂಡಿಯಾದ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇವರ ದಿಢೀರ್ ನಿವೃತ್ತಿ ನಿಜಕ್ಕೂ ಭಾರತದ ಕ್ರಿಕೆಟ್‌ ಅಭಿಮಾನಿಗಳಿಗೆ ಬೇಸರ ತರಿಸಿದೆ. ಅಶ್ವಿನ್‌ ಅವರ ನಿವೃತ್ತಿ ನಿರ್ಧಾರದಿಂದ ಸ್ವತಃ ದೇಶದ ಪ್ರಧಾನಿ ನರೇಂದ್ರ ಮೋದಿ ಕೂಡ ಬೇಸರಗೊಂಡಿದ್ದಾರೆ.

ಟೀಮ್ ಇಂಡಿಯಾದ ಸ್ಪಿನ್ ಬೌಲರ್‌ ರವಿಚಂದ್ರನ್‌ ಅಶ್ವಿನ್‌ ನಿವೃತ್ತಿಯಾಗುತ್ತಿದ್ದಂತೆ ಪಿಎಂ ಮೋದಿ ಪತ್ರ ಬರೆದು, ಶುಭ ಹಾರೈಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ನಿಮ್ಮ ನಿರ್ಧಾರ ಭಾರತ ಅಷ್ಟೇ ಅಲ್ಲ, ಬೇರೆ ದೇಶಗಳ ಅಭಿಮಾನಿಗಳನ್ನು ಚಕಿತ ಗೊಳಿಸಿದೆ. ಮೈದಾನದಲ್ಲಿ ಆಫ್‌ ಬ್ರೇಕ್‌ ಮಾಡಿ ಎಲ್ಲರನ್ನು ಕಾಡುವ ನೀವು, ಕೇರಂ ಬೌಲ್ ಮಾಡಿ ಎಲ್ಲರನ್ನೂ ಬೋಲ್ಡ್ ಮಾಡಿದ್ದೀರಾ ಎಂದು ಮೋದಿ ತಿಳಿಸಿದ್ದಾರೆ.

Ravichandran Ashwin Announces Retirement from International Cricket PM Modi Expresses Gratitude

ನಿವೃತ್ತಿ ಪಡೆಯುವ ನಿರ್ಧಾರ ನಿಮಗೆ ಸುಲಭವಾಗಿರಲಿಲ್ಲ. ಇಷ್ಟು ವರ್ಷಗಳ ಕಾಲ ಟೀಮ್ ಇಂಡಿಯಾದ ಭಾಗವಾಗಿದ್ದೀರಿ. ನಿಮ್ಮ ಅದ್ಭುತ ವೃತ್ತಿಜೀವನಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನೀವು ನಿಶ್ಚಿತವಾಗಿ ನಿಮ್ಮ 99 ಸಂಖ್ಯೆಯ ಜೆರ್ಸಿಯನ್ನು ಬಹಳಷ್ಟು ಕಳೆದುಕೊಳ್ಳಲಿದ್ದೀರಿ. ಕ್ರಿಕೆಟ್ ಪ್ರೇಮಿಗಳು ಅವರಿಂದ ಇನ್ನಷ್ಟು ಶ್ರೇಷ್ಠ ಪ್ರದರ್ಶನಗಳ ನಿರೀಕ್ಷೆ ಹೊಂದಿರುವ ವೇಳೆ, ಇದೊಂದು ಅಚ್ಚರಿಯ ನಿರ್ಧಾರವಾಗಿದೆ. ನೀವು ಬರೀ ಬೌಲರ್‌ ಆಗಿ ಅಷ್ಟೇ ಅಲ್ಲ ಹಾಗೂ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ನೆರವಾಗಿದ್ದೀರಿ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಅಶ್ವಿನ್‌ ನೀವು ಪಂದ್ಯ ಒಂದರಲ್ಲಿ ಶತಕ ಬಾರಿಸಿ ಐದು ವಿಕೆಟ್ ಕಬಳಿಸುವ ಮೂಲಕ ಹಲವು ಬಾರಿ ಆಲ್ ರೌಂಡ್ ಸಾಮರ್ಥ್ಯ ತೋರಿದ್ದೀರಿ. ಬ್ಯಾಟ್‌ನಿಂದಲೂ ನೀವು ನಮ್ಮ ದೇಶಕ್ಕೆ ಅನೇಕ ಮರೆಯಲಾಗದ ಸ್ಮರಣೀಯ ಇನಿಂಗ್ಸ್‌ಗಳನ್ನು ಕಟ್ಟಿದ್ದೀರಿ. ನೀವು ನಿಮ್ಮ ತಾಯಿ ಆಸ್ಪತ್ರೆ ಸೇರಿದ್ದಾಗಲೂ, ಮೈದಾನದಲ್ಲಿ ಕಾಣಿಸಿಕೊಂಡಿರಿ. ಇನ್ನು ಚೆನ್ನೈನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಾಗ ಮತ್ತು ನಿಮ್ಮ ಕುಟುಂಬವನ್ನು ಸಂಪರ್ಕಿಸಲು ನಿಮಗೆ ಸಾಧ್ಯವಾಗಿರಲಿಲ್ಲ. ಇದರ ಹೊರತಾಗಿಯೂ, ನೀವು ದಕ್ಷಿಣ ಆಫ್ರಿಕಾ ವಿರುದ್ಧ ಆಡಿ ನಿಮ್ಮ ಬದ್ಧತೆಯನ್ನು ತೋರಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ಅಶ್ವಿನ್ ದಾಖಲೆ

ಅಶ್ವಿನ್‌ ಟೀಮ್ ಇಂಡಿಯಾದ ಯಶಸ್ವಿ ಟೆಸ್ಟ್‌ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್‌ ಪಡೆದ ಭಾರತದ ದಿಗ್ಗಜ ಅನಿಲ್ ಕುಂಬ್ಳೆ ಬಳಿಕ, ಅಶ್ವಿನ್‌ಗೆ ಎರಡನೇ ಸ್ಥಾನ. ಇವರ ಬುಟ್ಟಿಯಲ್ಲಿ 765 ಅಂತರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿದ್ದಾರೆ. ಅಶ್ವಿನ್ ಟೀಮ್ ಇಂಡಿಯಾ ಪರ 106 ಟೆಸ್ಟ್, 116 ಏಕದಿನ ಮತ್ತು 65 ಟಿ 20 ಪಂದ್ಯಗಳಲ್ಲಿ ಆಡಿದ್ದಾರೆ. ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 537, ಏಕದಿನದಲ್ಲಿ 156 ಮತ್ತು ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 72 ವಿಕೆಟ್‌ಗಳನ್ನು ಪಡೆದಿದ್ದಾರೆ.

Story first published: Sunday, December 22, 2024, 9:49 [IST]
Other articles published on Dec 22, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+