Ravichandran Ashwin: ವಿದಾಯದ ವೇಳೆ ಅಶ್ವಿನ್ ಹೇಳಿದ್ದೇನು? ಹಲವು ಆಟಗಾರರಿಗೆ ಧನ್ಯವಾದ ತಿಳಿಸಿದ್ದು ಏಕೆ?
ಟೀಮ್ ಇಂಡಿಯಾದ ಸ್ಪಿನ್ ಜಾದುಗಾರ ರವಿಚಂದ್ರನ್ ಅಶ್ವಿನ್ ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯ ಬಳಿಕ ಅಶ್ವಿನ್ ಈ ಘೋಷಣೆ ಮಾಡಿದ್ದಾರೆ. ಅಶ್ವಿನ್ ಟೀಮ್ ಇಂಡಿಯಾ ನಾಯಕನ ಜೊತೆಗೆ ಪತ್ರಿಕಾಗೋಷ್ಠಿಗೆ ಬಂದು ತಮ್ಮ ವಿದಾಯ ಸಂದೇಶವನ್ನು ತಿಳಿಸಿದರು. ಈ ವೇಳೆ ಭಾರತದ ಅನುಭವಿ ಸ್ಪಿನ್ ಬೌಲರ್ ಭಾವುಕರಾದರು. ಅಶ್ವಿನ್ ನಿವೃತ್ತಿಯ ವೇಳೆ ಯಾರಿಗೆಲ್ಲಾ ಧನ್ಯವಾದ ತಿಳಿಸಿದರು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಡ್ರಾಗೊಂಡ ನಂತರ, ಅಶ್ವಿನ್ ಭಾರತೀಯ ಕ್ರಿಕೆಟ್ ತಂಡದ ಜೊತೆ ಇದು ನನ್ನ ಕೊನೆಯ ದಿನ ಎಂದು ಭಾವುಕರಾಗಿ ತಿಳಿಸಿದರು. ಅಲ್ಲದೆ ಯಾವುದೇ ಪ್ರಶ್ನೆಗಳಿಗೆ ಅವಕಾಶ ಇಲ್ಲ ಎಂಬುದನ್ನು ಕಡ್ಡಿ ಮುರಿದಂತೆ ತಿಳಿಸಿ, ತಮ್ಮ ಮನಸ್ಸಿನಲ್ಲಿನ ಭಾವನೆಗಳನ್ನು ಪಟಪಟನೆ ಹೇಳಿ ಹೊರಟರು.

ಅಶ್ವಿನ್ ಹೇಳಿದ್ದೇನು?
ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಆಟಗಾರನಾಗಿ ಇದು ಲಾಸ್ಟ್ ಮ್ಯಾಚ್. ನಾನು ಕ್ರಿಕೆಟ್ ಎಲ್ಲ ಮಾದರಿಯಿಂದಲೂ ನಿವೃತ್ತಿ ಹೊಂದುತ್ತಿದ್ದೇನೆ. ಕ್ರಿಕೆಟಿಗನಾಗಿ ಉತ್ತಮ ವೃತ್ತಿ ಜೀವನವನ್ನು ಅನುಭವಿಸಿದ್ದೇನೆ. ಮುಂದಿನ ದಿನಗಳಲ್ಲಿ ಬಹುಶಃ ಕ್ಲಬ್ ಮಟ್ಟದ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರೆಸುತ್ತೇನೆ ಎಂದು ಅಶ್ವಿನ್ ತಿಳಿಸಿದ್ದಾರೆ.
ಈ ಕ್ರಿಕೆಟ್ ಜೀವನದಲ್ಲಿ ನಾನು ಹಲವು ಉತ್ತಮ ಕ್ಷಣಗಳನ್ನು ಕಂಡಿದ್ದೇನೆ. ಇದಕ್ಕೆ ಬಿಸಿಸಿಐ ಹಾಗೂ ನನ್ನ ಸಹ ಆಟಗಾರರಿಗೆ ಧನ್ಯವಾದಗಳು. ಈ ತಂಡದೊಂದಿಗೆ ನನಗೆ ಉತ್ತಮ ನೆನಪುಗಳು ಇವೆ. ರೋಹಿತ್, ವಿರಾಟ್ ಅವರೊಂದಿಗೆ ಆಡಿದ ಆಟವನ್ನು ನೆನಪಿಸಿಕೊಳ್ಳುತ್ತೇನೆ. ಇನ್ನು ಮುಂದೆ ನಾನು ತಂಡದಲ್ಲಿ ಇರುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ನಾನು ಇದರ ಹೊರತಾಗಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ ಅವರಿಗೂ ವಿಶೇಷ ಧನ್ಯವಾದಗಳು. ಇವರು ನನ್ನ ಎಸೆತದಲ್ಲಿ ಉತ್ತಮ ಕ್ಯಾಚ್ ಪಡೆದಿದ್ದಾರೆ. ಇದು ನಿಜಕ್ಕೂ ಭಾವನಾತ್ಮಕ ಕ್ಷಣ ಎಂದು ಅಶ್ವಿನ್ ಹೇಳಿದ್ದಾರೆ.
38 ವರ್ಷದ ರವಿಚಂದ್ರನ್ ಅಶ್ವಿನ್ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 106 ಪಂದ್ಯಗಳಲ್ಲಿ, 537 ವಿಕೆಟ್ ಪಡೆದಿದ್ದಾರೆ. ಅಶ್ವಿನ್ ಆರು ಶತಕ ಮತ್ತು 14 ಅರ್ಧ ಶತಕಗಳನ್ನು ಬಾರಿಸಿ ತಂಡಕ್ಕೆ ಆಧಾರವಾಗಿದ್ದಾರೆ.
ಗಂಭೀರ್ ಹೇಳಿದ್ದೇನು?
ಟೀಮ್ ಇಂಡಿಯಾದ ಕೋಚ್ ಗೌತಮ್ ಗಂಬೀರ್ ಅವರು ಸ್ಪಿನ್ ಬೌಲರ್ ರವಿ ಚಂದ್ರನ್ ಅಶ್ವಿನ್ ಅವರ ವಿದಾಯದ ಬಗ್ಗೆ ತುಟಿ ಬಿಚ್ಚಿದ್ದಾರೆ. ಒಬ್ಬ ಯುವ ಬೌಲರ್‌ನನ್ನು ಆಧುನಿಕ ಕ್ರಿಕೆಟ್ ಜಗತ್ತಿನ ದಿಗ್ಗಜನ ರೀತಿ ಬೆಳೆದು ಬಂದ ರೀತಿಯನ್ನು ನೋಡಿದ್ದೇವೆ. ಇದು ನಮ್ಮ ಸೌಭಾಗ್ಯ. ಮುಂದಿನ ಪೀಳಿಗೆಯ ಆಟಗಾರರು ನಾನು ಅಶ್ವಿನ್ ನೋಡಿ ಕ್ರಿಕೆಟ್ ಆಡಲು ಆರಂಭಿಸಿದೆ ಎಂದು ಹೇಳುತ್ತಾರೆ. ನಿಶ್ಚಿತವಾಗಿ ನಿಮ್ಮ ಅನುಪಸ್ಥಿತಿ ತಂಡಕ್ಕೆ ಬಹುವಾಗಿ ಕಾಡಲಿದೆ ಎಂದು ಗಂಭೀರ್ ಸಾಮಾಜಿಕ ತಾಣದಲ್ಲಿ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications