Ashwin IPL Retirement: ಐಪಿಎಲ್‌ಗೂ ಅಶ್ವಿನ್ ನಿವೃತ್ತಿ
ಬಾರ್ಡರ್-ಗವಾಸ್ಕರ್ ಸರಣಿಯ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ರವಿಚಂದ್ರನ್ ಅಶ್ವಿನ್ ಅವರು ಈಗ ಐಪಿಎಲ್‌ಗೂ ಗುಡ್ ಬಾಯ್ ಹೇಳಿದ್ದಾರೆ. ಈ ಬಗ್ಗೆ ಅಶ್ವಿನ್ ಸಾಮಾಜಿಕ ತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ ಇದೇ ವೇಳೆ ಅಶ್ವಿನ್ ಇನ್ನು ವಿಶ್ವದ ಬೇರೆ ಬೇರೆ ಲೀಗ್‌ಗಳಲ್ಲೂ ಆಡುವುದನ್ನು ಕಾಣಬಹುದಾಗಿದೆ. ಅಶ್ವಿನ್ ಐಪಿಎಲ್‌ನಲ್ಲಿ ಐದು ಫ್ರಾಂಚೈಸಿ ತಂಡಗಳ ಪರ ಆಡಿದ್ದರು. ಅಲ್ಲದೆ ನಾಯಕರಾಗಿಯೂ ಸೈ ಎನಿಸಿಕೊಂಡಿದ್ದರು. ಕಳೆದ ಆವೃತ್ತಿಯಲ್ಲಿ ಇವರನ್ನು ಚೆನ್ನೈ ಸೂಪರ್ ಕಿಂಗ್ಸ್ ಹರಾಜಿನಲ್ಲಿ ಖರೀದಿಸಿತ್ತು. ಆದರೆ ಇವರು ಕಳೆದ ಬಾರಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಅಲ್ಲದೆ ಬೆರಳೇಣಿಕೆ ಪಂದ್ಯಗಳಲ್ಲಿ ಆಡಿದ್ದರು.
ಅಶ್ವಿನ್ ಮಾಡಿರುವ ಟ್ವೀಟ್‌ನಲ್ಲಿ ವಿಶೇಷ ಆರಂಭ ಎಂದು ಬರೆದಿದ್ದಾರೆ. ಪ್ರತಿಯೊಂದು ಅಂತ್ಯ ಸಹ ಹೊಸ ಆರಂಭಕ್ಕೆ ನಾಂದಿ ಎಂದು ಹೇಳಲಾಗುತ್ತದೆ. ಐಪಿಎಲ್ ಕ್ರಿಕೆಟಿಗನಾಗಿ ನನ್ನ ಸಮಯ ಇಂದಿಗೆ ಕೊನೆಗೊಳ್ಳುತ್ತದೆ. ಆದರೆ ವಿಶ್ವದ ಬೇರೆ ಬೇರೆ ಲೀಗ್‌ಗಳಲ್ಲಿ ಇನ್ನು ಪ್ರದರ್ಶನ ಮುಂದುವರೆಯಲಿದೆ. ವರ್ಷಗಳ ಕಾಲ ನಾನು ಹೊಂದಿದ್ದ ಉತ್ತಮ ನೆನಪು ಹಾಗೂ ಸಂಬಂಧಗಳಿಗೆ ಫ್ರಾಂಚೈಸಿಗಳಿಗೆ ಧನ್ಯವಾದಗಳು. ಈ ವರೆಗೆ ಸಹಕಾರ ನೀಡಿದ ಬಿಸಿಸಿಐ ಹಾಗೂ ಐಪಿಎಲ್‌ಗೆ ಧನ್ಯವಾದ. ಮುಂದಿನ ದಿನಗಳನ್ನು ಆನಂದಿಸಲು ಎದುರು ನೋಡುತ್ತಿದ್ದೇನೆ ಎಂದು ಅಶ್ವಿನ್ ಬರೆದುಕೊಂಡಿದ್ದಾರೆ.

ಅಶ್ವಿನ್ ತಮ್ಮ ಪಿರ್ಕಿ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಾಡಿದ ಬೌಲರ್. ಇವರು ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಐದನೇ ಬೌಲರ್. ಇವರು ಚೆನ್ನೈ ಸೂಪರ್ ಕಿಂಗ್ಸ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಆಗಿದ್ದಾರೆ. ಅಶ್ವಿನ್ ಸಿಎಸ್‌ಕೆ ಪರ 130 ಪಂದ್ಯಗಳಲ್ಲಿ 127 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಡ್ವೇನ್ ಬ್ರಾವೋ (154 ವಿಕೆಟ್) ಅಗ್ರಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ರವೀಂದ್ರ ಜಡೇಜಾ ಇದ್ದು ಇವರು 152 ವಿಕೆಟ್‌ಗಳನ್ನು ಪಡೆದಿದ್ದಾರೆ.
ಅಶ್ವಿನ್ ತಮ್ಮ ನೇರ ನುಡಿಗಳಿಗೆ ಹೆಸರುವಾಸಿ. ಇತ್ತೀಚಿಗೆ ಇವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಚೆನ್ನೈ ತಂಡ ಡೆವಾಲ್ಡ್ ಬ್ರೆವಿಸ್ ಅವರನ್ನು ಹೆಚ್ಚಿನ ಹಣ ನೀಡಿ ಒಪ್ಪಂದ ಮಾಡಿಕೊಂಡಿತ್ತು ಎಂದು ಬಹಿರಂಗ ಪಡಿಸಿದ್ದರು. ಇದು ಐಪಿಎಲ್ ನಿಯಮ ಉಲ್ಲಂಘನೆಯಾಗಿದೆ. ಈ ಬಗ್ಗೆ ಸಿಎಸ್‌ಕೆ ಸ್ಪಷ್ಟನೇ ನೀಡಿದ ಬಳಿಕ ಅಶ್ವಿನ್ ತಾವು ಈ ಬಗ್ಗೆ ವಿವಾದ ಸೃಷ್ಟಿಸುವುದಲ್ಲ ಚೆನ್ನೈನ ಮಾಸ್ಟರ್‌ಸ್ಟ್ರೋಕ್ ತಿಳಿಸುವುದಿತ್ತು ಎಂದು ಸ್ಪಷ್ಟನೇ ಸಹ ನೀಡಿದ್ದರು.
ಐಪಿಎಲ್‌ನಲ್ಲಿ ಅಶ್ವಿನ್ ಸಾಧನೆ
ಆರ್ ಅಶ್ವಿನ್ ಐಪಿಎಲ್‌ನ ಆಡಿದ ಪ್ರತಿಭಾವಂತ ಬೌಲರ್‌ಗಳಲ್ಲಿ ಒಬ್ಬರು. ಇವರು ಒಟ್ಟು 16 ಸೀಸನ್ ಗಳಲ್ಲಿ ಆಡಿದ್ದಾರೆ. ಇವರು ಒಟ್ಟು 221 ಪಂದ್ಯಗಳನ್ನು ಆಡುವ ಅವಕಾಶವನ್ನು ಪಡೆದಿದ್ದು 187 ವಿಕೆಟ್‌ಗಳನ್ನು ಕಬಳಿಸಿದರು. ಇನ್ನು ಇವರು ಬ್ಯಾಟಿಂಗ್‌ನಲ್ಲೂ ಕಮಾಲ್ ಮಾಡಿದ ಆಟಗಾರು. ಅಶ್ವಿನ್ ಐಪಿಎಲ್‌ನಲ್ಲಿ 833 ರನ್ ಸಿಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications