R Ashwin: ಆರ್‌ಸಿಬಿ ವೇಗಿ ಹಿಂದಿಕ್ಕಿದ ದಾಖಲೆ ಸೃಷ್ಟಿಸಿದ ಅಶ್ವಿನ್
ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರನ್ನು ಹಿಂದಿಕ್ಕಿದ್ದಾರೆ. ನಿತೀಶ್ ರಾಣಾ ಅವರನ್ನು ಔಟ್ ಮಾಡಿ ಡ್ವೇನ್ ಬ್ರಾವೋ ಅವರೊಂದಿಗೆ ರವಿಚಂದ್ರನ್ ಅಶ್ವಿನ್ ಜಂಟಿ ಮೂರನೇ ಸ್ಥಾನವನ್ನು ತಲುಪಿದ್ದಾರೆ. ಭಾನುವಾರ ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ 2025 ರ 11 ನೇ ಪಂದ್ಯದಲ್ಲಿ ಅಶ್ವಿನ್ ಈ ಸಾಧನೆ ಮಾಡಿದ್ದಾರೆ.
ರಾಜಸ್ಥಾನ ರಾಯಲ್ ವಿರುದ್ಧದ ಪಂದ್ಯಕ್ಕೂ ಮುನ್ನ ಅಶ್ವಿನ್ 214 ಐಪಿಎಲ್ ಪಂದ್ಯಗಳಲ್ಲಿ 182 ವಿಕೆಟ್ ಪಡೆದಿದ್ದರು. ಇದರೊಂದಿಗೆ ಅವರು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಜಂಟಿಯಾಗಿ ನಾಲ್ಕನೇ ಸ್ಥಾನದಲ್ಲಿದ್ದರು. ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ಬ್ಯಾಟರ್ ನಿತೀಶ್ ರಾಣಾ ಅವರನ್ನು ಔಟ್ ಮಾಡುವ ಮೂಲಕ ಅಶ್ವಿನ್ ಐಪಿಎಲ್‌ನಲ್ಲಿ 183 ವಿಕೆಟ್ ಪಡೆದ ಸಾಧನೆ ಮಾಡಿದರು. ಇದಲ್ಲದೆ, ಐಪಿಎಲ್ ಇತಿಹಾಸದಲ್ಲಿ 182 ವಿಕೆಟ್‌ಗಳನ್ನು ಹೊಂದಿರುವ ಭುವನೇಶ್ವರ್ ಕುಮಾರ್ ಅವರನ್ನು ಹಿಂದಿಕ್ಕಿದರು.

ರಿಯಾನ್ ಪರಾಗ್ ಮುನ್ನಡೆಸಿದ ರಾಜಸ್ಥಾನ ರಾಯಲ್ಸ್ ತಂಡದ ಮೊದಲ ಇನ್ನಿಂಗ್ಸ್‌ನ 12ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಅಶ್ವಿನ್ ವಿಕೆಟ್ ಪಡೆದರು. ಚೆನ್ನೈ ಬೌಲರ್‍ಗಳಿಗೆ ನಡುಕ ಹುಟ್ಟಿಸಿ ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದ ನಿತೀಶ್ ರಾಣಾ ಅವರು ಅಶ್ವಿನ್ ಬೌಲಿಂಗ್‌ನಲ್ಲಿಯೂ ತಮ್ಮ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಈ ವೇಳೆ ಅಶ್ವಿನ್ ತಮ್ಮ ಬುದ್ಧಿವಂತಿಕೆ ತೋರಿ ಚೆಂಡನ್ನು ಹೊರಗೆ ಎಸೆದರು. ಮುಂದೆ ನುಗ್ಗಿ ಆಡಲು ಬಂದ ರಾಣಾ ಚೆಂಡನ್ನು ಮಿಸ್ ಮಾಡಿಕೊಂಂಡರು. ತಕ್ಷಣ ವಿಕೆಟ್ ಕೀಪರ್ ಎಂಎಸ್ ಧೋನಿ ಸ್ಟಂಪ್ ಮಾಡಿದರು. ಇದರೊಂದಿಗೆ ರಾಣಾ ಅವರ ಅದ್ಭುತ ಇನ್ನಿಂಗ್ಸ್ ಸ್ಟಂಪಿಂಗ್‌ನೊಂದಿಗೆ ಕೊನೆಗೊಂಡಿತು. ಅವರು 36 ಎಸೆತಗಳಲ್ಲಿ 10 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಿಂದ 81 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.
ನಿತೀಶ್ ರಾಣಾ ಜೊತೆಗೆ, ನಾಯಕ ರಿಯಾನ್ ಪರಾಗ್ ಕೂಡ ರಾಜಸ್ಥಾನ್ ರಾಯಲ್ಸ್ ತಂಡ ಕೊಡುಗೆ ನೀಡಿದರು. ರಾಜಸ್ಥಾನ ಸ್ಕೋರ್‌ಬೋರ್ಡ್‌ನಲ್ಲಿ ಉತ್ತಮ ರನ್ ಗಳಿಸಲು ಸಹಾಯ ಮಾಡಿದರು. ಅವರು 28 ಎಸೆತಗಳಲ್ಲಿ 37 ರನ್ ಗಳಿಸಿದರು. ಇದರಿಂದಾಗಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 182 ರನ್ ಗಳಿಸಿತು.
ಇದಕ್ಕೆ ಉತ್ತರವಾಗಿ, ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಸಿಎಸ್‌ಕೆ ಪರ ನಾಯಕ ರುತುರಾಜ್ ಗಾಯಕ್ವಾಡ್ 63 ರನ್‌ಗಳ ಹೋರಾಟ ವ್ಯರ್ಥವಾಯಿತು.
ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು
ಯುಜುವೇಂದ್ರ ಚಾಹಲ್ (ಭಾರತ) - 205
ಪಿಯೂಷ್ ಚಾವ್ಲಾ (ಭಾರತ) - 192
ಡ್ವೇನ್ ಬ್ರಾವೋ (ವೆಸ್ಟ್ ಇಂಡೀಸ್) - 183
ರವಿಚಂದ್ರನ್ ಅಶ್ವಿನ್ (ಭಾರತ) - 183
ಭುವನೇಶ್ವರ್ ಕುಮಾರ್ (ಭಾರತ) - 182
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications