ಅಶ್ವಿನ್ ಗೆ ಸಿಕ್ಕಿದೆ 2016ರ ಬಹು ದೊಡ್ಡ ಸಂಭ್ರಮದ ಕ್ಷಣ!
ಚೆನ್ನೈ, ಡಿಸೆಂಬರ್ 27: ಟೀಂ ಇಂಡಿಯಾದ ಸ್ಪಿನ್ನರ್ ಆರ್ ಅಶ್ವಿನ್ ಅವರು ವಿಶ್ವದ ನಂ.1 ಬೌಲರ್ ಆಗಿರಬಹುದು, ಐಸಿಸಿಯ ವಾರ್ಷಿಕ ಪ್ರಶಸ್ತಿಗಳಲ್ಲಿ ಡಬ್ಬಲ್ ಸಂಭ್ರಮ ಪಡೆದಿರಬಹುದು, ಅದರೆ, ಅಶ್ವಿನ್ ಗೆ ವರ್ಷದ ಅತ್ಯಂತ ಖುಷಿಯ ಕ್ಷಣಗಳು ಈಗ ಸಿಕ್ಕಿದೆ.
ಆರ್. ಅಶ್ವಿನ್ ಪತ್ನಿ ಅವರ ಪ್ರೀತಿ ಡಿಸೆಂಬರ್ 21ರಂದು 2ನೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.ಇಂಗ್ಲೆಂಡ್ ವಿರುದ್ಧದ ಚೆನ್ನೈ ಟೆಸ್ಟ್ ಗೆದ್ದು ಭಾರತ ತಂಡ 4-0ಯಿಂದ ಸರಣಿ ಜಯಿಸಿದ ಮರುದಿನವೇ ಅಶ್ವಿನ್ ತಂದೆಯಾದ ಸಂಭ್ರಮ ಆಚರಿಸಿದ್ದರು.

ಇಂಗ್ಲೆಂಡ್ ವಿರುದ್ಧದ ಚೆನ್ನೈ ಟೆಸ್ಟ್ ಗೆದ್ದು ಭಾರತ ತಂಡ 4-0ಯಿಂದ ಸರಣಿ ಜಯಿಸಿದ ಮರುದಿನವೇ ಅಶ್ವಿನ್ ತಂದೆಯಾದ ಸಂಭ್ರಮ ಆಚರಿಸಿದ್ದರು.ತಂದೆಯಾದ ವಿಷಯವನ್ನು 5 ದಿನಗಳ ಬಳಿಕ ಬಹಿರಂಗಗೊಳಿಸಲಾಗಿದೆ. ಅಶ್ವಿನ್ ಇತ್ತೀಚೆಗೆ ಐಸಿಸಿಯಿಂದ ವರ್ಷದ ಕ್ರಿಕೆಟಿಗ ಮತ್ತು ವರ್ಷದ ಟೆಸ್ಟ್ ಕ್ರಿಕೆಟಿಗೆ ಪ್ರಶಸ್ತಿಯ ಗೌರವಕ್ಕೂ ಪಾತ್ರರಾಗಿದ್ದಾರೆ.
ಸೋಮವಾರ ಕೊನೆಗೂ ಟ್ವಿಟರ್ನಲ್ಲಿ ಪ್ರೀತಿ ತಾಯಿಯಾದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. 2011ರ ನವೆಂಬರ್ 13ರಂದು ಅಶ್ವಿನ್-ಪ್ರೀತಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
2015ರ ಜೂನ್ನಲ್ಲಿ ಅವರಿಗೆ ಮೊದಲ ಹೆಣ್ಣುಮಗು ಅಖಿರಾ ಜನಿಸಿದ್ದಳು. ಮಕ್ಕಳ ಜತೆ ಹೆಚ್ಚು ಕಾಲ ಕಳೆಯಲು ಅಶ್ವಿನ್ ಅವರು ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ಬಯಸಿದ್ದಾರೆ ಎಂಬ ಸುದ್ದಿಯಿದೆ.
Story first published: Wednesday, January 3, 2018, 10:04 [IST]
Other articles published on Jan 3, 2018
Read in English: R Ashwin becomes proud father
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications