ಔಟಾಗದೆ ಅಚ್ಚರಿ ರೀತಿಯಲ್ಲಿ ಬಚಾವಾಗಿದ್ದ ಪ್ಯಾಟ್ ಕಮಿನ್ಸ್: ವೈರಲ್ ವಿಡಿಯೋ

ಅಡಿಲೇಡ್, ಡಿಸೆಂಬರ್ 7: ಆಸ್ಟ್ರೇಲಿಯಾ ಎದುರು 41 ರನ್ ಗಳಿಸುವ ವೇಳೆಗೆ 4 ವಿಕೆಟ್ ಕಳೆದು ಆಘಾತ ಅನುಭವಿಸಿದ್ದ ಭಾರತ, ಆಸೀಸ್ ಇನ್ನಿಂಗ್ಸ್ ನಲ್ಲಿ 87 ರನ್ ವೇಳೆಗೆ 4 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯೂ ಆಗಿದೆ. ಆದರೆ ಆಟದ ವೇಳೆ ಇನ್ನೊಂದು ಗಮ್ಮತ್ತಿನ ಸಂಗತಿ ನಡೆದಿದೆ.
ಶುಕ್ರವಾರ (ಡಿಸೆಂಬರ್ 7) ಪ್ರಥಮ ಇನ್ನಿಂಗ್ಸ್‌ಗೆ ಇಳಿದಿದ್ದ ಆಸ್ಟ್ರೇಲಿಯಾ ತಂಡದ ಆಟಗಾರ ಪ್ಯಾಟ್ ಕಮಿನ್ಸ್ ಅವರು ಆರ್ ಅಶ್ವಿನ್ ಓವರ್ ನಲ್ಲಿ ಔಟಾಗದೆ ಅಚ್ಚರಿ ರೀತಿಯಲ್ಲಿ ಬದುಕುಳಿದಿದ್ದರು. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ಓಡಾಡುತ್ತಿದೆ.
ಆರ್ ಅಶ್ವಿನ್ 73.4ನೇ ಓವರ್ ಎಸೆಯುವಾಗ ಎದುರಿನಲ್ಲಿ ಪ್ಯಾಟ್ ಕಮಿನ್ಸ್ ನಿಂತಿದ್ದರು. ಚಿಮ್ಮಿ ಬಂದ ಚೆಂಡಿಗೆ ಕಮಿನ್ಸ್ ಬ್ಯಾಟ್ ಬೀಸಿದರು. ಆದರೆ ಚೆಂಡು ಕಮಿನ್ಸ್ ಅಂಡಿನಡಿಯಿಂದ ಸಾಗಿ ಅತ್ತ ಎಲ್‌ಬಿ ಡಬ್ಲ್ಯೂ ಕೂಡ ಅನ್ನಿಸದೆ, ಇತ್ತ ಬೌಲ್ಡ್ ಕೂಡ ಅನ್ನಿಸದೆ ಕನ್ಫ್ಯೂಸ್ ಮಾಡಿತ್ತು.
ಬೌಲಿಂಗ್ ಮಾಡುತ್ತಿದ್ದ ಅಶ್ವಿನ್ ಅವರೂ ಕೀಪಿಂಗ್ ಮಾಡುತ್ತಿದ್ದ ರಿಷಬ್ ಪಂತ್ ಅವರೂ ಒಮ್ಮೆ ಚೆಂಡನ್ನೇ ದಿಟ್ಟಿಸಿ ಬಾಯಗಲಿಸಿ ನಿಂತುಬಿಟ್ಟರು. ಅತ್ತ ಕಾಮೆಂಟರಿ ಮಾಡುತ್ತಿದ್ದವರೂ ಬಾಲ್ ಎಗರಿದ ಪರಿಯನ್ನು ರಿಪ್ಲೆಯಲ್ಲಿ ವೀಕ್ಷಿಸಿ ನಕ್ಕರು. ಕಮಿನ್ಸ್ ಆಗ ಔಟಾಗದೆ ಬಚಾವಾಗಿದ್ದರು! ಆದರೆ 80.3ನೇ ಓವರ್ ನಲ್ಲಿ ಕಮಿನ್ಸ್ (10 ರನ್) ಬೂಮ್ರಾ ಎಸೆತಕ್ಕೆ ಎಲ್‌ಬಿ ಡಬ್ಲ್ಯೂ ಆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications