R Ashwin: ವಾಂಖೆಡೆಯಲ್ಲಿ ಚರಿತ್ರೆ ಸೃಷ್ಟಿಸುವ ಹೊಸ್ತಿಲಲ್ಲಿ ಅಶ್ವಿನ್
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯ ಕೊನೆಯ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನವೆಂಬರ್ 1 ರಿಂದ ಪ್ರಾರಂಭವಾಗಲಿದೆ. ಮೊದಲೆರಡು ಪಂದ್ಯಗಳಲ್ಲಿ ಭಾರತ ತಂಡವನ್ನು ಸೋಲಿಸಿರುವ ನ್ಯೂಜಿಲೆಂಡ್ ಟೆಸ್ಟ್ ಸರಣಿ ಗೆದ್ದು ಬೀಗಿದೆ.
ಮೊದಲು ಟೆಸ್ಟ್ ಪಂದ್ಯವನ್ನು ಬೆಂಗಳೂರಿನಲ್ಲಿ ಸೋತರೆ, ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ವಿರುದ್ಧ ನ್ಯೂಜಿಲೆಂಡ್ ಅದ್ಭುತ ಗೆಲುವು ದಾಖಲಿಸಿತು. ಇದೀಗ ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ತಪ್ಪಿಸಿಕೊಳ್ಳಲು ಕಣ್ಣಿಟ್ಟಿದ್ದರೆ, ಇನ್ನೊಂದೆಡೆ ಕಿವೀಸ್ ತಂಡ ಕೊನೆಯ ಪಂದ್ಯವನ್ನೂ ಗೆಲ್ಲುವ ನಿರೀಕ್ಷೆಯಲ್ಲಿ ಮೈದಾನಕ್ಕಿಳಿಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇತಿಹಾಸ ಸೃಷ್ಟಿಸಲು ತಯಾರಾಗಿದ್ದಾರೆ.

ಇತಿಹಾಸ ಸೃಷ್ಟಿಸಲಿರುವ ಅಶ್ವಿನ್
ವಾಂಖೆಡೆ ಸ್ಟೇಡಿಯಂನಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ ಆಗಲು ರವಿಚಂದ್ರನ್ ಅಶ್ವಿನ್ ಕೇವಲ ಒಂದು ವಿಕೆಟ್ ದೂರದಲ್ಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಅವರು ಈ ಸಾಧನೆ ಮಾಡುವ ಅವಕಾಶವನ್ನು ಹೊಂದಿದ್ದಾರೆ. ಪ್ರಸ್ತುತ, ಅಶ್ವಿನ್ ವಾಂಖೆಡೆಯಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದ ಟೀಮ್ ಇಂಡಿಯಾದ ಮಾಜಿ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರನ್ನು ಸರಿಗಟ್ಟಿದ್ದಾರೆ. ಇವರಿಬ್ಬರ ಹೆಸರಲ್ಲಿ ತಲಾ 38 ಟೆಸ್ಟ್ ವಿಕೆಟ್‌ಗಳಿವೆ. ಈ ಪಟ್ಟಿಯಲ್ಲಿ ಎರಡನೇ ಹೆಸರು ಕಪಿಲ್ ದೇವ್ ಅವರದಿದ್ದು, 28 ಟೆಸ್ಟ್ ವಿಕೆಟ್ ಪಡೆದಿದ್ದಾರೆ.
ಎರಡು ಟೆಸ್ಟ್ ಪಂದ್ಯಗಳಲ್ಲಿ ಅಶ್ವಿನ್ ಪ್ರದರ್ಶನ
ನ್ಯೂಜಿಲೆಂಡ್ ವಿರುದ್ಧ ಸರಣಿಯಲ್ಲಿ ಇದುವರೆಗೆ ಆಡಿರುವ 2 ಪಂದ್ಯಗಳಲ್ಲಿ ಅಶ್ವಿನ್ 6 ವಿಕೆಟ್ ಪಡೆದಿದ್ದಾರೆ. ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಕೇವಲ 1 ವಿಕೆಟ್ ಪಡೆದಿದ್ದರು. ಪುಣೆ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಉತ್ತಮ ಆರಂಭವನ್ನು ನೀಡಿದ್ದರು. ಆದರೆ ಕೇವಲ 3 ವಿಕೆಟ್‌ಗಳನ್ನು ಮಾತ್ರ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಇದಾದ ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಅಶ್ವಿನ್ 2 ವಿಕೆಟ್ ಉರುಳಿಸಿದ್ದರು. ಈಗ ಕೊನೆಯ ಟೆಸ್ಟ್ ಪಂದ್ಯ ವಾಂಖೆಂಡೆಯಲ್ಲಿ ನಡೆಯುತ್ತದ್ದು, ಅಶ್ವಿನ್ ಅವರಿಂದ ಉತ್ತಮ ಪ್ರದರ್ಶನವನ್ನು ಭಾರತ ನಿರೀಕ್ಷಿಸುತ್ತಿದೆ.
ವಾಂಖೆಡೆಯಲ್ಲಿ ಭಾರತದ ಟೆಸ್ಟ್ ದಾಖಲೆ
ವಾಂಖೆಡೆಯಲ್ಲಿ ಟೀಮ್ ಇಂಡಿಯಾ ಇದುವರೆಗೆ 26 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 12ರಲ್ಲಿ ಗೆದ್ದು, 7ರಲ್ಲಿ ಸೋತಿದೆ. 7 ಪಂದ್ಯಗಳು ಡ್ರಾಗೊಂಡಿವೆ. ಮತ್ತೊಂದೆಡೆ, ಕಿವೀಸ್ ಪಡೆ ಈ ಮೈದಾನದಲ್ಲಿ ಇದುವರೆಗೆ 3 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಒಂದರಲ್ಲಿ ಮಾತ್ರ ಗೆದ್ದಿದೆ. 2ರಲ್ಲಿ ಸೋಲನುಭವಿಸಿದೆ. 2021ರಲ್ಲಿ ಈ ಮೈದಾನದಲ್ಲಿ ಕೊನೆಯ ಬಾರಿಗೆ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಭಾರತ 372 ರನ್‌ಗಳ ಬೃಹತ್ ಅಂತರದಲ್ಲಿ ಜಯ ಸಾಧಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications