IND vs BAN: ಒಂದೇ ಸರಣಿಯಲ್ಲಿ ಎರಡು ದಾಖಲೆ ಅಳಿಸುವ ಕನಸಿನಲ್ಲಿ ಅಶ್ವಿನ್
ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್.. ತಮ್ಮ ಪರಿಣಾಮಕಾರಿ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಾಡಬಲ್ಲ ಬೌಲರ್.. ಇವರ ಬಿಗುವಿನ ದಾಳಿಯನ್ನು ಎದುರಿಸಲು ಬ್ಯಾಟರ್‌ಗಳು ಹೆಣಗಾಡುತ್ತಾರೆ. ಅದರಲ್ಲೂ ತವರಿನಲ್ಲಿ ಅಶ್ವಿನ್ ಹೆಚ್ಚು ಪರಿಣಾಮಕಾರಿ. ಭಾರತದ ಪಿಚ್‌ಗಳಲ್ಲಿ ಚೆಂಡನ್ನು ಬುಗರಿಯಂತೆ ತಿರುಗಿಸಬಲ್ಲ ಚತರು ಬೌಲರ್..
ಅಶ್ವಿನ್ ಅವರಿಗೆ ಸ್ಪಿನ್ ಪಿಚ್‌ಗಳು ಇದ್ದರೆ ಪರಿಣಾಮಕಾರಿ ಆಗಿ ಬೌಲಿಂಗ್ ಮಾಡಬಲ್ಲರು. ಇವರು ಎಸೆಯುವ ಆಫ್ ಸ್ಪಿನ್ ಹಾಗೂ ಕೇರಂ ಬೌಲ್‌ಗೆ ಉತ್ತರಿಸುವಲ್ಲಿ ಸ್ಟಾರ್ ಬ್ಯಾಟರ್‌ಗಳು ಕಂಗಾಲಾಗುತ್ತಾರೆ. ಭಾರತದಲ್ಲಿ ಟೆಸ್ಟ್ ಸರಣಿಗಳು ನಡೆದಾಗಲೆಲ್ಲಾ ಅಶ್ವಿನ್ ಟ್ರಂಪ್ ಕಾರ್ಡ್.. ಇವರು ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಆಟಗಾರ. ಕಳೆದ ಒಂದು ದಶಕದಲ್ಲಿ ಅಶ್ವಿನ್ ಭಾರತದಲ್ಲಿ ಹೆಚ್ಚು ಪರಿಣಾಮಕಾರಿ. ಸೆಪ್ಟಂಬರ್ 19 ರಿಂದ ಭಾರತದಲ್ಲಿ ನಡೆಯಲಿರುವ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಪ್ರಮುಖ ಪಾತ್ರ ವಹಿಸಲಿದ್ದಾರೆ.

ದಾಖಲೆಯ ಸನಿಹದಲ್ಲಿ ಅಶ್ವಿನ್
ಕೇರಂ ಸ್ಪೇಷಲಿಸ್ಟ್ ಬೌಲರ್ ಅಶ್ವಿನ್ ಈ ವರೆಗೆ ಬಾಂಗ್ಲಾ ವಿರುದ್ಧ 6 ಟೆಸ್ಟ್ ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದು, ಈ ವೇಳೆ ಒಟ್ಟು 23 ವಿಕೆಟ್ ಕಬಳಿಸಿದ್ದಾರೆ. ಬಾಂಗ್ಲಾ ವಿರುದ್ಧದ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಶ್ವಿನ್‌ಗೆ ಮೂರನೇ ಸ್ಥಾನ.
ಜಹೀರ್‌ಗೆ ಅಗ್ರಸ್ಥಾನ
ಬಾಂಗ್ಲಾದೇಶದ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯನ್ನು ನೋಡಿದರೆ, ಜಹೀರ್ ಖಾನ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಸ್ಟಾರ್ ವೇಗಿ ಬಾಂಗ್ಲಾ ವಿರುದ್ಧ 31 ವಿಕೆಟ್ ಕಬಳಿಸಿದ್ದಾರೆ. ಈ ಪಟ್ಟಿಯಲ್ಲಿ ಇಶಾಂತ್ ಶರ್ಮಾಗೆ ಎರಡನೇ ಸ್ಥಾನ. ಇವರು 25 ವಿಕೆಟ್ ಪಡೆದಿದ್ದಾರೆ. ಮುಂಬರುವ ಸರಣಿಯಲ್ಲಿ ಅಶ್ವಿನ್ ಅವರಿಗೆ ಈ ಸಾಧನೆಯನ್ನು ಮೀರುವ ಅವಕಾಶ ಇದೆ.

ಇನ್ನು ಎಷ್ಟು ವಿಕೆಟ್ ಬೇಕು?
ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯುವ ಎರಡು ಟೆಸ್ಟ್ ಪಂದ್ಯಗಳಲ್ಲಿ ಅಶ್ವಿನ್‌ಗೆ ಮಹತ್ವದ ಸಾಧನೆ ಮಾಡುವ ಅವಕಾಶ ಇದೆ. ಈ ಸರಣಿಯಲ್ಲಿ ಮೂರು ವಿಕೆಟ್ ಪಡೆಯುತ್ತಿದ್ದಂತೆ ಇಶಾಂತ್ ಶರ್ಮಾ ಹಾಗೂ 9 ವಿಕೆಟ್ ಪಡೆಯುತ್ತಿದ್ದಂತೆ ಜಹೀರ್ ಖಾನ್ ಅವರ ದಾಖಲೆಯನ್ನು ಅಳಿಸಿಹಾಕಬಲ್ಲರು. ಈ ಸಾಧನೆ ಮಾಡುವಲ್ಲಿ ಅಶ್ವಿನ್ ಯಶಸ್ವಿಯಾದರೆ ಬಾಂಗ್ಲಾದೇಶ ವಿರುದ್ಧ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಳ್ಳಲಿದ್ದಾರೆ.
ಅಶ್ವಿನ್ @ 500
ಅಶ್ವಿನ್ ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಎರಡನೇ ಬೌಲರ್. ಇವರು 2011ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದರು. ಅಲ್ಲಿಂದ ಇಲ್ಲಿಯವರೆಗೆ ಇವರು 516 ವಿಕೆಟ್ ಪಡೆದಿದ್ದಾರೆ. ಇನ್ನು ಬ್ಯಾಟಿಂಗ್‌ನಲ್ಲೂ ಇವರು ತಂಡಕ್ಕೆ ನೆರವಾಗಬಲ್ಲ ಪ್ಲೇಯರ್. ಇವರ ಬ್ಯಾಟ್‌ನಿಂದ ಒಟ್ಟು 5 ಶತಕಗಳು ಬಂದಿವೆ. ಟೆಸ್ಟ್‌ನಲ್ಲಿ ಒಟ್ಟು ಅಶ್ವಿನ್ 3309 ರನ್ ಸಿಡಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 156 ವಿಕೆಟ್ ಮತ್ತು ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 72 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಬಾಂಗ್ಲಾದೇಶ ವಿರುದ್ಧ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಭಾರತೀಯ ಬೌಲರ್ಸ್
ಜಹೀರ್ ಖಾನ್- 31 ವಿಕೆಟ್
ಇಶಾಂತ್ ಶರ್ಮಾ- 25 ವಿಕೆಟ್
ರವಿಚಂದ್ರನ್ ಅಶ್ವಿನ್- 23 ವಿಕೆಟ್
ಉಮೇಶ್ ಯಾದವ್ - 22 ವಿಕೆಟ್
ಇರ್ಫಾನ್ ಪಠಾಣ್- 18 ವಿಕೆಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications