For Quick Alerts
ALLOW NOTIFICATIONS  
For Daily Alerts
 

R Ashwin: ಆರು ದಾಖಲೆಯ ಮೇಲೆ ಅಶ್ವಿನ್‌ ಕಣ್ಣು

ಟೀಮ್ ಇಂಡಿಯಾದ ಸ್ಟಾರ್ ಅಲ್‌ರೌಂಡರ್‌ ರವಿಚಂದ್ರನ್‌ ಅಶ್ವಿನ್ಅವರು ಸದ್ಯ ಅಮೋಘ ಲಯದಲ್ಲಿದ್ದಾರೆ. ಇವರು ತಮ್ಮ ಧಮಾಕೆದಾರ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಿಂದ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದ ಅಶ್ವಿನ್‌, ಎರಡನೇ ಇನಿಂಗ್ಸ್‌ನಲ್ಲಿ ಆರು ವಿಕೆಟ್‌ ಕಬಳಿಸಿದ್ದರು. ಈಗ ಎರಡನೇ ಟೆಸ್ಟ್‌ಗೆ ಅಶ್ವಿನ್ ಸಿದ್ಧತೆ ನಡೆಸಿದ್ದಾರೆ.

ಟೀಮ್ ಇಂಡಿಯಾ ಹಾಗೂ ಬಾಂಗ್ಲಾದೇಶ ನಡುವಣ ಎರಡನೇ ಟೆಸ್ಟ್‌ ಕಾನ್ಪುರ್‌ದ ಗ್ರೀನ್ ಪಾರ್ಕ್‌ ಅಂಗಳದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ಭರದ ತಯಾರಿ ನಡೆಸಿವೆ. ಈ ಟೆಸ್ಟ್‌ನಲ್ಲಿ ಸ್ಪಿನ್‌ ಮಾಂತ್ರಿಕ ಅಶ್ವಿನ್‌ ಆರು ದಾಖಲೆಯನ್ನು ನಿರ್ಮಿಸುವ ಹುಮ್ಮಸ್ಸಿನಲ್ಲಿದ್ದಾರೆ. ಹಾಗಿದ್ದರೆ ಅಶ್ವಿನ್‌ ರಚಿಸಲಿರುವ ದಾಖಲೆಗಳು ಯಾವವು ಇಲ್ಲಿದೆ ವರದಿ.

Ravichandran Ashwin Poised to Break Six Test Records in Kanpur

100 ವಿಕೆಟ್‌ಗೆ ಹತ್ತಿರ

ಅಶ್ವಿನ್‌ ನಾಲ್ಕನೇ ಇನಿಂಗ್ಸ್‌ನಲ್ಲಿ ನೂರು ವಿಕೆಟ್‌ ಪಡೆಯುವ ಹೊಸ್ತಿಲಲ್ಲಿ ನಿಂತಿದ್ದಾರೆ. ಇವರು ಬಾಂಗ್ಲಾದೇಶದ ವಿರುದ್ಧ ಎರಡನೇ ಟೆಸ್ಟ್‌ನ ನಾಲ್ಕನೇ ಇನಿಂಗ್ಸ್‌ನಲ್ಲಿ ಒಂದು ವಿಕೆಟ್‌ ಪಡೆಯುವಲ್ಲಿ ಸಫಲರಾದಲ್ಲಿ ಈ ಸಾಧನೆ ಮಾಡುತ್ತಾರೆ. ಇಷ್ಟೇ ಅಲ್ಲದೆ ಈ ಸಾಧನೆ ಮಾಡಿದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಅಶ್ವಿನ್ ಪಾತ್ರರಾಗಲಿದ್ದಾರೆ.

ಮೂರು ವಿಕೆಟ್‌ ಪಡೆದರೆ ಮತ್ತೊಂದು ದಾಖಲೆ

ಎರಡನೇ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಅಶ್ವಿನ್‌ ಮೂರು ವಿಕೆಟ್‌ ಪಡೆಯುವಲ್ಲಿ ಸಫಲರಾದಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಸಾಧನೆ ಮಾಡಬಹುದು. ಈ ದಾಖಲೆ ಜಹೀರ್ ಖಾನ್‌ ಹೆಸರಿನಲ್ಲಿ ಇದೆ. ಜಹೀರ್‌ ಬಾಂಗ್ಲಾ ವಿರುದ್ಧ ಟೆಸ್ಟ್‌ನಲ್ಲಿ 31 ವಿಕೆಟ್‌ ಪಡೆದಿದ್ದಾರೆ.

ನಾಲ್ಕು ವಿಕೆಟ್‌ ಪಡೆದಲ್ಲಿ ಮತ್ತೊಂದು ಮೈಲಿಗಲ್ಲು

ಬಾಂಗ್ಲಾದೇಶದ ವಿರುದ್ಧ ಟೆಸ್ಟ್‌ ಪಂದ್ಯದಲ್ಲಿ ಅಶ್ವಿನ್‌ ನಾಲ್ಕು ವಿಕೆಟ್‌ ಪಡೆಯುವಲ್ಲಿ ಸಫಲರಾದರೆ, ಜೋಶ್‌ ಹ್ಯಾಜಲ್‌ವುಡ್‌ ದಾಖಲೆಯನ್ನು ಅಳಿಸಬಹುದು. ಈ ಸಾಲಿನ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ನಲ್ಲಿ ಜೋಶ್‌ ಹ್ಯಾಜಲ್‌ವುಡ್ 51 ವಿಕೆಟ್‌ ಪಡೆದಿದ್ದಾರೆ. ಅಶ್ವಿನ್‌ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, 48 ವಿಕೆಟ್‌ ಪಡೆದಿದ್ದಾರೆ. ಇನ್ನು ನಾಲ್ಕು ವಿಕೆಟ್‌ ಪಡೆದಲ್ಲಿ ಜೋಶ್‌ ದಾಖಲೆ ಮೀರಿ ನಿಲ್ಲಬಹುದು.

ಐದು ವಿಕೆಟ್‌ ಪಡೆದರೆ...

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಶ್ವಿನ್‌ ಮತ್ತೊಂದು ಮಹತ್ವದ ದಾಖಲೆ ನಿರ್ಮಿಸುವ ಹುಮ್ಮಸ್ಸಿನಲ್ಲಿದ್ದಾರೆ. ಇವರು ಬಾಂಗ್ಲಾದೇಶದ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಐದು ವಿಕೆಟ್‌ ಪಡೆದರೆ ಐದು ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದ ಪಟ್ಟಿಯಲ್ಲಿ ಶೇನ್‌ ವಾರ್ನ್‌ ಅವರನ್ನು ಹಿಂದಿಕ್ಕಬಹುದು. ಶೇನ್ ವಾರ್ನ್‌ ಹಾಗೂ ಅಶ್ವನ್‌ ತಲಾ 37 ಬಾರಿ ಐದು ವಿಕೆಟ್‌ ಪಡೆದಿದ್ದು, ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ.

ನಾಥನ್‌ ಲಿಯಾನ್ ದಾಖಲೆಯ ಮೇಲೆ ಕಣ್ಣು

ಒಟ್ಟಾರೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಅಶ್ವಿನ್‌ ಅವರು ಗರಿಷ್ಠ ವಿಕೆಟ್‌ ಪಡೆದ ಎರಡನೇ ಬೌಲರ್‌. ಒಂದು ವೇಳೆ ಎರಡನೇ ಟೆಸ್ಟ್‌ನಲ್ಲಿ ಅಶ್ವಿನ್‌ ಎಂಟು ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾದರೆ, ನಾಥನ್‌ ಲಿಯಾನ್ ದಾಖಲೆ ಅಳಿಸಿ ಹಾಕಬಹುದು. ನಾಥನ್‌ ಲಿಯಾನ್‌ 187 ವಿಕೆಟ್‌ ಪಡೆದು ಸಾಧನೆ ಮಾಡಿದ್ದಾರೆ. ಇನ್ನು ಅಶ್ವಿನ್‌ 180 ವಿಕೆಟ್‌ ಪಡೆದಿದ್ದಾರೆ.

ಇನ್ನು ಒಂಬತ್ತು ವಿಕೆಟ್‌ಗಳನ್ನು ಪಡೆಯುವಲ್ಲಿ ಸಫಲರಾದರೆ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಏಳನೇ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

Story first published: Wednesday, September 25, 2024, 15:16 [IST]
Other articles published on Sep 25, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+