For Quick Alerts
ALLOW NOTIFICATIONS  
For Daily Alerts
 

R. Ashwin: ಯುಎಇ ಟಿ20 ಲೀಗ್‌ನಲ್ಲಿ ಕಾಣಿಸಿಕೊಳ್ಳಲಿರುವ ಅಶ್ವಿನ್?

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ರವಿಚಂದ್ರನ್‌ ಅಶ್ವಿನ್ ಅವರು ಇತ್ತೀಚಿಗೆ ಐಪಿಎಲ್‌ಗೂ ನಿವೃತ್ತಿ ಘೋಷಿಸಿದ್ದಾರೆ. ಇವರು ಬಾರ್ಡರ್‌ ಗವಾಸ್ಕರ್‌ ಸರಣಿಯ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೂ ವಿದಾಯ ತಿಳಿಸಿದ್ದಾರೆ. ಹೀಗಾಗಿ ಇವರು ಇನ್ನು ವಿದೇಶಿ ಲೀಗ್‌ಗಳಲ್ಲೂ ಭಾಗವಹಿಸಲಿದ್ದಾರೆ. ಐಪಿಎಲ್‌ನಲ್ಲಿ ನಿವೃತ್ತಿ ಘೋಷಿಸುತ್ತಿದ್ದಂತೆ, ಅಶ್ವಿನ್‌ ಈ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ್ದರು. ಅಲ್ಲದೆ ವಿದೇಶಿ ಲೀಗ್‌ಗಳಲ್ಲಿ ಆಡಲು ಯೋಜಿಸುತ್ತಿರುವುದಾಗಿ ಸ್ಪಷ್ಟಪಡಿಸಿದರು.

ಕಳೆದ ಬಾರಿ ಸೌದಿಯಲ್ಲಿ ನಡೆದಿದ್ದ ಐಪಿಎಲ್‌ ಹರಾಜಿನಲ್ಲಿ ಅಶ್ವಿನ್‌ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಖರೀದಿಸಿತ್ತು. ಆದರೆ ಇವರಿಗೆ ಎಲ್ಲ ಪಂದ್ಯಗಳಲ್ಲಿ ಆಡುವ ಅವಕಾಶ ನೀಡಿರಲಿಲ್ಲ. ಅಲ್ಲದೆ ಇವರು ಫ್ರಾಂಚೈಸಿ ನಿಲುವಿನ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಸ್ಪಷ್ಟ ಪಡಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಇವರು ಐಪಿಎಲ್‌ಗೂ ನಿವೃತ್ತಿ ಘೋಷಿಸಿದ್ದರು. ಇವರು ಈಗ ಯುಎಇನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಟಿ20 ಲೀಗ್‌ನಲ್ಲಿ ಆಡುವ ಸಾಧ್ಯತೆ ಇದೆ.

Ravichandran Ashwin Puts Name Forward for UAE s T20 League Auction

ಯುಎಇ ಅಂತರರಾಷ್ಟ್ರೀಯ ಟಿ 20 ಲೀಗ್‌ನ ಮುಂದಿನ ಸೀಸನ್ ಡಿಸೆಂಬರ್ 2 ರಿಂದ ಜನವರಿ 4 ರವರೆಗೆ ನಡೆಯಲಿದ್ದು, ಈ ಟೂರ್ನಿಗೆ ಆಟಗಾರರ ಹರಾಜು ಸೆಪ್ಟಂಬರ್‌ 30 ರಂದು ನಡೆಯಲಿದೆ ಎಂದು ಕ್ರಿಕ್‌ಬಜ್‌ ವರದಿ ಮಾಡಿದೆ. ಅಶ್ವಿನ್ ಈ ಟಿ 20 ಲೀಗ್‌ನಲ್ಲಿ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಈ ಹರಾಜಿಗೆ ಅಶ್ವಿನ್‌ ತಮ್ಮ ಹೆಸರನ್ನು ನಮೂದಿಸಿಕೊಳ್ಳಬಹುದಾಗಿದೆ. ಆರಂಭದಲ್ಲಿ ಡ್ರಾಫ್ಟ್‌ ಮೂಲಕ ಆಟಗಾರರನ್ನು ತಂಡಗಳಿಗೆ ಸೇರಿಸಲಾಗಿತ್ತು. ಆದರೆ ಈ ಸೀಸನ್‌ನಿಂದ ಹರಾಜು ನಡೆಸಲು ತೀರ್ಮಾನಿಸಲಾಗಿದೆ.

ಯುಎಇ ಲೀಗ್‌

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ಅಶ್ವಿನ್ ತಮ್ಮ ಪಿರ್ಕಿ ಮೋಡಿಯಿಂದ ಅಭಿಮಾನಿಗಳ ಮನ ಕದ್ದ ಆಟಗಾರ. ಇವರು ಈಗಾಗಲೇ ಐಪಿಎಲ್‌ನಲ್ಲಿ ಆಡು ತಂಡಗಳ ಪರ ಆಡಿದ್ದಾರೆ. ಅಲ್ಲದೆ ಹಲವು ತಂಡಗಳನ್ನು ಟೂರ್ನಿಯಲ್ಲಿ ಮುನ್ನಡೆಸಿದ ಹಿರಿಮೆ ಸಹ ಹೊಂದಿದ್ದಾರೆ. ಇವರು ಈಗ ಯುಎಇನತ್ತ ಮುಖ ಮಾಡಿದ್ದಾರೆ. ಅಂತರರಾಷ್ಟ್ರೀಯ ಟಿ20 ಲೀಗ್‌ನಲ್ಲಿ, ಎಂಐ ಎಮಿರೇಟ್ಸ್, ಗಲ್ಫ್ ಜೈಂಟ್ಸ್, ಅಬುಧಾಬಿ ನೈಟ್ ರೈಡರ್ಸ್, ಶಾರ್ಜಾ ವಾರಿಯರ್ಸ್, ದುಬೈ ಕ್ಯಾಪಿಟಲ್ಸ್ ಮತ್ತು ಡೆಸರ್ಟ್ ವೈಪರ್ಸ್ ಸೇರಿದಂತೆ ಒಟ್ಟು 6 ತಂಡಗಳು ಆಡುತ್ತಿವೆ. ಈ ಲೀಗ್‌ನಲ್ಲಿ ವಿಶ್ವದ ಸ್ಟಾರ್‌ ಆಟಗಾರರಾದ ಆಂಡ್ರೆ ರಸೆಲ್, ಮೊಯೀನ್ ಅಲಿ ಮತ್ತು ಆದಿಲ್ ರಶೀದ್ ಅವರ ಹೆಸರುಗಳು ಸೇರಿದಂತೆ ವಿಶ್ವ ಕ್ರಿಕೆಟ್‌ನ ಅನೇಕ ದಂತಕಥೆಯ ಆಟಗಾರರು ಈ ಲೀಗ್‌ನಲ್ಲಿ ಆಡುವುದನ್ನು ಕಾಣಬಹುದು.

Ravichandran Ashwin Puts Name Forward for UAE s T20 League Auction

ಅಶ್ವಿನ್‌ ಭಾರತದ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಪ್ಲೇಯರ್‌. ಇವರು ಭಾರತದ ಪತ 106 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು 537 ವಿಕೆಟ್‌ ಕಬಳಿಸಿದ್ದಾರೆ. ಇದೇ ವೇಳೆ ಅಶ್ವಿನ್‌ 3503 ರನ್‌ ಸಹ ಸಿಡಿಸಿದ್ದಾರೆ. ಇದರಲ್ಲಿ 6 ಶತಕ ಹಾಗೂ 14 ಅರ್ಧಶತಕಗಳು ಸೇರಿವೆ.

Story first published: Monday, September 1, 2025, 9:43 [IST]
Other articles published on Sep 1, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+