Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

R Ashwin: ಅಶ್ವಿನ್ ನಿರ್ಮಿಸಿದ ಐದು ದಾಖಲೆಗಳನ್ನು ಅಳಿಸುವುದು ಡೌಟ್

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್‌ ಪಂದ್ಯ ಬ್ರಿಸ್ಬೇನ್‌ನಲ್ಲಿ ಮುಗಿದಿದೆ. ಈ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ಡ್ರಾ ಸಾಧಿಸಿದ ಸಮಾಧಾನದ ಮಧ್ಯೆ, ಸ್ಟಾರ್ ಸ್ಪಿನ್ ಬೌಲರ್‌ ರವಿಚಂದ್ರನ್‌ ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿರುವುದು ನಿಜಕ್ಕೂ ಪ್ರವಾಸಿ ತಂಡಕ್ಕೆ ಪೆಟ್ಟು ನೀಡಿದಂತೆ ಆಗಿದೆ. ಈ ಸ್ಟಾರ್‌ ಬೌಲರ್‌ ಭಾರತದ ಪರ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದ ಪ್ಲೇಯರ್‌. ಅವರ ಟಾಪ್‌ ಸ್ಪಿನ್‌, ಕೇರಂ ಬೌಲ್‌, ಆಫ್‌ ಸ್ಪಿನ್‌ ಬೌಲಿಂಗ್‌ನಿಂದಲೇ ಎದುರಾಳಿಗಳನ್ನು ಕಾಡಿದ್ದ ಅಶ್ವಿನ್ ವಿದಾಯ ಹೇಳಿದ್ದಾರೆ.

ಅನಿಲ್‌ ಕುಂಬ್ಳೆ, ಹರ್ಭಜ್‌ ಸಿಂಗ್‌ ಅವರ ಬಳಿಕ ಸ್ಪಿನ್ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದ ಹೆಗ್ಗಳಿಕೆ ಅಶ್ವಿನ್‌ ಅವರಿಗೆ ಸಲ್ಲುತ್ತದೆ. ಇವರು ಭಾರತದಲ್ಲಿ ನಡೆದ ಟೆಸ್ಟ್‌ ಪಂದ್ಯಗಳಲ್ಲಿ ಅಮೋಘ ಬೌಲಿಂಗ್‌ ಹಾಗೂ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾದ ಪ್ಲೇಯರ್‌. ಅಶ್ವಿನ್‌ ಅವರ ಬುಟ್ಟಿಯಲ್ಲಿರುವ ಐದು ದಾಖಲೆಗಳ ಬಗ್ಗೆ ವರದಿ ಇಲ್ಲಿದೆ.

Ravichandran Ashwin Retires 5 Remarkable Records by the Indian Cricket Legend

ಭಾರತದ ಪರ ಅಮೋಘ ಬೌಲಿಂಗ್ ದಾಳಿ ನಡೆಸಿರುವ ತಮಿಳು ನಾಡಿನ ಅಶ್ವಿನ್‌ ಲೆಜೆಂಡ್ರಿ ಸ್ಪಿನ್ ಬೌಲರ್. ಭಾರತದ ಪರ ಒಟ್ಟು 287 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 765 ವಿಕೆಟ್‌ ಪಡೆದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಭಾರತದ ಪರ ಅತಿ ಹೆಚ್ಚು ವಿಕೆಟ್‌ ಪಡೆದ ಎರಡನೇ ಬೌಲರ್‌ ಎಂಬ ಕೀರ್ತಿ ಅಶ್ವಿನ್‌ ಅವರ ಮುಕುಟಕ್ಕೆ ಸೇರುತ್ತದೆ.

ಅಶ್ವಿನ್‌ 5 ಬೆಸ್ಟ್‌ ದಾಖಲೆ

- ಭಾರತದ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಎರಡನೇ ಬೌಲರ್‌ ಎಂಬ ಹೆಗ್ಗಳಿಕೆ ಅಶ್ವಿನ್‌ ಅವರಿಗೆ ಸಲ್ಲುತ್ತದೆ. ಇವರು 106 ಟೆಸ್ಟ್‌ ಪಂದ್ಯಗಳಲ್ಲಿ 537 ವಿಕೆಟ್‌ ಕಬಳಿಸಿದ್ದಾರೆ.

- ಭಾರತದ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಐದು ವಿಕೆಟ್‌ ಗೊಂಚಲು ಪಡೆದ ಖ್ಯಾತಿಯು ಅಶ್ವಿನ್ ಅವರದ್ದಾಗಿದೆ. ಇವರು 37 ಬಾರಿ ಈ ಸಾಧನೆ ಮಾಡಿದ್ದಾರೆ.

- ಟೀಮ್ ಇಂಡಿಯಾದ ಪರ 106 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಶ್ವಿನ್‌ ಹಲವು ದಾಖಲೆಗಳನ್ನು ಬರೆದಿದ್ದಾರೆ. ಅದರಲ್ಲಿ ಪ್ರಮುಖವಾದದ್ದು 11 ಬಾರಿ ಸರಣಿ ಶ್ರೇಷ್ಠ ಆಟಗಾರ ಎಂಬ ಪ್ರಶಸ್ತಿ ಪಡೆದು ದಾಖಲೆಯ ಪುಟಕ್ಕೆ ಎಂಟ್ರಿ ನೀಡಿದ್ದಾರೆ.

- 200ಕ್ಕೂ ಹೆಚ್ಚು ವಿಕೆಟ್‌ ಪಡೆದ ವಿಶ್ವದ ಬೆಸ್ಟ್‌ ಬೌಲಿಂಗ್‌ ಬೌಲರ್‌ಗಳ ಸ್ಟ್ರೈಕ್‌ ರೇಟ್‌ನಲ್ಲೂ ಇವರ ಸ್ಥಾನ ಇದೆ. ಇವರ ಸ್ಟ್ರೈಕ್‌ ರೇಟ್‌ 50.7 ಆಗಿದೆ.

- ಭಾರತದ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗವಾಗಿ 300 ವಿಕೆಟ್‌ ಪಡೆದ ಬೌಲರ್‌ ಎಂಬ ಹಿರಿಮೆ ಸಹ ಅಶ್ವಿನ್‌ ಅವರದ್ದಾಗಿದೆ. ಇವರು ಈ ಸಾಧನೆಯನ್ನು 54 ಪಂದ್ಯಗಳಲ್ಲಿ ಮಾಡಿ ಬೀಗಿದ್ದಾರೆ. ಶ್ರೀಲಂಕಾ ವಿರುದ್ಧ 2017ರಲ್ಲಿ ನಡೆದಿದ್ದ ಟೆಸ್ಟ್‌ ಪಂದ್ಯದಲ್ಲಿ ಅಶ್ವಿನ್‌ ಈ ಸಾಧನೆ ಮಾಡಿದ್ದಾರೆ.

Story first published: Wednesday, December 18, 2024, 12:28 [IST]
Other articles published on Dec 18, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+