R Ashwin Retirement: ಅಶ್ವಿನ್ ಐಶಾರಾಮಿ ಜೀವನದ ಬಗ್ಗೆ ಇಲ್ಲಿದೆ ಮಾಹಿತಿ
ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇವರು ತಮ್ಮ ಸ್ಪಿನ್ ಜಾದುವಿನಿಂದಲೇ ಹೆಸರುವಾಸಿಯಾದ ಆಟಗಾರ. ತವರಿನಲ್ಲೇ ಆಗಿರಲಿ ಅಥವಾ ವಿದೇಶದಲ್ಲೇ ಆಗಿರಲಿ ಅಶ್ವಿನ್ ಸ್ಪಿನ್ ಮೋಡಿಗೆ ಅದೆಷ್ಟೋ ಬ್ಯಾಟರ್‌ಗಳು ಕಂಗಾಲಾಗಿದ್ದಾರೆ. ಭಾರತದಲ್ಲಂತೂ ಇವರು ಇಲ್ಲದೆ ಟೆಸ್ಟ್ ತಂಡವನ್ನು ಕಲ್ಪಿಸಿಕೊಳ್ಳುವುದು ಪ್ರಸಕ್ತ ವರ್ಷದಲ್ಲಿ ಕಷ್ಟ. ಆದರೆ 38 ವರ್ಷದ ಅಶ್ವಿನ್ ದೊಡ್ಡ ನಿರ್ಧಾರವನ್ನು ಪ್ರಕಟಿಸಿದ್ದಾರೆ. ದಿಗ್ಗಜ ಕ್ರಿಕೆಟ್ ಆಟಗಾರರ ಸಾಲಿಗೆ ಸೇರುವ ಅಶ್ವಿನ್, ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಅವರ ಆಸ್ತಿ ಹಾಗೂ ಅವರ ಐಶಾರಾಮಿ ಜೀವನದ ಬಗ್ಗೆ ವಿವರ ಇಲ್ಲಿದೆ.
ಟೀಮ್ ಇಂಡಿಯಾದ ಸ್ಪಿನ್ ಪರಂಪರೆಯನ್ನು ಮುನ್ನಡೆಸಿದ ಹೆಮ್ಮೆ ಅಶ್ವಿನ್ ಅವರದ್ದಾಗಿದೆ. ಅಶ್ವಿನ್ ಟೀಮ್ ಇಂಡಿಯಾದ ಪರ ಮೂರು ಫಾರ್ಮೆಟ್‌ಗಳಲ್ಲಿ ಮಿಂಚಿದ ಆಟಗಾರ. ತಮ್ಮ ಸ್ಪಿನ್ ಮೋಡಿಯಿಂದಲೇ ಹಲವು ಆಟಗಾರರಿಂದ ಕಾಡಿರುವ ಅಶ್ವಿನ್, ಬ್ಯಾಟಿಂಗ್‌ನಲ್ಲೂ ಬೌಲರ್‌ಗಳಿಗೆ ಕಾಡಿದ್ದಾರೆ. ಅವರ ಜೀವನ ಶೈಲಿ ಬಗ್ಗೆ ಇಲ್ಲಿದೆ ವರದಿ.

ಅಶ್ವಿನ್ ಸರಿ ಸುಮಾರ 132 ಕೋಟಿ ಆಸ್ತಿಯನ್ನು ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನು ಅವರು ಕ್ರಿಕೆಟ್ ಆಟದ ಸಂಭಾವನೆ ಹಾಗೂ ಕೆಲವು ಜಾಹೀರಾತುಗಳಿಂದ ಪಡೆದಿದ್ದಾಗಿದೆ. ಬಿಸಿಸಿಐನ ಕೇಂದ್ರ ಗುತ್ತಿಗೆಯಲ್ಲಿ ಅಶ್ವಿನ್ ಎ ಕ್ಯಾಟಗರಿ ಆಟಗಾರ. ಇವರು ವರ್ಷಕ್ಕೆ 5 ಕೋಟಿಯನ್ನು ಇದರಿಂದ ಪಡೆಯುತ್ತಿದ್ದರು.
ಅಶ್ವಿನ್ ಬಳಿ ಇರುವ ಕಾರ್ ಯಾವವು?
ಅಶ್ವಿನ್ 2008ರಲ್ಲಿ ಐಪಿಎಲ್ ಜರ್ನಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಆಡುವುದರೊಂದಿಗೆ ಆರಂಭಿಸಿದರು. 2016ರಲ್ಲಿ ಸಿಎಸ್‌ಕೆ ತಂಡವನ್ನು ಬ್ಯಾನ್ ಮಾಡಿದ ಬಳಿಕ ಅಶ್ವಿನ್ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ಭಾಗವಾಗಿದ್ದರು. ಇನ್ನು 2018ರಲ್ಲಿ ಅಶ್ವಿನ್ ಅವರನ್ನು ಪಂಜಾಬ್ ಕಿಗ್ಸ್ ತಂಡ 7.6 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತು. ಕಳೆದ ಆವೃತ್ತಿಯಲ್ಲಿ ಅಶ್ವಿನ್ ರಾಜಸ್ಥಾನ ರಾಯಲ್ಸ್ ತಂಡದ ಭಾಗವಾಗಿದ್ದರು. ಇವರಿಗೆ ರಾಯಲ್ಸ್ 5 ಕೋಟಿ ನೀಡಿತ್ತು. ಇನ್ನು ಮುಂಬರುವ ಐಪಿಎಲ್ 2025ಕ್ಕೆ ಅಶ್ವಿನ್ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಸೇರಿದ್ದಾರೆ. ಇವರು 9.75 ಕೋಟಿ ರೂ ಪಡೆದಿದ್ದಾರೆ.

ಅಶ್ವಿನ್ ಐಶಾರಾಮಿ ಜೀವನವನ್ನು ಚೆನ್ನೈನಲ್ಲಿ ನಡೆಸುತ್ತಿದ್ದಾರೆ. 2021ರಲ್ಲಿ ಅಶ್ವಿನ್ ಚೆನ್ನೈನಲ್ಲಿ ಮನೆಯೊಂದನ್ನು ಖರೀದಿಸಿದರು. ಈ ಮನೆಯಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳು ಇರುತ್ತಾರೆ. ಅಶ್ವಿನ್ ಅವರಿಗೆ ಕಾರುಗಳಂದರೆ ತುಂಬ ಇಷ್ಟ. ಇವರ ಬಳಿ ರೋಲ್ಸ್ ರಾಯ್ಸ್ ಕಂಪನಿಯ 6 ಕೋಟಿ ರೂಪಾಯಿಯ ಕಾರ್ ಹಾಗೂ 93 ಲಕ್ಷ ರೂಪಾಯಿಯ ಆಡಿ 07 ಹೊಂದಿದ್ದಾರೆ.
ಒಂದು ಜಾಹಿರಾತಿಗೆ ಎಷ್ಟು ಸಂಭವಾನೆ?
ಅಶ್ವಿನ್ ಜಾಹೀರಾತುಗಳ ಮೂಲಕವೂ ಹಣವನ್ನು ಸಂಪಾದಿಸುತ್ತಾರೆ. ಇವರು ಒಂದು ಜಾಹೀರಾತಿಗೆ ಸರಿ ಸುಮಾರು 4.5 ಯಿಂದ 5 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಇದರಲ್ಲಿ ಹಲವು ಪ್ರತಿಷ್ಠಿತ ಕಂಪನಿಗಳು ಸೇರಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications