Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಲಿಷ್ಠ ಎಡಗೈ ಬ್ಯಾಟ್ಸ್‌ಮನ್‌ಗಳು vs ಆರ್‌ ಅಶ್ವಿನ್: ಕುತೂಹಲಕಾರಿ ಅಂಕಿ ಅಂಶಗಳು!

Ravichandran Ashwins record against some of the finest left hand batsmen

ಸಿಡ್ನಿ: ಭಾರತದ ಸಕ್ರಿಯ ಆಟಗಾರರಲ್ಲಿ ಪ್ರಮುಖ ಸ್ಪಿನ್ನರ್ ಆಗಿರುವ ರವಿಚಂದ್ರನ್ ಅಶ್ವಿನ್‌, ಬಲಿಷ್ಠ ಬ್ಯಾಟ್ಸ್‌ಮನ್‌ಗಳ ವಿರುದ್ಧ ಅಪರೂಪದ ದಾಖಲೆಗಳನ್ನು ಹೊಂದಿದ್ದಾರೆ. ಸದ್ಯ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ತೃತೀಯ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್ ವಾರ್ನರ್ ಅವರನ್ನು ಅಶ್ವಿನ್ 13 ರನ್‌ಗೆ ಪೆವಿಲಿಯನ್‌ಗೆ ಅಟ್ಟಿದರು. ಇದರೊಂದಿಗೆ ಅಶ್ವಿನ್‌ ಹೆಸರಿನಲ್ಲಿ ವಿಶೇಷ ದಾಖಲೆಗಳಾಗಿರುವುದು ಕಾಣಸಿಕ್ಕಿದೆ.

ಆಸ್ಟ್ರೇಲಿಯಾ ವಿರುದ್ಧದ ತೃತೀಯ ಟೆಸ್ಟ್‌ನಲ್ಲಿ ಆರ್ ಅಶ್ವಿನ್‌ಗೆ ಡೇವಿಡ್ ವಾರ್ನರ್ ವಿಕೆಟ್ ಸಿಕ್ಕಿದ್ದನ್ನು ಪರಿಗಣಿಸಿದರೆ, ಅಶ್ವಿನ್‌ಗೆ ವಾರ್ನರ್ ಒಟ್ಟು 10 ಸಾರಿ ವಿಕೆಟ್ ಒಪ್ಪಿಸಿದಂತಾಗುತ್ತದೆ. ಅಷ್ಟೇ ಅಲ್ಲ, ವಿಶ್ವದ ಬಹುತೇಕ ಬಲಿಷ್ಠ ಎಡಗೈ ಬ್ಯಾಟ್ಸ್‌ಮನ್‌ಗಳು ಅಶ್ವಿನ್‌ ಅವರ ಸ್ಪಿನ್‌ ಬಲೆಗೆ ಬಿದ್ದಿದ್ದು ಕಾಣಸಿಕ್ಕಿದೆ.

ಆರ್‌ ಅಶ್ವಿನ್ ಸ್ಪಿನ್ ದಾಳಿಗೆ ಬಲಿಯಾದ ಪ್ರಮುಖ ಎಡಗೈ ಬ್ಯಾಟ್ಸ್‌ಮನ್‌ಗಳ ಕುತೂಹಲಕಾರಿ ಅಂಕಿ-ಅಂಶಗಳು ಇಲ್ಲಿವೆ.

ಆಸ್ಟ್ರೇಲಿಯಾ ಟೆಸ್ಟ್‌ನಲ್ಲಿ ವಾರ್ನರ್-ಅಶ್ವಿನ್

ಆಸ್ಟ್ರೇಲಿಯಾ ಟೆಸ್ಟ್‌ನಲ್ಲಿ ವಾರ್ನರ್-ಅಶ್ವಿನ್

(ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಆರ್ ಅಶ್ವಿನ್ ಅವರು ಡೇವಿಡ್ ವಾರ್ನರ್ ವಿಕೆಟ್ ಕಬಳಿಸಿದ ಅಂಕಿ-ಅಂಶಗಳು)
* ಆರ್‌ ಅಶ್ವಿನ್ ನೀಡಿದ ರನ್ ಅಥವಾ ಡೇವಿಡ್ ವಾರ್ನರ್ ಗಳಿಸಿದ ರನ್‌ಗಳು 36
* ಡೇವಿಡ್ ವಿಕೆಟ್ ಅಶ್ವಿನ್ ಮುರಿದಿದ್ದು 5 ಸಾರಿ
* ಅಶ್ವಿನ್ ಕೊಟ್ಟ ರನ್ ಮತ್ತು ಪಡೆದ ವಿಕೆಟ್‌ಗಳ ಸರಾಸರಿ 7.20

ಡೇವಿಡ್ ವಾರ್ನರ್ vs ಆರ್‌ ಅಶ್ವಿನ್

ಡೇವಿಡ್ ವಾರ್ನರ್ vs ಆರ್‌ ಅಶ್ವಿನ್

(ಆಸ್ಟ್ರೇಲಿಯಾದಲ್ಲಿ ನಡೆದ ಪಂದ್ಯಗಳಲ್ಲಿ ಡೇವಿಡ್ ವಾರ್ನರ್ ಅವರು ಅರ್ಧ ಶತಕ ಬಾರಿಸುವ ಮುನ್ನವೇ ಅಶ್ವಿನ್ ವಿಕೆಟ್ ಪಡೆದಿದ್ದು)
* ಅಡಿಲೇಡ್ ಕ್ರಿಕೆಟ್ ಸ್ಟೇಡಿಯಂ, 2012
* ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂ, 2014
* ಸಿಡ್ನಿ ಕ್ರಿಕೆಟ್ ಸ್ಟೇಡಿಯಂ, 2015
* ಸಿಡ್ನಿ ಕ್ರಿಕೆಟ್ ಸ್ಟೇಡಿಯಂ, 2021

ಅಶ್ವಿನ್‌ಗೆ ವಿಕೆಟ್ ನೀಡಿದ ಬ್ಯಾಟ್ಸ್‌ಮನ್‌ಗಳು

ಅಶ್ವಿನ್‌ಗೆ ವಿಕೆಟ್ ನೀಡಿದ ಬ್ಯಾಟ್ಸ್‌ಮನ್‌ಗಳು

(ವಿಶ್ವದ ಪ್ರಮುಖ ಎಡಗೈ ಬ್ಯಾಟ್ಸ್‌ಮನ್‌ಗಳು ಆರ್‌ ಅಶ್ವಿನ್‌ಗೆ ವಿಕೆಟ್ ಒಪ್ಪಿದ್ದು)
* ಡೇವಿಡ್ ವಾರ್ನರ್, ಆಸ್ಟ್ರೇಲಿಯಾ, 10 ಸಾರಿ ಔಟ್, ಆಡಿದ ಒಟ್ಟು ಇನ್ನಿಂಗ್ಸ್‌ಗಳು 28
* ಅಲಾಸ್ಟೇರ್ ಕುಕ್, ಇಂಗ್ಲೆಂಡ್, 9 ಸಾರಿ, 27 ಇನ್ನಿಂಗ್ಸ್‌ಗಳು
* ಬೆನ್ ಸ್ಟೋಕ್ಸ್, ಇಂಗ್ಲೆಂಡ್, 7 ಸಾರಿ, 16 ಇನ್ನಿಂಗ್ಸ್‌ಗಳು
* ಡೀನ್ ಎಲ್ಗರ್, ದಕ್ಷಿಣ ಆಫ್ರಿಕಾ, 6 ಸಾರಿ, 17 ಇನ್ನಿಂಗ್ಸ್‌ಗಳು
* ಟಾಮ್ ಲ್ಯಾಥಮ್, ನ್ಯೂಜಿಲೆಂಡ್, 4 ಸಾರಿ, 7 ಇನ್ನಿಂಗ್ಸ್‌ಗಳು
* ಕುಮಾರ ಸಂಗಕ್ಕಾರ, ಶ್ರೀಲಂಕಾ, 4 ಸಾರಿ, 4 ಇನ್ನಿಂಗ್ಸ್‌ಗಳು

Story first published: Saturday, January 9, 2021, 19:13 [IST]
Other articles published on Jan 9, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+