Ravichandran Ashwin: ಹಿಂದಿ ಭಾರತದ ರಾಷ್ಟ್ರ ಭಾಷೆಯಲ್ಲ; ಬಿರುಗಾಳಿ ಎಬ್ಬಿಸಿದ ಅಶ್ವಿನ್
ಇತ್ತೀಚೆಗಷ್ಟೇ ಭಾರತ ತಂಡದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮಧ್ಯೆದಲ್ಲೇ ಅಶ್ವಿನ್ ನಿವೃತ್ತಿ ನಿರ್ಧಾರವನ್ನು ತೆಗೆದುಕೊಂಡಿದ್ದರು. ಇದಾದ ನಂತರ ಅಶ್ವಿನ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಾಗಿದ್ದರು. ಇದೀಗ ಹಿಂದಿ ಭಾಷೆಗೆ ಸಂಬಂಧಿಸಿದಂತೆ ತಮ್ಮ ಹೇಳಿಕೆ ಮೂಲಕ ಮತ್ತೊಮ್ಮೆ ಅಶ್ವಿನ್ ಸುದ್ದಿಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಚೆನ್ನೈನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅಶ್ವಿನ್, ಹಿಂದಿ ಭಾರತದ ರಾಷ್ಟ್ರ ಭಾಷೆಯಲ್ಲ, ಅಧಿಕೃತ ಭಾಷೆ ಎಂದಿದ್ದಾರೆ. ಪದವಿ ಪ್ರದಾನ ಸಮಾರಂಭ ಹಿನ್ನೆಲೆಯಲ್ಲಿ ಅಶ್ವಿನ್ ಅವರನ್ನು ವೇದಿಕೆಗೆ ಕರೆಯಲಾಗಿತ್ತು. ಈ ವೇಳೆ ಅಶ್ವಿನ್ ಹಿಂದೆ ಭಾಷೆ ಕುರಿತು ಹೇಳಿಕೆ ನೀಡಿದ್ದಾರೆ.

ಅಶ್ವಿನ್ ವೇದಿಕೆ ಮೇಲೆ ಮಾತನಾಡಬೇಕಾದರೆ, ಮೊದಲು ಇಲ್ಲಿ ಎಷ್ಟು ಜನ ಇಂಗ್ಲಿಷ್ ಮಾತನಾಡುತ್ತಾರೆ? ಎಂದು ಪ್ರಶ್ನೆ ಕೇಳಿದರು. ವೇದಿಕೆ ಮುಂಭಾಗದಲ್ಲಿದ್ದ ಒಂದಷ್ಟು ಮಂದಿ ಕೈ ಎತ್ತಿದರು. ಇದಾದ ಬಳಿಕ ಅದೇ ರೀತಿ ಎಷ್ಟು ಜನ ತಮಿಳು ಮಾತನಾಡುತ್ತಾರೆ? ಎಂದು ಅಶ್ವಿನ್ ಕೇಳುತ್ತಿದ್ದಂತೆ ಇಡೀ ಸಭಾಂಗಣ ಪ್ರತಿಧ್ವನಿಸಿತು. ನಂತರ 'ಎಷ್ಟು ಜನ ಹಿಂದಿ ಮಾತನಾಡುತ್ತಾರೆ? ಎಂದಾಗ ಸಭಾಂಗಣದಲ್ಲಿ ಮೌನ ಆವರಿಸಿತು. ಇದಕ್ಕೆ ಪ್ರತಿಕ್ರಿಯಿಸಿರುವ ಅಶ್ವಿನ್ 'ಹಿಂದಿ ರಾಷ್ಟ್ರಭಾಷೆಯಲ್ಲ, ಅಧಿಕೃತ ಭಾಷೆ' ಎಂದಿದ್ದಾರೆ.
ಅಶ್ವಿನ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಹೇಳಿಕೆಗೆ ಕೆಲವರು ಅಶ್ವಿನ್ ಬೆಂಬಲಕ್ಕೆ ನಿಂತಿದ್ದಾರೆ. ಮತ್ತೊಂದೆಡೆ ಇದೇ ವೇಳೆ ಅವರ ಈ ಹೇಳಿಕೆಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಶ್ವಿನ್ ಟೀಮ್ ಇಂಡಿಯಾ ಪರ 106 ಟೆಸ್ಟ್ ಪಂದ್ಯಗಳಲ್ಲಿ 537 ವಿಕೆಟ್‌ಗಳನ್ನು ಪಡೆಯುವ ಮೂಲಕ ಹಲವು ದಾಖಲೆಗಳನ್ನು ಮಾಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ನಂತರ ಅಶ್ವಿನ್ ತವರಿನಲ್ಲಿ ಭಾರತದ ಟೆಸ್ಟ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಾದ ನಂತರ ಆನೇಕ ಟೆಸ್ಟ್ ಸರಣಿಗಳಲ್ಲಿ ಅಶ್ವಿನ್ ಟೀಮ್ ಇಂಡಿಯಾ ಗೆಲುವಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ.
ಅಶ್ವಿನ್ 2011ರ ಏಕದಿನ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅಶ್ವಿನ್ 116 ಏಕದಿನ ಪಂದ್ಯಗಳನ್ನು ಆಡಿದ್ದು, 156 ವಿಕೆಟ್‌ಗಳನ್ನು ಕಬಳಿಸಿದ್ದರೆ, 65 ಟಿ20 ಪಂದ್ಯಗಳಲ್ಲಿ 72 ವಿಕೆಟ್‌ಗಳನ್ನು ಪಡೆದಿದ್ದಾರೆ. ಇತ್ತೀಚೆಗೆ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ನಡುವೆ ನಿವೃತ್ತರಾದರು. ಅಶ್ವಿನ್ ಅವರ ನಿವೃತ್ತಿ ನಿರ್ಧಾರ ತಂಡದಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications