Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿಕ್ ಟಾಕ್ ಬ್ಯಾನ್: ಡೇವಿಡ್ ವಾರ್ನರ್ ಕಾಲೆಳೆದ ರವಿಚಂದ್ರನ್ ಅಶ್ವಿನ್

Ravichandran Ashwin Trolls David Warner After TikTok Ban

ನವದೆಹಲಿ, ಜೂನ್ 30: ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಗೀಗ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ತರ್ಲೆ, ತಮಾಷೆಯಲ್ಲೂ ಪಾಲ್ಗೊಳ್ಳುತ್ತಿರುತ್ತಾರೆ. ಈ ಬಾರಿ ಅಶ್ವಿನ್, ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಕಾಲೆಳೆದಿದ್ದಾರೆ.

ಭಾರತ ಸರ್ಕಾರ ಚೀನಾ ಮಾಲೀಕತ್ವದ 59 ಆ್ಯಪ್‌ಗಳನ್ನು ಬ್ಯಾನ್ ಮಾಡಿತ್ತು. ಇದನ್ನೇ ಮುಂದಿಟ್ಟುಕೊಂಡು ಆಶ್ವಿನ್, ವಾರ್ನರ್ ಅವರನ್ನು ಟ್ರೋಲ್ ಮಾಡಿದ್ದಾರೆ. ಡೇವಿಡ್ ಮತ್ತವರ ಕುಟುಂಬ ಇತ್ತೀಚೆಗೆ ಟಿಕ್‌ ಟಾಕ್‌ನಲ್ಲಿ ಅನೇಕ ವೀಡಿಯೋಗಳನ್ನು ಮಾಡಿ ರಂಜಿಸಿದ್ದರು. ಈ ವಿಚಾರ ಗೊತ್ತಿರುವ ಅಶ್ವಿನ್, ವಾರ್ನರ್‌ಗೆ ತಮಾಷೆ ಮಾಡಿದ್ದಾರೆ.

ಟಿಕ್ ಟಾಕ್ ಸೇರಿದಂತೆ ಬೇರೆ ಬೇರೆ ಆ್ಯಪ್‌ಗಳನ್ನು ಭಾರತ ಬ್ಯಾನ್ ಬ್ಯಾನ್ ಮಾಡಿರುವುದನ್ನು ಮುಂದಿಟ್ಟುಕೊಂಡು ಆಶ್ವಿನ್, ವಾರ್ನರ್ ಅವರ ಕಾಲೆಳೆದಿದ್ದಾರೆ. ಟ್ವಿಟರ್‌ನಲ್ಲಿ ಅಶ್ವಿನ್, 'Appo Anwar' ಎಂದು ಬರೆದುಕೊಂಡಿದ್ದಾರೆ. ಯಾಕೆ ಡೇವಿಡ್ ವಾರ್ನರ್ ಅವರನ್ನೇ ಅಶ್ವಿನ್ ತಮಾಷೆ ಮಾಡಿದ್ದೆಂದರೆ; ವಾರ್ನರ್ ಅವರು ಭಾರತೀಯರಿಗೆ ಸಂಬಂಧಿಸಿದ ಟಿಕ್ ಟಾಕ್ ವೀಡಿಯೋಗಳನ್ನೇ ಹೆಚ್ಚಾಗಿ ಮಾಡುತ್ತಿದ್ದರು.

ಅಶ್ವಿನ್ ಬರೆದಿರುವ ಈ ಡೈಲಾಗ್, 1995ರಲ್ಲಿ ತೆರೆ ಕಂಡಿದ್ದ, ತಮಿಳು ನಟ-ಸೂಪರ್ ಸ್ಟಾರ್ ರಜಿನಿಕಾಂತ್ ಅವರ 'ಬಾಶಾ' ಸಿನಿಮಾದ್ದು. ಈ ಡೈಲಾಗ್ ಪ್ರಕಾರ, 'ಹಾಗಾದರೆ, ಈಗ ಡೇವಿಡ್ ವಾರ್ನರ್ ಏನು ಮಾಡುತ್ತಾರೆ?,' ಎಂದು ಅಶ್ವಿನ್, ವಾರ್ನರ್ ಅವರನ್ನು ಅಣಕಿಸಿದಂತಾಗುತ್ತದೆ.

Story first published: Tuesday, June 30, 2020, 13:19 [IST]
Other articles published on Jun 30, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+