Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

R Ashwin Retirement: ವಿರಾಟ್ ಕೊಹ್ಲಿಯನ್ನೂ ಭಾವುಕರನ್ನಾಗಿಸಿದ ಅಶ್ವಿನ್ ನಿರ್ಧಾರ

ಅನಿಲ್ ಕುಂಬ್ಳೆ ನಂತರ ಭಾರತದ ಎರಡನೇ ಅತ್ಯಂತ ಯಶಸ್ವಿ ಟೆಸ್ಟ್ ಬೌಲರ್ ರವಿಚಂದ್ರನ್ ಅಶ್ವಿನ್ ಇನ್ನು ಮುಂದೆ ಟೀಮ್ ಇಂಡಿಯಾ ಪರ ಆಡುವುದಿಲ್ಲ. ಬ್ರಿಸ್ಬೇನ್‌ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಅನುಭವಿ ಸ್ಪಿನ್ನರ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಅಶ್ವಿನ್ ಅವರ ಈ ನಿರ್ಧಾರ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಇದರೊಂದಿಗೆ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್‌ ವಿರಾಟ್ ಕೊಹ್ಲಿ ಕೂಡ ಭಾವುಕರಾಗಿದ್ದಾರೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ವಿರಾಟ್ ಜೊತೆ ಕುಳಿತು ಭಾವುಕರಾಗಿರುವ ಅಶ್ವಿನ್ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಅಶ್ವಿನ್ ತಮ್ಮ ನಿವೃತ್ತಿಯ ನಿರ್ಧಾರವನ್ನು ಹೇಳಿದಾಗ ಭಾವುಕರಾಗಿದ್ದಾರೆ. ಇದಾದ ಬಳಿಕ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಅಶ್ವಿನ್ ನಿರ್ಧಾರ ಕುರಿತು ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ. ಭಾವನಾತ್ಮಕ ಪೋಸ್ಟ್‌ನಲ್ಲಿ ಕೊಹ್ಲಿ ನಿವೃತ್ತಿಯ ನಂತರ ಅಶ್ವಿನ್ ಅವರ ವೃತ್ತಿಜೀವನಕ್ಕೆ ಶುಭ ಹಾರೈಸಿದ್ದಾರೆ. ಜೊತೆಗೆ ಅಶ್ವಿನ್ ಅವರೊಂದಿಗೆ ಕಳೆದ ಸ್ಮರಣೀಯ ಕ್ಷಣಗಳನ್ನು ಕೊಹ್ಲಿ ನೆನದಿದ್ದಾರೆ

Ravichandran Ashwin s retirement decision made even Virat Kohli emotional

ಕೊಹ್ಲಿ ಪೋಸ್ಟ್

ವಿರಾಟ್ ಕೊಹ್ಲಿ ತಮ್ಮ ಪೋಸ್ಟ್‌ನಲ್ಲಿ, 'ನಾನು ನಿಮ್ಮೊಂದಿಗೆ 14 ವರ್ಷಗಳಿಂದ ಕ್ರಿಕೆಟ್ ಆಡಿದ್ದೇನೆ. ನೀವು ಇಂದು ನಿವೃತ್ತರಾಗುತ್ತಿದ್ದೀರಿ ಎಂದು ಹೇಳಿದಾಗ, ನಾನು ಸ್ವಲ್ಪ ಭಾವುಕನಾಗಿದ್ದೆ. ಈ ಸಂದರ್ಭದಲ್ಲಿ ನಾವು ಒಟ್ಟಿಗೆ ಆಡಿದ ಎಲ್ಲಾ ನೆನಪುಗಳು ನನ್ನ ಮುಂದೆ ಬಂದವು. ನಾನು ನಿಮ್ಮೊಂದಿಗೆ ಪ್ರಯಾಣದ ಪ್ರತಿ ಕ್ಷಣವನ್ನು ಆನಂದಿಸಿದ್ದೇನೆ. ಭಾರತೀಯ ಕ್ರಿಕೆಟ್‌ಗೆ ನಿಮ್ಮ ಕೌಶಲ್ಯ ಮತ್ತು ಪಂದ್ಯವನ್ನು ಗೆಲ್ಲಿಸಿಕೊಟ್ಟ ಕೊಡುಗೆಗೆ ಸರಿ ಸಾಟಿಯೇ ಇಲ್ಲ. ನೀವು ಯಾವಾಗಲೂ ಭಾರತೀಯ ಕ್ರಿಕೆಟ್‌ನ ದಂತಕಥೆಯಾಗಿ ನೆನಪಿನಲ್ಲಿ ಉಳಿಯುತ್ತೀರಿ ಎಂದು ಬರೆದುಕೊಂಡಿದ್ದಾರೆ.

ಡ್ರೆಸ್ಸಿಂಗ್ ರೂಮಿನಲ್ಲಿ ನಡೆದ್ದೇನು?

ಬ್ರಿಸ್ಬೇನ್‌ ಟೆಸ್ಟ್ ಪಂದ್ಯದ ವೇಳೆ ಅಂದರೆ ನಿವೃತ್ತಿ ಘೋಷಣೆಗೂ ಮುನ್ನ ಅಶ್ವಿನ್ ಡ್ರೆಸ್ಸಿಂಗ್ ರೂಮ್‌ನಲ್ಲಿ ವಿರಾಟ್ ಕೊಹ್ಲಿ ಜೊತೆ ಕುಳಿತು ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದ್ದಕ್ಕಿದ್ದಂತೆ ಅಶ್ವಿನ್ ಭಾವುಕರಾದ ನಂತರ ವಿರಾಟ್ ಕೊಹ್ಲಿ ಅವರನ್ನು ತಬ್ಬಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅಥವಾ ಅಶ್ವಿನ್ ಇಬ್ಬರಲ್ಲಿ ಒಬ್ಬರು ಇಂದು ನಿವೃತ್ತಿ ಘೋಷಣೆ ಮಾಡುತ್ತಾರೆ ಎಂದು ಅಭಿಮಾನಿಗಳು ಭವಿಷ್ಯ ನುಡಿದಿದ್ದರು. ಇದೀಗ ಅಭಿಮಾನಿಗಳ ಭವಿಷ್ಯ ನಿಜವಾಗಿದೆ.

Story first published: Wednesday, December 18, 2024, 14:53 [IST]
Other articles published on Dec 18, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+