ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅತ್ಯಂತ ವೇಗವಾಗಿ 150 ವಿಕೆಟ್ ಕಿತ್ತ ಎಡಗೈ ಬೌಲರ್ ಜಡೇಜ

By Mahesh

ಕೊಲಂಬೋ, ಆಗಸ್ಟ್ 06 : ಭಾರತ-ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌ ಪಡೆದ ರವೀಂದ್ರ ಜಡೇಜ ಅವರು ವೇಗವಾಗಿ 150 ವಿಕೆಟ್‌ ಪಡೆದ ಭಾರತದ ಎರಡನೇ ಬೌಲರ್‌ ಎನಿಸಿದ್ದಾರೆ. ಜತೆಗೆ ಎರಡನೇ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಪಡೆದು ತಂಡಕ್ಕೆ ಇನ್ನಿಂಗ್ಸ್ ಗೆಲುವು ಹಾಗೂ ಸರಣಿ ಜಯ ತಂದಿತ್ತಿದ್ದಾರೆ.

ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತಕ್ಕೆ 2-0ರಲ್ಲಿ ಮುನ್ನಡೆ

ಜಡೇಜ ಕೇವಲ 32 ಇನ್ನಿಂಗ್ಸ್‌ ನಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಹಿಂದೆ ಮತ್ತೊಬ್ಬ ಭಾರತೀಯ ಆರ್‌. ಅಶ್ವಿನ್‌ ಅವರು 29 ಇನ್ನಿಂಗ್ಸ್‌ ನಲ್ಲಿ ಈ ಸಾಧನೆ ಮಾಡಿದ್ದರು. ಆದರೆ, ಎಡಗೈ ಸ್ಪಿನ್ನರ್ ಗಳ ಪೈಕಿ ಜಡೇಜ ಅವರು ಅಗ್ರಸ್ಥಾನದಲ್ಲಿದ್ದಾರೆ.

ಈ ಹಿಂದೆ ಆಫ್ ಸ್ಪಿನ್ನರ್ ಎರಪಲ್ಲಿ ಪ್ರಸನ್ನ, ಲೆಗ್ ಸ್ಪಿನ್ನರ್ ಅನಿಲ್‌ ಕುಂಬ್ಳೆ 34 ಟೆಸ್ಟ್‌ ಪಂದ್ಯಗಳಲ್ಲಿ 150 ವಿಕೆಟ್‌ ಪಡೆದಿದ್ದರು. ಹರ್ಭಜನ್ ಸಿಂಗ್ 35ನೆ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದ್ದರು.

Ravindra Jadeja becomes fastest left-armer to take 150 Test wickets


ತ್ವರಿತವಾಗಿ 150 ವಿಕೆಟ್ ಗಳಿಸಿದ ಎಡಗೈ ಬೌಲರ್ ಗಳು ಟಾಪ್ 5 : (ಸ್ಪಿನ್ನರ್ಸ್ ಹಾಗೂ ವೇಗಿಗಳು)
1. ರವೀಂದ್ರ ಜಡೇಜ (ಭಾರತ) -32 ಟೆಸ್ಟ್ ಪಂದ್ಯಗಳು

2. ಮಿಚೆಲ್ ಜಾನ್ಸನ್ (ಆಸ್ಟ್ರೇಲಿಯಾ)- 34
3. ಬುಲ್ ಜಾನ್ಸ್ಟನ್ (ಆಸ್ಟ್ರೇಲಿಯಾ) -35
4. ಅಲಾನ್ ಡೇವಿಡ್ಸನ್ (ಆಸ್ಟ್ರೇಲಿಯಾ) -37
5. ಡೆರೆಕ್ ಅಂಡರ್ ವುಡ್ (ಇಂಗ್ಲೆಂಡ್)-40


ತ್ವರಿತವಾಗಿ 150 ವಿಕೆಟ್ ಗಳಿಸಿದ ಭಾರತೀಯ ಬೌಲರ್ಸ್
1. ರವಿಚಂದ್ರನ್ ಅಶ್ವಿನ್ -29 ಟೆಸ್ಟ್ ಪಂದ್ಯಗಳು
2. ರವೀಂದ್ರ ಜಡೇಜ- 32
3. ಎರಪಲ್ಲಿ ಪ್ರಸನ್ನ- 34
4. ಅನಿಲ್ ಕುಂಬ್ಳೆ- 34
5. ಹರ್ಭಜನ್ ಸಿಂಗ್- 35
(ಒನ್ಇಂಡಿಯಾಸುದ್ದಿ)

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X