ರವೀಂದ್ರ ಜಡೇಜ-ರೀವಾ ದಂಪತಿಗೆ ಹೆಣ್ಣು ಕೂಸು
ಲಂಡನ್, ಜೂನ್ 08: ಟೀಂ ಇಂಡಿಯಾ ಆಲ್ ರೌಂಡರ್, ಐಪಿಎಲ್ ನಲ್ಲಿ ಗುಜರಾತ್ ಲಯನ್ಸ್ ಪರ ಆಡುವ ರವೀಂದ್ರ ಜಡೇಜ ಹಾಗೂ ರೀವಾ ದಂಪತಿಗೆ ಹೆಣ್ಣು ಕೂಸು ಜನಿಸಿದೆ. ಮಗುವಿನ ಆಗಮನದ ನಿರೀಕ್ಷೆಯಿದ್ದರೂ ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 ಆಡಲು ಲಂಡನ್ನಿಗೆ ಜಡೇಜ ಬಂದಿದ್ದರು. ಇಂದಿನ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಲಭ್ಯರಾಗಿದ್ದಾರೆ ಎಂದು ಟೀಂ ಮ್ಯಾನೇಜ್ಮೆಂಟ್ ತಿಳಿಸಿದೆ.[ಹರ್ಭಜನ್ ಮದ್ವೆ ನಂತರ ಜಡೇಜ ಮದ್ವೆಯಲ್ಲೂ ವಿವಾದ!]
ಜಡೇಜ ಅವರ ಪತ್ನಿ ರೀವಾ ಅವರು ಗುರುವಾರದಂದು ಸ್ಟರ್ಲಿಂಗ್ ಆಸ್ಪತ್ರೆಯಲ್ಲಿ ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯಕರವಾಗಿದ್ದಾರೆ ಎಂದು ತಿಳಿದು ಬಂದಿದೆ. ಸಿಸೇರಿಯನ್ ಸರ್ಜರಿ ಮಾಡಲಾಯಿತು.[ಅದೃಷ್ಟದ ಹುಡುಗಿ ಸೋಲಂಕಿ ವರಿಸಿದ ರವೀಂದ್ರ ಜಡೇಜ]

29 ರ ಹರೆಯದ ಜಡೇಜ (ಜಡ್ಡು) ಜಾಮ್ ನಗರ ಜಿಲ್ಲೆಯಲ್ಲಿರುವ ತಮ್ಮ ಸ್ವಗ್ರಾಮದಲ್ಲಿ ಖ್ಯಾತ ಉದ್ಯಮಿಯೊಬ್ಬರ ಪುತ್ರಿ ರಿವಾ ಸೋಲಂಕಿ ಅವರನ್ನು ಕಳೆದ ವರ್ಷ ಏಪ್ರಿಲ್ ನಲ್ಲಿ ಸಾಂಪ್ರದಾಯಿಕವಾಗಿ ಕೈ ಹಿಡಿದಿದ್ದರು. ರೀವಾ ನನ್ನ ಜೀವನದ ಲಕ್ಕಿ ಗರ್ಲ್ ಎಂದು ರವೀಂದ್ರ ಜಡೇಜ ಅನೇಕ ಬಾರಿ ಹೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications