For Quick Alerts
ALLOW NOTIFICATIONS  
For Daily Alerts
 

Ravindra Jadeja: ಈ ಭಾರತೀಯನ ಸಾರ್ವಕಾಲಿಕ ದಾಖಲೆ ಮುರಿದು ಏಷ್ಯಾಕಪ್ ಅಧಿಪತಿಯಾದ ರವೀಂದ್ರ ಜಡೇಜಾ

ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ ರವೀಂದ್ರ ಜಡೇಜಾ ಭಾರತ ತಂಡದ ಪ್ರಮುಖ ಸದಸ್ಯನಾಗಿದ್ದಾರೆ. ಮಂಗಳವಾರ, ಸೆಪ್ಟೆಂಬರ್ 12ರಂದು ಶ್ರೀಲಂಕಾ ವಿರುದ್ಧದ 2023ರ ಏಷ್ಯಾ ಕಪ್ ಸೂಪರ್ 4 ಪಂದ್ಯದಲ್ಲಿ ರವೀಂದ್ರ ಜಡೇಜಾ ತಮ್ಮ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಮೈದಾನದಲ್ಲಿ ಬ್ಯಾಟ್ ಮತ್ತು ಬಾಲ್‌ನಲ್ಲಿ ಏನೇ ಮಾಡಿದರೂ ಅದನ್ನು ಯಾವಾಗಲೂ ಕ್ರೆಡಿಟ್ ಪಡೆಯಲು ಬಯಸದ ರವೀಂದ್ರ ಜಡೇಜಾ, ಆಲ್‌ರೌಂಡ್ ಆಟಗಾರನ ಪರಿಪೂರ್ಣ ಉದಾಹರಣೆಯಾಗಿದ್ದಾರೆ.

ravindra-jadeja-broke-an-all-time-record

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಎರಡು ವಿಕೆಟ್‌ ಪಡೆಯುವ ಮೂಲಕ ರವೀಂದ್ರ ಜಡೇಜಾ ಅವರು ಭಾರತ ತಂಡದ ಮಾಜಿ ವೇಗಿ ಇರ್ಫಾನ್ ಪಠಾಣ್ ಅವರನ್ನು ಹಿಂದಿಕ್ಕಿ, ಏಕದಿನ ಏಷ್ಯಾ ಕಪ್‌ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದರು.

ಮಂಗಳವಾರ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧದ ಸೂಪರ್ 4 ಹಂತದ ಪಂದ್ಯದಲ್ಲಿ ಎಡಗೈ ಆಲ್‌ರೌಂಡರ್ ರವೀಂದ್ರ ಜಡೇಜಾ ಈ ಮೈಲುಗಲ್ಲು ಸ್ಥಾಪಿಸಿದರು.

ravindra-jadeja-broke-an-all-time-record

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 33 ರನ್ ನೀಡಿ ಎರಡು ವಿಕೆಟ್ ಪಡೆಯುವ ಮೂಲಕ ಭಾರತದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಏಷ್ಯಾ ಕಪ್‌ನಲ್ಲಿ ಆಡಿದ 18 ಇನ್ನಿಂಗ್ಸ್‌ಗಳಲ್ಲಿ 24 ವಿಕೆಟ್‌ ಕಬಳಿಸಿದರು. ಈ ಹಿಂದೆ ಇರ್ಫಾನ್ ಪಠಾಣ್ 12 ಇನ್ನಿಂಗ್ಸ್‌ಗಳಲ್ಲಿ 22 ವಿಕೆಟ್‌ ಪಡೆಯುವ ಮೂಲಕ ಭಾರತದ ಪರ ಅಗ್ರ ವಿಕೆಟ್ ಟೇಕರ್ ಆಗಿದ್ದರು.

ಇನ್ನು ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಆಡಿದ 9 ಇನ್ನಿಂಗ್ಸ್‌ಗಳಲ್ಲಿ 19 ವಿಕೆಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಒಟ್ಟಾರೆಯಾಗಿ, ಏಷ್ಯಾ ಕಪ್‌ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ರವೀಂದ್ರ ಜಡೇಜಾ ಐದನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾದ ದಂತಕಥೆ ಮುತ್ತಯ್ಯ ಮುರಳೀಧರನ್ 24 ಇನ್ನಿಂಗ್ಸ್‌ಗಳಲ್ಲಿ 30 ವಿಕೆಟ್‌‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

Ravindra Jadeja Broke An All-Time Record of Indian Legendary Cricketer in Asia Cup History

ಏಷ್ಯಾ ಕಪ್‌ನಲ್ಲಿ ಭಾರತದ ಪರ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳು
1) ರವೀಂದ್ರ ಜಡೇಜಾ - 17 ಪಂದ್ಯಗಳಲ್ಲಿ 24 ವಿಕೆಟ್
2) ಇಫಾನ್ ಪಠಾಣ್ - 12 ಪಂದ್ಯಗಳಲ್ಲಿ 22 ವಿಕೆಟ್
3) ಕುಲದೀಪ್ ಯಾದವ್ - 9 ಇನ್ನಿಂಗ್ಸ್‌ಗಳಲ್ಲಿ 19 ವಿಕೆಟ್‌
4) ಸಚಿನ್ ತೆಂಡೂಲ್ಕರ್ - 23 ಪಂದ್ಯಗಳಲ್ಲಿ 17 ವಿಕೆಟ್
5) ಕಪಿಲ್ ದೇವ್ - 7 ಪಂದ್ಯಗಳಲ್ಲಿ 15 ವಿಕೆಟ್
6) ರವಿಚಂದ್ರನ್ ಅಶ್ವಿನ್ - 7 ಪಂದ್ಯಗಳಲ್ಲಿ 14 ವಿಕೆಟ್

ಮಂಗಳವಾರದ ಪಂದ್ಯದಲ್ಲಿ ಭಾರತದ ಬಿಗಿ ಬೌಲಿಂಗ್ ದಾಳಿಯು ಶ್ರೀಲಂಕಾದ 13 ಏಕದಿನ ಪಂದ್ಯಗಳ ಅಜೇಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿತು ಮತ್ತು 2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಫೈನಲ್‌ ತಲುಪಿತು.

214 ರನ್‌ಗಳ ಗುರಿ ಬೆನ್ನಟ್ಟಿದ ಆತಿಥೇಯ ಶ್ರೀಲಂಕಾ ತಂಡವನ್ನು 172 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟರು. ಎರಡೂ ತಂಡಗಳ ಸ್ಪಿನ್ನರ್‌ಗಳು ಈ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದರೆ, ಭಾರತೀಯ ವೇಗಿಗಳು ಸಹ ಶ್ರೀಲಂಕಾ ವಿರುದ್ಧ ಭಾರತ ತಂಡದ 41 ರನ್‌ಗಳ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಇದಕ್ಕೂ ಮುನ್ನ ಎದುರಾಳಿ ತಂಡದ ಪರ ದುನಿತ್ ವೆಲ್ಲಾಲಗೆ ಮತ್ತು ಚರಿತ್ ಅಸಲಂಕಾ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಕಳಿಸುವ ಮೂಲಕ 213 ರನ್‌ಗಳಿಗೆ ಆಲೌಟ್ ಮಾಡಿದ್ದರು.

Story first published: Wednesday, September 13, 2023, 15:25 [IST]
Other articles published on Sep 13, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+