Ravindra Jadeja: ಜಡೇಜಾ ಇನ್ನೇರಡು ವಿಕೆಟ್ ಪಡೆದರೆ ಕಿರೀಟಕ್ಕೆ ಮತ್ತೊಂದು ಗರಿ
ಟೀಮ್ ಇಂಡಿಯಾದಲ್ಲಿ ಸ್ಟಾರ್ ಆಟಗಾರರಿಗೆ ಏನು ಕಮ್ಮಿ ಇಲ್ಲ. ಅಡಿಯಿಂದ ಮುಡಿಯ ವರೆಗೂ ಎಲ್ಲರೂ ಸ್ಟಾರ್ ಗಿರಿಯನ್ನು ಹೊಂದಿದವರೇ. ಇದೇ ಸಾಲಿನಲ್ಲಿ ನಿಂತು ಕೊಳ್ಳುವ ಆಟಗಾರರ ಪೈಕಿ ರವೀಂದ್ರ ಜಡೇಜಾಗೆ ವಿಶೇಷ ಸ್ಥಾನ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್. ಅಷ್ಟೇ ಅಲ್ಲ ಇವರ ಹದ್ದಿನ ಕಣ್ಣುಗಳನ್ನು ತಪ್ಪಿಸಿ ಚೆಂಡು ಅಕ್ಕ ಪಕ್ಕದಲ್ಲೂ ಸುಳಿದಾಡುವುದಿಲ್ಲ. ಇವರು ಒನ್ ಆಫ್ ದಿ ಬೆಸ್ಟ್ ಫೀಲ್ಡರ್‌ಗಳಲ್ಲಿ ಒಬ್ಬರು. ಒಬ್ಬ ಆಲ್‌ರೌಂಡರ್ ಹೇಗಿರಬೇಕು ಎಂಬುದಕ್ಕೆ ಜಡ್ಡು ಬೆಸ್ಟ್ ಎಕ್ಸಾಮ್‌ಪಲ್.
ರವೀಂದ್ರ ಜಡೇಜಾ ಕೈಗೆ ನಾಯಕ ಚೆಂಡನ್ನು ನೀಡಿದರೆ, ಕಣ್ಣು ಮುಚ್ಚಿ ತೆಗೆಯುವುದರೊಳಗೆ ಓವರ್ ಮುಗಿಸಬಲ್ಲ ಕ್ಲಮತೆಯನ್ನು ಹೊಂದಿರುವ ಪ್ಲೇಯರ್. ಒಂದೇ ಸ್ಥಳದಲ್ಲಿ ಚೆಂಡನ್ನು ಸತತವಾಗಿ ಎಸೆದು, ಬ್ಯಾಟರ್‌ಗಳಿಗೆ ಪ್ರಶ್ನೆ ಕೇಳುವ ಬೌಲರ್. ಎದುರಳಿ ಬ್ಯಾಟರ್‌ಗಳ ಎಕಾಗ್ರತೆಗೆ ಭಂಗ ತಂದು ಅವರಿಗೆ ಪೆವಿಲಿಯನ್ ಹಾದಿ ತೋರಿಸುವ ಸ್ಟಾರ್. ತಂಡಕ್ಕೆ ಅವಶ್ಯಕ ಇದ್ದಾಗ ತಮ್ಮ ಮೊನಚಾದ ದಾಳಿಯ ಮುಖಾಂತರ ಕಾಡುವ ಆಲ್‌ರೌಂಡರ್.

ಎರಡು ದಾಖಲೆ ಟಾರ್ಗೆಟ್
ರವೀಂದ್ರ ಜಡೇಜಾ ಆಸ್ಟ್ರೇಲಿಯಾ ಪ್ರವಾಸ ಮುಗಿಸಿದ ಬಳಿಕ ನೇರವಾಗಿ ದೇಶೀಯ ಟೂರ್ನಿಯ ಅಖಾಡಕ್ಕೆ ಇಳಿದಿದ್ದರು. ಜಡ್ಡು ತಮ್ಮ ಕಮಾಲ್ ಸ್ಪಿನ್ ಬೌಲಿಂಗ್ ಮೂಲಕ ಸೌರಾಷ್ಟ್ರ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಈ ಮೂಲಕ ತಮ್ಮಲ್ಲಿ ಇನ್ನು ಬೌಲಿಂಗ್ ಮಾಡುವ ಕ್ಷಮತೆ ಬತ್ತಿಲ್ಲ ಎಂಬುದನ್ನು ಸಾರಿ ಹೇಳಿದ್ದರು. ಇವರು ಈಗ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯ ಮೂಲಕ ಅಂಗಳ ಪ್ರವೇಶಿಸಲಿದ್ದಾರೆ. ಚಾಂಪಿಯನ್ಸ್ ಟ್ರೋಫಿ ತಂಡದಲ್ಲೂ ಸ್ಥಾನ ಪಡೆದಿರುವ ಜಡೇಜಾ ಪ್ರದರ್ಶನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಜಡೇಜಾ ಎರಡು ದಾಖಲೆಯ ಮೇಲೆ ತಮ್ಮ ಹದ್ದಿನ ಕಣ್ಣು ನೆಟ್ಟಿದ್ದಾರೆ. ಸದ್ಯ ಇವರು ಭಾರತದ ಪರ 197 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಒಂದು ವೇಳೆ ಇಂಗ್ಲೆಂಡ್ ವಿರುದ್ಧದ ಮೂರು ಏಕದಿನ ಪಂದ್ಯಗಳನ್ನು ಆಡಿದ್ದೇ ಆದಲ್ಲಿ ಇವರು, 200 ಪಂದ್ಯಗಳನ್ನು ಆಡಿದ ಎಲೈಟ್ ಕ್ಲಬ್ ಸೇರಬಹುದು. ಈಗಾಗಲೇ ಈ ಸಾಧನೆಯನ್ನು ಭಾರತದ ಪರ 15 ಆಟಗಾರರು ಮಾಡಿದ್ದಾರೆ.

ಇನ್ನೆರಡು ವಿಕೆಟ್ ಪಡೆದರೆ...
ಇನ್ನು ಜಡೇಜಾ 197 ಏಕದಿನ ಪಂದ್ಯಗಳಲ್ಲಿ 220 ವಿಕೆಟ್ ಕಬಳಿಸಿದ್ದಾರೆ. ಈ ಸರಣಿಯಲ್ಲಿ ಇನ್ನೇರಡು ವಿಕೆಟ್ ಪಡೆದಲ್ಲಿ ಇನ್ನೊಂದು ದಾಖಲೆ ಬರೆಯಬಹುದು. ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್ ಬೌಲರ್ ಟೀಮ್ ಸೌಥಿಯ ದಾಖಲೆಯನ್ನು ಅಳಿಸಬಹುದು. ಟೀಮ್ ಸೌಥಿ ತೆಕ್ಕೆಯಲ್ಲಿ 221 ವಿಕೆಟ್‌ಗಳಿವೆ.
ರವೀಂದ್ರ ಜಡೇಜಾ 2009ರಲ್ಲಿ ಭಾರತ ತಂಡದ ಪರ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಬಳಿಕ ಇವರು ತಂಡದ ಖಾಯಂ ಸದಸ್ಯರಾದರು. ಇವರು 2013ರ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡದ ಭಾಗವಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications