ಪಿಚ್‌ನಲ್ಲಿ ಡ್ಯಾನ್ಸ್ ಮಾಡಿದ ರವೀಂದ್ರ ಜಡೇಜಾ: ವೈರಲ್ ವಿಡಿಯೋ

ಪುಣೆ, ಅಕ್ಟೋಬರ್ 12: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ದ್ವಿತೀಯ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಪುಣೆ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್ 11) ನಡೆದ ಪಂದ್ಯದಲ್ಲಿ ಭಾರತದ ಇನ್ನಿಂಗ್ಸ್‌ನಲ್ಲಿ ಆಲ್ ರೌಂಡರ್ ರವೀಂದ್ರ ಜಡೇಜಾ ಪಿಚ್‌ನಲ್ಲೇ ಕುಣಿದಾಡಿದ ಗಮ್ಮತ್ತಿನ ದೃಶ್ಯ ಸೆರೆಯಾಗಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಈ ತಮಾಷೆಯ ದೃಶ್ಯ ಕಾಣ ಸಿಕ್ಕಿದೆ. ಭಾರತದ ಮೊದಲ ಇನ್ನಿಂಗ್ಸ್‌ನ 128ನೇ ಓವರ್‌ನಲ್ಲಿ ರನ್ ಕದಿಯಲು ಮುಂದಾಗಿದ್ದ ಜಡೇಜಾ ನೃತ್ಯ ಮಾಡಬೇಕಾಗಿ ಬಂದಿತ್ತು. ಜಡೇಜಾ ಅವತಾರ ಕಂಡು ಆಚೆ ಸ್ಟೈಕ್‌ನಲ್ಲಿದ್ದ ವಿರಾಟ್ ಕೊಹ್ಲಿ ಕೂಡ ಒಮ್ಮೆ ನಕ್ಕುಬಿಟ್ಟರು.
ಭಾರತ vs ದ.ಆಫ್ರಿಕಾ, 2ನೇ ಟೆಸ್ಟ್, Live ಸ್ಕೋರ್‌ಕಾರ್ಡ್
ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಬದಲಿಗೆ 6ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದಿದ್ದ ಜಡೇಜಾ, 128ನೇ ಓವರ್‌ನಲ್ಲಿ ಅನ್ರಿಕ್ ನಾರ್ಟ್ಜೆ ಅವರ 2ನೇ ಎಸೆತಕ್ಕೆ ಬ್ಯಾಟ್ ಬೀಸಿ ಸಿಂಗಲ್ ರನ್ ತೆಗೆಯಲು ಮುಂದಾದರು. ಆಗ ಆಚೆ ಸ್ಟೈಕ್‌ನಲ್ಲಿದ್ದ ನಾಯಕ ವಿರಾಟ್ ಕೊಹ್ಲಿ ರನ್‌ಗೆ ನಿರಾಕರಿಸಿದರು.
ಕೊಹ್ಲಿ ನಿಂತಲ್ಲಿಂದ ಕದಲದಿದ್ದುದು ಗಮನಕ್ಕೆ ಬಂದಾಗ ರನ್‌ಗೆ ಮುಂದಾಗಿದ್ದ ಜಡೇಜಾ ಅಲ್ಲಿಂದ ಹಾಗೇ ಜಿಗಿದಾಡುತ್ತ ವಾಪಸ್ಸಾದರು. ಜಡೇಜಾ ಈ ವರ್ತನೆ ಪ್ರೇಕ್ಷಕರಿಗೆ ಡ್ಯಾನ್ಸ್ ರೀತಿಯಲ್ಲೇ ಕಂಡಿದೆ. ಅಂದ್ಹಾಗೆ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ, ಕೊಹ್ಲಿ ದ್ವಿಶತಕದೊಂದಿಗೆ (254 ರನ್) 601 ರನ್ ಬಾರಿಸಿ ಡಿಕ್ಲೇರ್ ಘೋಷಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications