ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯಲಿದೆ. ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ಧದ ಪಂದ್ಯದೊಂದಿಗೆ ಟೀಮ್ ಇಂಡಿಯಾ ತನ್ನ ಅಭಿಯಾನವನ್ನು ಆರಂಭಿಸಲಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಫೆಬ್ರವರಿ 23 ರಂದು ದುಬೈನಲ್ಲಿ ನಡೆಯಲಿದೆ. ಮಾರ್ಚ್ 2 ರಂದು ನ್ಯೂಜಿಲೆಂಡ್ ತಂಡವನ್ನು ಟೀಮ್ ಇಂಡಿಯಾ ಎದುರಿಸಲಿದೆ.
ಭಾರತ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಮುನ್ನಡೆದರೆ, ಸೆಮಿಫೈನಲ್ ಮತ್ತು ಫೈನಲ್ ಸೇರಿದಂತೆ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಗೆಲ್ಲುವ ಪ್ರಬಲ ಸ್ಪರ್ಧಿಯಾಗಿ ಭಾರತವನ್ನು ಪರಿಗಣಿಸಲಾಗಿದೆ. ಟೀಮ್ ಇಂಡಿಯಾ ತಂಡವನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಲು ಒಬ್ಬ ಆಟಗಾರ ಏಕಾಂಗಿಯಾಗಿ ಹೋರಾಡಬಲ್ಲರು. ಈ ಆಟಗಾರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ 'ಮ್ಯಾನ್ ಆಫ್ ದಿ ಸೀರಿಸ್ ' ಪ್ರಶಸ್ತಿ ಪಡೆಯುವ ಎಲ್ಲ ಅವಕಾಶಗಳಿವೆ.

ಟೀಮ್ ಇಂಡಿಯಾ ಪರ ಮೈದಾನದಲ್ಲಿ ಮೂವರು ಆಟಗಾರರ ಪಾತ್ರವನ್ನು ನಿರ್ವಹಿಸುವ ಪ್ರತಿಭೆ ಹೊಂದಿರುವ ಒಬ್ಬ ಕ್ರಿಕೆಟಿಗನಿದ್ದಾನೆ. 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರತಿ ಪಂದ್ಯದ ಆಡುವ ಹನ್ನೊಂದರಲ್ಲಿ ಈ ಆಟಗಾರನ ಸ್ಥಾನ ಖಚಿತ. ನಾಯಕ ರೋಹಿತ್ ಶರ್ಮಾ ಕೂಡ ಈ ಆಟಗಾರನನ್ನು ಟೀಮ್ ಇಂಡಿಯಾದ ಆಡುವ ಹನ್ನೊಂದರಿಂದ ಕೈಬಿಡಲು ಸಾಧ್ಯವಾಗುವುದಿಲ್ಲ. ಟೀಮ್ ಇಂಡಿಯಾದ ಈ ಆಟಗಾರ ಅತ್ಯುತ್ತಮ ಬ್ಯಾಟರ್, ಡೆಡ್ಲಿ ಬೌಲರ್ ಮತ್ತು ಗನ್ ಫೀಲ್ಡರ್. ಈ ಬಹುಮುಖ ಪ್ರತಿಭೆ ಬೇರೆ ಯಾರೂ ಅಲ್ಲ, ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ.
ರವೀಂದ್ರ ಜಡೇಜಾ ಒಬ್ಬ 3D ಆಟಗಾರ. ಅವರು ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂರು ವಿಭಾಗಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ವಿರುದ್ದ ಆಡಲಿರುವ ಎದುರಾಳಿ ತಂಡಗಳು
ರವೀಂದ್ರ ಜಡೇಜಾ ಬಗ್ಗೆ ಬಹಳ ಜಾಗರೂಕರಾಗಿರಬೇಕು.
ರವೀಂದ್ರ ಜಡೇಜಾ ತಮ್ಮ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂಲಕ ಪಂದ್ಯದ ಗತಿಯನ್ನು ಬದಲಾಯಿಸಬಲ್ಲ ಆಟಗಾರ. ಜಡೇಜಾ ಕೂಡ 7ನೇ ಸ್ಥಾನದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಾರೆ. ಏಕದಿನ ಕ್ರಿಕೆಟ್‌ನಲ್ಲಿ ರವೀಂದ್ರ ಜಡೇಜಾ ಏಕಾಂಗಿಯಾಗಿ ಟೀಮ್ ಇಂಡಿಯಾ ಪರ ಹಲವು ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಅವರ ಬೌಲಿಂಗ್ ಬಗ್ಗೆ ಹೇಳುವುದಾದರೆ, ತಮ್ಮ ಓವರ್‌ಗಳನ್ನು ಬಹಳ ವೇಗವಾಗಿ ಪೂರ್ಣಗೊಳಿಸುತ್ತಾರೆ. ವಿಕೆಟ್‌ನಿಂದ ವಿಕೆಟ್‌ಗೆ ಬೌಲಿಂಗ್ ಮಾಡುವ ಮೂಲಕ, ಬ್ಯಾಟರ್ ರನ್ ಗಳಿಸದಂತೆ ತಡೆಯುತ್ತಾರೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಜಡೇಜಾ ಅವರಿಂದ ಬೆಟ್ಟದಷ್ಟು ನಿರೀಕ್ಷೆಗಳಿವೆ.
ಚಾಂಪಿಯನ್ಸ್ ಟ್ರೋಫಿಯ ಇತಿಹಾಸದಲ್ಲಿ ಜಡೇಜಾ ಇದುವರೆಗೆ 16 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಟೀಮ್ ಇಂಡಿಯಾ ಪರ ರವೀಂದ್ರ ಜಡೇಜಾ 199 ಏಕದಿನ ಪಂದ್ಯಗಳಲ್ಲಿ 226 ವಿಕೆಟ್ ಪಡೆದಿದ್ದಾರೆ. ಇದಲ್ಲದೆ, ಜಡೇಜಾ ಏಕದಿನ ಪಂದ್ಯಗಳಲ್ಲಿ ಒಟ್ಟು 2779 ರನ್ ಗಳಿಸಿದ್ದು, 13 ಅರ್ಧಶತಕಗಳನ್ನು ಗಳಿಸಿದ ದಾಖಲೆ ಹೊಂದಿದ್ದಾರೆ. ಇದಲ್ಲದೆ, ಜಡೇಜಾ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಎರಡು ಬಾರಿ 5 ವಿಕೆಟ್ ಪಡೆದಿದ್ದಾರೆ. ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವೆಂದರೆ 33 ರನ್‌ಗಳಿಗೆ 5 ವಿಕೆಟ್.