Ravindra Jadeja: ಟಿ20 ವಿಶ್ವಕಪ್‌ಗೂ ಮುನ್ನ ರವೀಂದ್ರ ಜಡೇಜಾ ಕಡೆಯಿಂದ ಬಿಗ್ ಮೆಸೇಜ್; ಫ್ಯಾನ್ಸ್ ಫುಲ್ ಖುಷ್!
ಭಾನುವಾರದಂದು ಐಪಿಎಲ್ 2024ರ 53ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನಡುವೆ ಧರ್ಮಶಾಲಾದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಸಿಎಸ್‌ಕೆ ಆಲ್‌ರೌಂಡರ್ ರವೀಂದ್ರ ಜಡೇಜಾ ಅದ್ಭುತ ಪ್ರದರ್ಶನ ನೀಡಿದರು.
ಸಿಎಸ್‌ಕೆ ತಂಡ ಸಂಕಷ್ಟದಲ್ಲಿದ್ದಾಗ ಭರ್ಜರಿ ಬ್ಯಾಟಿಂಗ್ ಮಾಡಿದ ಜಡೇಜಾ ಉತ್ತಮ ರನ್ ಕಲೆ ಹಾಕಿದರು. ಬಳಿಕ ಪಂಜಾಬ್ ತಂಡದ ಪ್ರಮುಖ ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದರು. ಹೀಗಾಗಿ ಪಂಜಾಬ್ ಎದುರು ಸಿಎಸ್‌ಕೆ ಗೆಲ್ಲಲು ಸಾಧ್ಯವಾಯಿತು.

ಇದೀಗ ರವೀಂದ್ರ ಜಡೇಜಾ ಈ ಪಂದ್ಯದ ಮೂಲಕ ಬಹುನಿರೀಕ್ಷಿತ 2024ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ಯಾವುದೇ ತಂಡಕ್ಕೆ ಮಾರಕವಾಗುಬಹುದು ಎಂಬ ಸಂದೇಶವನ್ನು ನೀಡಿದ್ದಾರೆ. ಈಗಾಗಲೇ ಟಿ20 ವಿಶ್ವಕಪ್‌ನ ಭಾರತ ತಂಡದಲ್ಲಿ ರವೀಂದ್ರ ಜಡೇಜಾ ಸ್ಥಾನ ಪಡೆದುಕೊಂಡಿದ್ದು, ಇವರೊಂದಿಗೆ ಅಕ್ಷರ್ ಪಟೇಲ್ ಅವರಿಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ.
ಜಡೇಜಾ ಮತ್ತು ಅಕ್ಷರ್ ಒಂದೇ ಶೈಲಿಯ ಆಟಗಾರರಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಜಡೇಜಾ ಧರ್ಮಶಾಲಾದಲ್ಲಿ ಬಿರುಸಿನ ಪ್ರದರ್ಶನ ನೀಡುವ ಮೂಲಕ ಟಿ20 ವಿಶ್ವಕಪ್‌ನ ಭಾರತ ತಂಡದ ಆಡುವ 11ರ ಬಳಗದಲ್ಲಿ ತಮ್ಮ ಸ್ಥಾನವನ್ನು ಖಚಿತ ಪಡೆಸಿಕೊಂಡಿದ್ದಾರೆ. ಅನುಭವಿ ಆಟಗಾರನಾಗಿರುವ ಜಡೇಜಾ ಹಲವು ಪ್ರತಿಷ್ಠಿತ ಅಂತರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಜೊತೆಗೆ ಟೀಮ್ ಇಂಡಿಯಾ ಗೆಲುವಿಗಾಗಿ ತಮ್ಮ ಸಾಮರ್ಥ್ಯ ಮೀರಿ ಆಟವಾಡಿದ್ದಾರೆ. ಎಡಗೈ ಸ್ಪಿನ್ನರ್ ಆಗಿರುವ ಜಡೇಜಾ ಕಡಿಮೆ ಸಮಯದಲ್ಲಿ ತಮ್ಮ ಓವರ್ ಮುಗಿಸುವ ಚಾಣಾಕ್ಷತನವನ್ನು ಹೊಂದಿದ್ದಾರೆ. ಇಂತಹ ಆಟಗಾರ ಟೀಮ್ ಇಂಡಿಯಾದಲ್ಲಿ ಫಾರ್ಮ್‌ನಲ್ಲಿರುವುದು ಸದ್ಯಕ್ಕೆ ಎದುರಾಳಿ ತಂಡಗಳಿಗೆ ನಡುಕ ಹುಟ್ಟಿಸುವಂತಿದೆ.
ಪಂಜಾಬ್ ವಿರುದ್ಧ ಜಡೇಜಾ ಪ್ರದರ್ಶನ :
ಪಂಜಾಬ್ ವಿರುದ್ಧ ರವೀಂದ್ರ ಜಡೇಜಾ ಎದುರಿಸಿದ 26 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 165.38 ರ ಸ್ಟ್ರೈಕ್ ರೇಟ್‌ನಲ್ಲಿ 43 ರನ್ ಗಳಿಸಿದರು. ಪಂಜಾಬ್ ಇನ್ನಿಂಗ್ಸ್ ವೇಳೆ ತಮ್ಮ 4 ಓವರ್‌ಗಳಲ್ಲಿ 20 ರನ್‌ಗಳನ್ನು ಬಿಟ್ಟು ಕೊಟ್ಟು 5.00 ಸರಾಸರಿಯಲ್ಲಿ 3 ವಿಕೆಟ್‌ಗಳನ್ನು ಪಡೆದರು. ಪ್ರಭಾಸಿಮ್ರಾನ್ ಸಿಂಗ್ (20), ಸ್ಯಾಮ್ ಕರ್ರಾನ್ (7) ಮತ್ತು ಅಶುತೋಷ್ ಶರ್ಮಾ (3) ವಿಕೆಟ್ ಪಡೆಯುವಲ್ಲಿ ಜಡೇಜಾ ಯಶಸ್ವಿಯಾದರು.
ಸಿಎಸ್‌ಕೆ vs ಪಿಬಿಕೆಎಸ್ ಪಂದ್ಯದ ಫಲಿತಾಂಶ :
ಟಾಸ್ ಸೋತು ಮೊದಲು ಬ್ಯಾಟಿಂಗ್ ಚೆನ್ನೈ ಪಂಜಾಬ್ ತಂಡದ ಸಂಘಟಿಕ ಬೌಲಿಂಗ್ ದಾಳಿಗೆ ತತ್ತರಿಸಿತು. ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 167 ರನ್ ಗಳಿಸಲಷ್ಟೆ ಸಿಎಸ್‌ಕೆ ಶಕ್ತವಾಯಿತು. ಸಿಎಸ್‌ಕೆ ನೀಡಿದ 168 ರನ್‌ಗಳ ಗುರಿ ಬೆನ್ನಟ್ಟಿದ್ದ ಪಂಜಾಬ್ ಸಹಾ ಚೆನ್ನೈ ಬೌಲಿಂಗ್ ದಾಳಿಯನ್ನು ಎದುರಿಸುವಲ್ಲಿ ವಿಫಲವಾಯಿತು. ಹೀಗಾಗಿ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು 139 ರನ್ ಗಳಿಸಿತು. ಈ ಮೂಲಕ ಚೆನ್ನೈ 28 ರನ್‌ಗಳಿಂದ ಗೆಲುವು ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications