ಟಿ20 ವಿಶ್ವಕಪ್‌ನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಚಚ್ಚಿಸಿಕೊಂಡ ರವೀಂದ್ರ ಜಡೇಜಾ
ಜುಲೈ 2 ಮಂಗಳವಾರ, ವಿಶ್ವದ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ರವೀಂದ್ರ ಜಡೇಜಾ ಕೂಡ ಒಬ್ಬರು. ಟೀಮ್ ಇಂಡಿಯಾ ಪರ ಆನೇಕ ಪಂದ್ಯಗಳನ್ನು ಏಕಾಂಗಿಯಾಗಿ ಆಡಿ ಗೆಲ್ಲಿಸಿದ್ದಾರೆ.
2024ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಆದ ಕೂಡಲೇ ರವೀಂದ್ರ ಜಡೇಜಾ ಚುಟುಕು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಜಡೇಜಾ ದೀರ್ಘಕಾಲದವರೆಗೆ ಟಿ20 ಮಾದರಿಯಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಮತ್ತು ಬೌಲಿಂಗ್‌ನ ಭಾಗವಾಗಿದ್ದಾರೆ.

ಜಡೇಜಾ ಒಟ್ಟು 6 ಟಿ20 ವಿಶ್ವಕಪ್‌ಗಳಲ್ಲಿ ಭಾರತಕ್ಕೆ ಕೊಡುಗೆ ನೀಡಿದ್ದಾರೆ. ಆದರೆ ಟಿ20 ವಿಶ್ವಕಪ್‌ನಲ್ಲಿ ಜಡೇಜಾ 6 ಎಸೆತಗಳಲ್ಲಿ 6 ಸಿಕ್ಸರ್ ಚಚ್ಚಿಸಿಕೊಂಡಿದ್ದಾರೆ. ಈ ಕೆಟ್ಟ ದಾಖಲೆ ಕೇವಲ ಇಂಗ್ಲೆಂಡ್ ತಂಡ ಮಾಜಿ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಹೆಸರನಲ್ಲಿತ್ತು. ಇದೀಗ ರವೀಂದ್ರ ಜಡೇಜಾ ಅವರ ಹೆಸರಿನಲ್ಲಿಯೂ ದಾಖಲೆ ಆಗಿದೆ.
ಇತಿಹಾಸ ನಿರ್ಮಿಸಿದ ಯುವರಾಜ್ ಸಿಂಗ್
ಚೊಚ್ಚಲ 2007ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಸ್ಫೋಟಕ ಬ್ಯಾಟರ್ ಯುವರಾಜ್ ಸಿಂಗ್ ತಮ್ಮ ಬ್ಯಾಟಿಂಗ್ ಮೂಲಕ ಸಂಚಲನ ಮೂಡಿಸಿದ್ದರು. ಇಂಗ್ಲೆಂಡ್‌ನ ಮಾಜಿ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಅವರಿಗೆ ಒಂದೇ ಓವರ್‌ನಲ್ಲಿ ಸತತ 6 ಸಿಕ್ಸರ್‌ಗಳನ್ನು ಬಾರಿಸಿದ್ದರು.
ಇದು ವಿಶ್ವ ಕ್ರಿಕೆಟ್‌ನಲ್ಲಿ ವಿಶೇಷವಾದ ದಾಖಲೆಯಾಗಿತ್ತು. ಇಂದಿಗೂ ಯಾವೊಬ್ಬ ಬ್ಯಾಟರ್‌ನಿಂದಲ್ಲೂ ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ. ಇತ್ತ ರವೀಂದ್ರ ಜಡೇಜಾ ಅವರಿಗೆ 6 ಎಸೆತಗಳಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿರುವುದು ಒಂದೇ ಓವರ್‌ನಲ್ ಅಲ್ಲ. ಅಲ್ಲದೆ ಸಿಕ್ಸರ್ ಬಾರಿಸಿದ ಬ್ಯಾಟರ್ ಯಾರು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಬ್ಬರು ಬ್ಯಾಟರ್‌ಗಳಿಂದ 2010ರ ಟಿ20 ವಿಶ್ವಕಪ್‌ನಲ್ಲಿ ದಾಖಲೆ
2010ರ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ರಣ ರೋಚಕ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಜಡೇಜಾ ಅವರ ಮೊದಲ ಓವರ್‌ನ ಕೊನೆಯ ಮೂರು ಎಸೆತಗಳಲ್ಲಿ ಶೇನ್ ವ್ಯಾಟ್ಸನ್ ಅವರು 3 ಸಿಕ್ಸರ್‌ಗಳನ್ನು ಬಾರಿಸಿದ್ದರು.
ಇದಾದ ಬಳಿಕ, ಜಡೇಜಾ ತನ್ನ ಎರಡನೇ ಓವರ್ ಬೌಲ್ ಮಾಡಲು ಬಂದಾಗ, ಡೇವಿಡ್ ವಾರ್ನರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ವಾರ್ನರ್ ಮೊದಲ ಮೂರು ಎಸೆತಗಳಲ್ಲಿ 3 ಸಿಕ್ಸರ್ ಹೊಡೆದಿದ್ದರು. ಈ ಮೂಲಕ ಜಡೇಜಾ ಆರು ಎಸೆತಗಳಲ್ಲಿ 6 ಸಿಕ್ಸರ್ ಹೊಡಿಸಿಕೊಂಡ ಎರಡನೇ ಬೌಲರ್ ಎಂಬ ಕೆಟ್ಟ ದಾಖಲೆಯನ್ನು ಹೊಂದಬೇಕಾಯಿತು.
ಆಸ್ಟ್ರೇಲಿಯಾ ವಿರುದ್ಧ ಜಡೇಜಾ 2 ಓವರ್‌ಗಳಲ್ಲಿ 38 ರನ್‌ಗಳನ್ನು ನೀಡಿದ್ದರು. ಈ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 49 ರನ್‌ಗಳ ಹೀನಾಯ ಸೋಲು ಎದುರಿಸಬೇಕಾಯಿತು.
ಟಿ20 ವಿಶ್ವಕಪ್ 2024ರಲ್ಲಿ ಜಡೇಜಾ ಪ್ರದರ್ಶನ
2024ರ ಟಿ20 ವಿಶ್ವಕಪ್‌ನಲ್ಲಿ ರವೀಂದ್ರ ಜಡೇಜಾ ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ. ಈ ಬಾರಿಯ ಮೆಗಾ ಟೂರ್ನಿಯಲ್ಲಿ ಒಟ್ಟು 8 ಪಂದ್ಯಗಳನ್ನು ಆಡಿದ ಜಡೇಜಾ ಕೇವಲ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಇನ್ನೊಂದೆಡೆ ಜಡೇಜಾ ಬ್ಯಾಟಿಂಗ್‌ನಲ್ಲಿಯೂ ವಿಶೇಷವಾದುದ್ದನ್ನು ಮಾಡಲು ಸಾಧ್ಯವಾಗಲಿಲ್ಲ. ಆದರೂ ಭಾರತ ತಂಡವು ಚಾಂಪಿಯನ್ ಆಗುವ ಮೂಲಕ ಜಡೇಜಾ ಪ್ರದರ್ಶನವನ್ನು ಮರೆಮಾಡಲಾಯಿತು. ಪ್ರಶಸ್ತಿ ಗೆದ್ದ ಬಳಿಕ ಜಡೇಜಾ ಟಿ20 ಮಾದರಿಗೆ ನಿವೃತ್ತಿ ಘೋಷಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications