ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲ ಭಾರತ ತಂಡವನ್ನು ನ್ಯೂಜಿಲೆಂಡ್ ಸೋಲಿಸಿದೆ. ತವರಿನಲ್ಲಿ ಭಾರತ ತೀವ್ರ ಮುಖಭಂಗ ಅನುವಿಸಿದೆ. ವಾಂಖೆಡೆ ಟೆಸ್ಟ್ ಪಂದ್ಯ ಗೆಲ್ಲುವ ಮೂಲಕ ಕಿವೀಸ್ ಪಡೆ ಭಾರತದ ವಿರುದ್ಧ 3-0 ಅಂತರದಲ್ಲಿ ಸರಣಿ ಗೆದ್ದು ಬೀಗಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಗೆಲುವು ತಂದು ಕೊಡಲು ರಿಷಬ್ ಪಂತ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದರು. ಆದರೆ ಇನ್ನುಳಿದ ಯಾವುದೇ ಭಾರತದ ಬ್ಯಾಟರ್ ತಂಡಕ್ಕೆ ನೆರವಾಗಲಿಲ್ಲ. ಆದರೆ, ವಾಂಖೆಡೆ ಟೆಸ್ಟ್ ಪಂದ್ಯದಲ್ಲಿ ಸ್ಟಾರ್ ಸ್ಪಿನ್ನರ್ ರವೀಂದ್ರ ಜಡೇಜಾ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಮಿಂಚಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ರವೀಂದ್ರ ಜಡೇಜಾ ಸ್ಪಿನ್ ಬೌಲಂಗ್ ದಾಳಿ ನಡೆಸಿದರು. ಈ ಮೂಲಕ ರವೀಂದ್ರ ಜಡೇಜಾ ತಮ್ಮ ಹಳೆಯ ಫಾರ್ಮ್‌ಗೆ ಮರಳಿ ಸಂಚಲನ ಮೂಡಿಸಿದರು. ಮುಂಬೈನ ವಾಂಖೆಡೆ ಸ್ಟೇಡಿಯಂನ ಪಿಚ್‌ನಲ್ಲಿ ರವೀಂದ್ರ ಜಡೇಜಾ ನ್ಯೂಜಿಲೆಂಡ್ ಬ್ಯಾಟರ್‌ಗಳಿಗೆ ಕಾಡಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ 5 ವಿಕೆಟ್ ಪಡೆಯುವ ಮೂಲಕ ವಾಂಖೆಡೆ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಪಡೆದ ಸಾಧನೆ ಮಾಡಿದರು.
ವಾಂಖೆಡೆ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ 65 ರನ್‌ಗಳಿಗೆ 5 ವಿಕೆಟ್ ಪಡೆದರು. ಇದಾದ ಬಳಿಕ ಎರಡನೇ ಇನ್ನಿಂಗ್ಸ್ ನಲ್ಲೂ ಅದ್ಭುತ ಪ್ರದರ್ಶನ ನೀಡಿ 55 ರನ್ ನೀಡಿ 5 ವಿಕೆಟ್ ಕಬಳಿಸಿದರು. ರವೀಂದ್ರ ಜಡೇಜಾ ಮೂರನೇ ಬಾರಿಗೆ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಕಬಳಿಸಿದ್ದಾರೆ. ಇದರೊಂದಿಗೆ ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್‌ನಲ್ಲಿ 319 ವಿಕೆಟ್‌ಗಳನ್ನು ಪೂರೈಸಿದ್ದಾರೆ.
ಭಾರತ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿದ ರವೀಂದ್ರ ಜಡೇಜಾ ಈಗ ಐದನೇ ಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜಾ ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಈಗ ಹೊರಹೊಮ್ಮಿದ್ದಾರೆ. ರವೀಂದ್ರ ಜಡೇಜಾ 77 ಟೆಸ್ಟ್ ಪಂದ್ಯಗಳಲ್ಲಿ 319 ವಿಕೆಟ್ ಪಡೆದಿದ್ದು, 3230 ರನ್ ಗಳಿಸಿದ್ದಾರೆ.ರವೀಂದ್ರ ಜಡೇಜಾ ಅವರು ತಮ್ಮ ಅದ್ಭುತ ಪ್ರದರ್ಶನದಿಂದ ವಿಶ್ವದ ನಂಬರ್ ಒನ್ ಅಪಾಯಕಾರಿ ಆಲ್ ರೌಂಡರ್ ಎಂದು ಗುರುತಿಸಿಕೊಂಡಿದ್ದಾರೆ.
ಈಗಾಗಲೇ ರವೀಂದ್ರ ಜಡೇಜಾ ಅವರು ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಮೂರು ಮಾದರಿ ಕ್ರಿಕೆಟ್‌ನಲ್ಲಿ ರವೀಂದ್ರ ಜಡೇಜಾ ತಮ್ಮ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಅಮೋಘ ಪ್ರದರ್ಶನ ನೀಡಿದ್ದಾರೆ. ಭಾರತದ ಪರ ಅವಶ್ಯಕತೆ ಇದ್ದಾಗ ವಿಕೆಟ್ ತೆಗೆದುಕೊಡುತ್ತದ್ದರು. ಫೀಲ್ಡಿಂಗ್‌ನಲ್ಲೂ ರವೀಂದ್ರ ಜಡೇಜಾ ಮಿಂಚಿನ ವೇಗದಲ್ಲಿ ರನ್ ಔಟ್ ಮಾಡುವಲ್ಲಿ ಎತ್ತಿದ ಕೈ. ಅಲ್ಲದೆ, ಹಲವು ಕಷ್ಟಕರ ಕ್ಯಾಚ್‌ಗಳನ್ನು ಹಿಡಿದು ಭಾರತದ ಪರ ಪಂದ್ಯವನ್ನು ತಿರುಗಿಸಿದ್ದಾರೆ.
ರವೀಂದ್ರ ಜಡೇಜಾ 197 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 220 ವಿಕೆಟ್ ಮತ್ತು 74 ಟಿ20 ಪಂದ್ಯಗಳಲ್ಲಿ 54 ವಿಕೆಟ್ ಪಡೆದಿದ್ದಾರೆ. ರವೀಂದ್ರ ಜಡೇಜಾ ಏಕದಿನ ಪಂದ್ಯಗಳಲ್ಲಿ 2756 ರನ್ ಮತ್ತು ಟಿ20ಯಲ್ಲಿ 515 ರನ್ ಗಳಿಸಿದ್ದಾರೆ. ಇದಲ್ಲದೆ, 240 ಐಪಿಎಲ್ ಪಂದ್ಯಗಳಲ್ಲಿ ರವೀಂದ್ರ ಜಡೇಜಾ 160 ವಿಕೆಟ್ ಹಾಗೂ 2959 ರನ್ ಹೊಡೆದಿದ್ದಾರೆ.