For Quick Alerts
ALLOW NOTIFICATIONS  
For Daily Alerts
 

IND vs ENG: ಕಪಿಲ್ ದೇವ್, ರವಿಚಂದ್ರನ್ ಅಶ್ವಿನ್ ಎಲೈಟ್ ಕ್ಲಬ್‌ ಸೇರಿದ ರವೀಂದ್ರ ಜಡೇಜಾ

ಗುರುವಾರ, ಫೆಬ್ರವರಿ 15ರಂದು ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆರಂಭವಾಗಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ ಶತಕ ಸಿಡಿಸಿದರು.

ಭಾರತ ತಂಡ 33 ರನ್‌ಗಳಿಗೆ ಅಗ್ರ ಕ್ರಮಾಂಕದ 3 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿತ್ತು. ಈ ವೇಳೆ ನಾಯಕ ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಜೋಡಿ ನಾಲ್ಕನೇ ವಿಕೆಟ್‌ಗೆ 204 ರನ್‌ಗಳ ಜೊತೆಯಾಟ ನಿರ್ಮಿಸಿ ಭಾರತದ ಹೋರಾಟಕ್ಕೆ ಜೀವ ತುಂಬಿದರು.

Ravindra Jadeja Joins Kapil Dev, R Ashwins Elite Club After 3000 Runs In Test Cricket

ಇದೇ ವೇಳೆ ರವೀಂದ್ರ ಜಡೇಜಾ ಅವರು ತಮ್ಮ ಭರ್ಜರಿ ಶತಕದೊಂದಿಗೆ ಕಪಿಲ್ ದೇವ್ ಮತ್ತು ರವಿಚಂದ್ರನ್ ಅಶ್ವಿನ್ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ 3000 ರನ್ ಮತ್ತು 250 ಪ್ಲಸ್ ವಿಕೆಟ್‌ಗಳ ಡಬಲ್ ಸಾಧನೆ ಮಾಡಿದ ಮೂರನೇ ಭಾರತೀಯ ಆಟಗಾರನಾದರು.

ರಾಜ್‌ಕೋಟ್‌ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧದ ಭಾರತದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಈ ಸಾಧನೆ ಮಾಡಿದರು.

ಆಸ್ಟ್ರೇಲಿಯಾ ಲೆಜೆಂಡ್ ಶೇನ್ ವಾರ್ನ್ ಮತ್ತು ನ್ಯೂಜಿಲೆಂಡ್‌ನ ಡೇನಿಯಲ್ ವೆಟ್ಟೋರಿ ನಂತರ, ರವೀಂದ್ರ ಜಡೇಜಾ ಅವರು 3000 ರನ್ ಮತ್ತು 250 ಪ್ಲಸ್ ವಿಕೆಟ್‌ಗಳ ಹೆಗ್ಗುರುತು ತಲುಪಿದ ಮೂರನೇ ಸ್ಪಿನ್-ಬೌಲಿಂಗ್ ಆಲ್‌ರೌಂಡರ್ ಎನಿಸಿದರು.

Ravindra Jadeja Joins Kapil Dev, R Ashwins Elite Club After 3000 Runs In Test Cricket

ಸ್ಟುವರ್ಟ್ ಬ್ರಾಡ್, ಸರ್ ರಿಚರ್ಡ್ ಹ್ಯಾಡ್ಲಿ, ಶಾನ್ ಪೊಲಾಕ್, ಇಯಾನ್ ಬೋಥಮ್, ಇಮ್ರಾನ್ ಖಾನ್, ಚಮಿಂಡಾ ವಾಸ್ ಮತ್ತು ಜಾಕ್ವೆಸ್ ಕಾಲಿಸ್ ಈ ಸಾಧನೆ ಮಾಡಿದ ಇತರ ಕ್ರಿಕೆಟಿಗರಾಗಿದ್ದಾರೆ.

ರಾಜ್‌ಕೋಟ್ ಟೆಸ್ಟ್‌ ಪಂದ್ಯದ ಮೊದಲ ದಿನದಂದು, ರವೀಂದ್ರ ಜಡೇಜಾ ಅವರು ತಮ್ಮ ನಾಲ್ಕನೇ ಟೆಸ್ಟ್ ಶತಕವನ್ನು ಗಳಿಸಿದ ನಂತರ 3000 ಟೆಸ್ಟ್ ರನ್‌ಗಳನ್ನು ಪೂರೈಸಿದರು.

ಟೆಸ್ಟ್ ಕ್ರಿಕೆಟ್‌ನಲ್ಲಿ 3000 ರನ್, 250 ಪ್ಲಸ್ ವಿಕೆಟ್‌ ಪಡೆದ ಆಟಗಾರರು

ಶೇನ್ ವಾರ್ನ್ - 3154 ರನ್ ಮತ್ತು 708 ವಿಕೆಟ್

ಸ್ಟುವರ್ಟ್ ಬ್ರಾಡ್ - 3662 ರನ್ ಮತ್ತು 604 ವಿಕೆಟ್

ರವಿಚಂದ್ರನ್ ಅಶ್ವಿನ್ - 3271 ರನ್ ಮತ್ತು 499 ವಿಕೆಟ್

ಕಪಿಲ್ ದೇವ್ - 5248 ರನ್ ಮತ್ತು 434 ವಿಕೆಟ್

ಸರ್ ರಿಚರ್ಡ್ ಹ್ಯಾಡ್ಲಿ - 3124 ರನ್ ಮತ್ತು 431 ವಿಕೆಟ್

ಶಾನ್ ಪೊಲಾಕ್ - 3781 ರನ್ ಮತ್ತು 421 ವಿಕೆಟ್

ಇಯಾನ್ ಬೋಥಮ್ - 5200 ರನ್ ಮತ್ತು 383 ವಿಕೆಟ್

ಇಮ್ರಾನ್ ಖಾನ್ - 3807 ರನ್ ಮತ್ತು 362 ವಿಕೆಟ್

ಡೇನಿಯಲ್ ವೆಟ್ಟೋರಿ - 4531 ರನ್ ಮತ್ತು 362 ವಿಕೆಟ್

ಚಾಮಿಂದಾ ವಾಸ್ - 3089 ರನ್ ಮತ್ತು 355 ವಿಕೆಟ್

ಜಾಕ್ವೆಸ್ ಕಾಲಿಸ್ - 13289 ರನ್ ಮತ್ತು 292 ವಿಕೆಟ್

ರವೀಂದ್ರ ಜಡೇಜಾ - 3003 ರನ್ ಮತ್ತು 280 ವಿಕೆಟ್

ಗಾಯದಿಂದ ಚೇತರಿಸಿಕೊಂಡು ಬಮದು ಸಿಡಿದ ರವೀಂದ್ರ ಜಡೇಜಾ

ವಿಶಾಖಪಟ್ಟಣ ಟೆಸ್ಟ್‌ ಪಂದ್ಯವನ್ನು ತಪ್ಪಿಸಿಕೊಂಡ ನಂತರ, ರವೀಂದ್ರ ಜಡೇಜಾ ತಮ್ಮ ತವರು ರಾಜ್‌ಕೋಟ್‌ ಮೈದಾನದ ಎಲ್ಲಾ ಮೂಲೆಮೂಲೆಗೂ ಚೆಂಡನ್ನು ಕಳಿಸಿದರು. ಭಾರತ ತಂಡ 8.5 ಓವರ್‌ಗಳಲ್ಲಿ 3 ವಿಕೆಟ್‌ಗೆ 33 ರನ್‌ಗಳೊಂದಿಗೆ ಹೆಣಗಾಡುತ್ತಿದ್ದಾಗ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರು.

ಮೊದಲ ದಿನದ ಕೊನೆಯ ಸೆಷನ್‌ನಲ್ಲಿ ರವೀಂದ್ರ ಜಡೇಜಾ 198 ಎಸೆತಗಳಲ್ಲಿ ಶತಕ ಪೂರೈಸಿದರು. ಮೊದಲ ದಿನದ ಸ್ಟಂಪ್‌ನ ಹೊತ್ತಿಗೆ ರವೀಂದ್ರ ಜಡೇಜಾ 212 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 110 ರನ್ ಗಳಿಸಿ ಅಜೇಯರಾಗುಳಿದರೆ, ಅವರ ಜೊತೆಗೆ ನೈಟ್ ವಾಚ್‌ಮನ್ ಆಗಿ ಬಂದಿದ್ದ ಕುಲದೀಪ್ ಯಾದವ್ ಕೂಡ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Story first published: Thursday, February 15, 2024, 20:01 [IST]
Other articles published on Feb 15, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+