ಟೀಮ್ ಇಂಡಿಯಾದ ಬಯೋ ಬಬಲ್ ಸೇರಿದ ರವೀಂದ್ರ ಜಡೇಜಾ

ಮುಂಬೈ: ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ಟೀಮ್ ಇಂಡಿಯಾದ ಬಯೋಬಬಲ್ ಸೇರಿಕೊಂಡಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ಧವಾಗಿರುವ ಭಾರತ ತಂಡದಲ್ಲಿರುವ ಜಡೇಜಾ ಮುಂಬೈಯಲ್ಲಿ ಸೋಮವಾರ (ಮೇ 24)ದಿಂದ ಕ್ವಾರಂಟೈನ್ ಆರಂಭಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಹಾಕಿಕೊಂಡಿರುವ ರವಿಂದ್ರ ಜಡೇಜಾ, 'ಪಯಣ ಆರಂಭ' ಎಂದು ಬರೆದುಕೊಂಡಿದ್ದಾರೆ. ಕಳೆದ ವಾರ ಮಿಥಾಲಿ ರಾಜ್, ಆರ್ ಅಶ್ವಿನ್, ಮೊಹಮ್ಮದ್ ಸಿರಾಜ್, ಮಯಾಂಕ್ ಅಗರ್ವಾಲ್ ಮತ್ತು ವಾಷಿಂಗ್ಟನ್ ಸುಂದರ್ ಚಾರ್ಟರ್ಡ್ ಫ್ಲೈಟ್ ಮೂಲಕ ಮುಂಬೈಗೆ ಬಂದಿದ್ದರು.
ಮುಂಬೈಯಲ್ಲಿ ಕ್ವಾರಂಟೈನ್ ಬಳಿಕ ಪುರುಷ-ಮಹಿಳೆಯರನ್ನೊಳಗೊಂಡ ಭಾರತೀಯ ತಂಡ ಜೂನ್ 2ರಂದು ಇಂಗ್ಲೆಂಡ್‌ಗೆ ಹೊರಡಲಿದೆ. ಅಲ್ಲಿ ಪರುಷರ ತಂಡಕ್ಕೆ ನ್ಯೂಜಿಲೆಂಡ್ ವಿರುದ್ಧ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಮತ್ತು ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.
ಮಹಿಳಾ ತಂಡಕ್ಕೆ ಇಂಗ್ಲೆಂಡ್‌ನಲ್ಲಿ ಒಂದು ಟೆಸ್ಟ್ ಪಂದ್ಯ, ಮೂರು ಏಕದಿನ ಪಂದ್ಯ ಮತ್ತು ಮೂರು ಟಿ20ಐ ಪಂದ್ಯ ನಡೆಯಲಿದೆ. ಐಪಿಎಲ್ 2021ರ ಆವೃತ್ತಿಯಲ್ಲಿ ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ಪರ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಕೋವಿಡ್-19 ಕಾರಣ ಐಪಿಎಲ್ 14ನೇ ಆವೃತ್ತಿ ಮುಂದೂಡಲ್ಪಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications