Ravindra Jadeja: ಎಲೈಟ್ ಕ್ಲಬ್ ಸೇರಿದ ರವೀಂದ್ರ ಜಡೇಜಾ: 300 ವಿಕೆಟ್ ಪಡೆದ ಆಲ್‌ರೌಂಡರ್
ಟೀಮ್ ಇಂಡಿಯಾ ಹಾಗೂ ಬಾಂಗ್ಲಾದೇಶ ನಡುವಣ ಎರಡನೇ ಟೆಸ್ಟ್ ಪಂದ್ಯ ಕಾನ್ಪುರ್‌ದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬಾಂಗ್ಲಾದೇಶವನ್ನು ಮೊದಲ ಇನಿಂಗ್ಸ್‌ನಲ್ಲಿ 233 ರನ್‌ಗಳಿಗೆ ಆಲೌಟ್ ಮಾಡಿತು. ಈ ಪಂದ್ಯದಲ್ಲಿ ಭಾರತದ ಎಲ್ಲ ಬೌಲರ್‌ಗಳು ವಿಕೆಟ್ ಪಡೆದು ಮಿಂಚಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಈ ಪಂದ್ಯದಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ.
ಬಾಂಗ್ಲಾದೇಶ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಸೋಮವಾರ ಭಾರತದ ಬೌಲರ್‌ಗಳು ಅಬ್ಬರಿಸಿದ್ದಾರೆ. ತಮ್ಮ ಟೆಸ್ಟ್ ಕ್ರಿಕೆಟ್‌ನ 300ನೇ ವಿಕೆಟ್ ಪಡೆಯಲು ಇನ್ನೊಂದೇ ವಿಕೆಟ್ ಹಿಂದೆ ನಿಂತಿದ್ದ ಜಡ್ಡು, ಬಾಂಗ್ಲಾ ವಿರುದ್ಧದ ಮೊದಲ ಇನಿಂಗ್ಸ್‌ನ ಕೊನೆಯ ವಿಕೆಟ್ ಪಡೆದು ದಾಖಲೆಯ ಪುಟಕ್ಕೆ ಎಂಟ್ರಿ ನೀಡಿದ್ದಾರೆ.

ಜಡೇಜಾ @ 300
ಬಾಂಗ್ಲಾದೇಶದ ಖಲೀದ್ ಅಹ್ಮದ್ ಅವರಿಗೆ ಖೆಡ್ಡಾ ತೋಡುವ ಮೂಲಕ ರವೀಂದ್ರ ಜಡೇಜಾ ಇತಿಹಾಸ ನಿರ್ಮಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್ ಪಡೆದ ಭಾರತದ ಮೊದಲ ಎಡಗೈ ಸ್ಪಿನ್ ಬೌಲರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ತಮ್ಮ ಬೌಲಿಂಗ್ ಜೊತೆಗಾರ ರವಿಚಂದ್ರನ್ ಅಶ್ವಿನ್ ಹಾಗೂ ದಿಗ್ಗಜ ಆಲ್‌ರೌಂಡರ್ ಕಪಿಲ್ ದೇವ್ ಅವರ ವಿಶೇಷ ಕ್ಲಬ್ ಸೇರಿದ್ದಾರೆ.
ಏಳನೇ ಬೌಲರ್
ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್‌ಗಳ ಲ್ಯಾಂಡ್ ಮಾರ್ಕ್ ದಾಟಿದ ಏಳನೇ ಬೌಲರ್ ಎಂಬ ಕೀರ್ತಿ ಜಡ್ಡು ಅವರ ಪಾಲಾಗಿದೆ. ಇದಕ್ಕೂ ಮೊದಲು ಅನಿಲ್ ಕುಂಬ್ಳೆ (619), ರವಿಚಂದ್ರನ್ ಅಶ್ವಿನ್ (524), ಕಪಿಲ್ ದೇವ್ (434), ಹರ್ಭಜನ್ ಸಿಂಗ್ (417), ಇಶಾಂತ್ ಶರ್ಮಾ (311), ಜಹೀರ್ ಖಾನ್ (311) ಈ ಸಾಧನೆ ಮಾಡಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 300 ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಜಡೇಜಾಗೆ ಎರಡನೇ ಸ್ಥಾನ. ಇವರಿಗಿಂತಲೂ ಮೊದಲು ಇಯಾನ್ ಬಾಥಮ್ ಇದ್ದಾರೆ. ಇವರು 72 ಟೆಸ್ಟ್ ಪಂದ್ಯಗಳಲ್ಲಿ 300 ವಿಕೆಟ್ ಪಡೆದ ಸಾಧನೆ ಮಾಡಿದರೆ, ಜಡ್ಡು 74 ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ 3000 ರನ್ ಹಾಗೂ 300 ವಿಕೆಟ್ ಪಡೆದ ವಿಶ್ವದ 11ನೇ ಆಟಗಾರ ಎಂಬ ಹಣೆ ಪಟ್ಟಿಯನ್ನು ಸಹ ರವೀಂದ್ರ ಜಡೇಜಾ ಪಡೆದಿದ್ದಾರೆ.
ಇದಕ್ಕೂ ಮೊದಲು ಭಾರತದ ಪರ ರವಿಚಂದ್ರನ್ ಅಶ್ವಿನ್ ಹಾಗೂ ಕಪಿಲ್ ದೇವ್ ಮಾತ್ರ ಈ ಸಾಧನೆ ಮಾಡಿದ್ದರು. ಇನ್ನು ಭಾರತದ ಪರ 300 ವಿಕೆಟ್ ಪಡೆದ ಮೊದಲ ಎಡಗೈ ಸ್ಪಿನ್ ಬೌಲರ್ ಎಂಬ ಕೀರ್ತಿ ಇವರದ್ದಾದರೆ, ವಿಶ್ವದಲ್ಲೇ ಈ ಸಾಧನೆ ಮಾಡಿದ ಮೂರನೇ ಬೌಲರ್. ಇವರಿಗಿಂತಲೂ ಮೊದಲು ಡೇನಿಯಲ್ ವಿಟ್ಟೋರಿ (362), ರಂಗಣ ಹೆರಾತ್ (433) ಸಾಧನೆ ಮಾಡಿದ್ದ ಎಡಗೈ ಸ್ಪಿನ್ ಬೌಲರ್ಸ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications