Duleep Trophy 2024: ಜಡೇಜಾ, ಸಿರಾಜ್ -ಉಮ್ರಾನ್ ಮಲಿಕ್ ಬದಲಿಗೆ ಹೊಸ ಆಟಗಾರರ ಘೋಷಣೆ; ಕಾರಣವೇನು?
ಶ್ರೀಲಂಕಾ ಪ್ರವಾಸದ ನಂತರ ಟೀಮ್ ಇಂಡಿಯಾ ಆಟಗಾರರು ವಿಶ್ರಾಂತಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದುಲೀಪ್ ಟ್ರೋಫಿ ಟೂರ್ನಿಗಾಗಿ ತಂಡಗಳನ್ನು ಪ್ರಕಟಿಸಿದೆ. ಸೆಪ್ಟೆಂಬರ್ 5 ರಿಂದ ಟೂರ್ನಿ ಆರಂಭವಾಗಲಿದೆ.
ಟೀಮ್ ಇಂಡಿಯಾ ಸ್ಟಾರ್ ಆಟಗಾರರು ಕೂಡ ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. ಇದೀಗ ಏಕಾಏಕಿ ಟೀಮ್ ಇಂಡಿಯಾದ ವೇಗದ ಬೌಲರ್‌ಗಳಾದ ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ದುಲೀಪ್ ಟ್ರೋಫಿ ಬಿಡುಗಡೆ ಮಾಡಲಾಗಿದೆ. ಈ ಮೂವರ ಸ್ಥಾನಕ್ಕೆ ಬದಲಿ ಆಟಗಾರರನ್ನು ಕೂಡ ಬಿಸಿಸಿಐ ಪ್ರಕಟಿಸಿದೆ.

ಹೊರಗುಳಿಯಲು ಕಾರಣವೇನು?
ಮೊಹಮ್ಮದ್ ಸಿರಾಜ್ ಮತ್ತು ಉಮ್ರಾನ್ ಮಲಿಕ್ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಇಬ್ಬರೂ ಚೇತರಿಸಿಕೊಳ್ಳುವ ಭರವಸೆ ಇಲ್ಲದ ಕಾರಣ ಟೂರ್ನಿಯಿಂದ ಹೊರಗುಳಿದಿದ್ದಾರೆ. ಆದರೆ ರವೀಂದ್ರ ಜಡೇಜಾ ಅವರನ್ನು ಬಿಡುಗಡೆ ಮಾಡಿರುವುದಕ್ಕೆ ಇನ್ನೂ ಕಾರಣ ನೀಡಿಲ್ಲ.
ಜಡೇಜಾ ಮತ್ತು ಸಿರಾಜ್ ಭಾರತ-ಬಿ ತಂಡದಲ್ಲಿದ್ದರೆ, ಉಮ್ರಾನ್ ಭಾರತ-ಸಿ ತಂಡದ ಭಾಗವಾಗಿದ್ದರು. ಸಿರಾಜ್ ಬದಲಿಗೆ ನವದೀಪ್ ಸೈನಿ ಮತ್ತು ಉಮ್ರಾನ್ ಸ್ಥಾನದಲ್ಲಿ ಗೌರವ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆದರೆ, ಜಡೇಜಾ ಅವರ ಬದಲಿ ಆಟಗಾರನ ಹೆಸರನ್ನು ಬಹಿರಂಗಪಡಿಸಿಲ್ಲ.
ದುಲೀಪ್ ಟ್ರೋಫಿಯ ಪಂದ್ಯಗಳು ಆಂಧ್ರಪ್ರದೇಶದ ಅನಂತಪುರ ಮತ್ತು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲವೆ. ಪ್ರತಿಷ್ಠಿತ ಟೂರ್ನಿಯಲ್ಲಿ ನಿತೀಶ್ ಕುಮಾರ್ ರೆಡ್ಡಿ ಭಾಗವಹಿಸುವುದು ಅವರ ಫಿಟ್‌ನೆಸ್ ಮೇಲೆ ಅವಲಂಬಿತವಾಗಿದೆ ಎಂದು ಬಿಸಿಸಿಐ ಈಗಾಗಲೇ ತಿಳಿಸಿದೆ.
ದುಲೀಪ್ ಟ್ರೋಫಿ-2024 ತಂಡಗಳು
ಭಾರತ ಎ: ಶುಭಮನ್ ಗಿಲ್ (ನಾಯಕ), ಮಯಾಂಕ್ ಅಗರ್ವಾಲ್, ರಿಯಾನ್ ಪರಾಗ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ತಿಲಕ್ ವರ್ಮಾ, ಶಿವಂ ದುಬೆ, ತನುಷ್ ಕೋಟ್ಯಾನ್, ಕುಲದೀಪ್ ಯಾದವ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಖಲೀಲ್ ಅಹ್ಮದ್, ಅವೇಶ್ ಖಾನ್ , ವಿದ್ವತ್ ಕಾವೇರಪ್ಪ, ಕುಮಾರ್ ಕುಶಾಗ್ರ, ಶಾಶ್ವತ್ ರಾವತ್.
ಭಾರತ ಬಿ : ಅಭಿಮನ್ಯು ಈಶ್ವರನ್ (ನಾಯಕ), ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಮುಶೀರ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಯಶ್ ದಯಾಳ್, ಮುಖೇಶ್ ಕುಮಾರ್, ರಾಹುಲ್ ಚಾಹರ್, ಆರ್ ಸಾಯಿ ಕಿಶೋರ್, ಮೋಹಿತ್ ಅವಸ್ತಿ , ಎನ್. ಜಗದೀಸನ್.
ಭಾರತ ಸಿ: ಋತುರಾಜ್ ಗಾಯಕ್‌ವಾಡ್ (ನಾಯಕ), ಸಾಯಿ ಸುದರ್ಶನ್, ರಜತ್ ಪಾಟಿದಾರ್, ಅಭಿಷೇಕ್ ಪೊರೆಲ್ (ವಿಕೆಟ್‌ಕೀಪರ್), ಸೂರ್ಯಕುಮಾರ್ ಯಾದವ್, ಬಿ ಇಂದರ್‌ಜೀತ್, ಹೃತಿಕ್ ಶೌಕೀನ್, ಮಾನವ್ ಸುತಾರ್, ಗೌರವ್ ಯಾದವ್, ವಿಶಾಕ್ ವಿಜಯ್‌ಕುಮಾರ್, ಅನ್ಶುಲ್ ಖಂಬೋಜ್, ಹಿಮಾಂಶು ಜುಹಾನ್, ಮಯನ್ ಜು ಮರ್ಕಂಡೆ, , ಸಂದೀಪ್ ವಾರಿಯರ್.
ಭಾರತ ಡಿ : ಶ್ರೇಯಸ್ ಅಯ್ಯರ್ (ನಾಯಕ), ಅಥರ್ವ ತಾಯ್ಡೆ, ಯಶ್ ದುಬೆ, ದೇವದತ್ ಪಡಿಕ್ಕಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಕಿ ಭುಯಿ, ಸರನ್ಶ್ ಜೈನ್, ಅಕ್ಸರ್ ಪಟೇಲ್, ಅರ್ಷ್‌ದೀಪ್ ಸಿಂಗ್, ಆದಿತ್ಯ ಠಾಕ್ರೆ, ಹರ್ಷಿತ್ ರಾಣಾ, ಅಕ್ಸರ್ ದೇಶಪಾಂಡೆ, ತುಷಾರ್ ದೇಶಪಾಂಡೆ , ಕೆಎಸ್ ಭರತ್ (ವಿಕೆಟ್‌ಕೀಪರ್), ಸೌರಭ್ ಕುಮಾರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications