Ravindra Jadeja ಗನ್ ಥ್ರೋಗೆ ಸ್ಟಂಪ್ ಪೀಸ್ ಪೀಸ್
19ನೇ ಆವೃತ್ತಿಯ ಐಪಿಎಲ್ ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ವೇಳೆ 10 ತಂಡಗಳು ಟ್ರೋಫಿ ಎತ್ತುವ ಕನಸು ಕಾಣುತ್ತಿವೆ. ಎರಡನೇ ಬಾರಿ ಪ್ರಶಸ್ತಿಗೆ ಮುತ್ತಿಡುವ ಕನಸು ರಾಜಸ್ಥಾನ ರಾಯಲ್ಸ್ ತಂಡದ್ದಾಗಿದೆ. ರಾಜಸ್ಥಾನ ರಾಯಲ್ಸ್ ತಂಡ ಈ ಬಾರಿ ಬಲಾಢ್ಯವಾಗಿದ್ದು, ಸ್ಟಾರ್ ಆಟಗಾರರಿಂದ ಕೂಡಿದೆ. ಯುವ ಹಾಗೂ ಅನುಭವಿ ಆಟಗಾರರ ದಂಡೇ ರಾಜಸ್ಥಾನ ತಂಡದಲ್ಲಿದ್ದು, ಈ ಬಾರಿ ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದೆ. ಈ ವೇಳೆ ತಂಡಕ್ಕೆ ಅನುಭವಿ ಆಟಗಾರ ರವೀಂದ್ರ ಜಡೇಜಾ ಅವರು ಸೇರಿಕೊಂಡಿದ್ದು ಆನೆ ಬಲ ಬಂದಂತೆ ಆಗಿದೆ.
ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಕ್ರಿಕೆಟ್ ಮೈದಾನದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಿಂದ ತಮ್ಮ ಕ್ಷಮತೆ ಸಾಬೀತು ಪಡಿಸಿದ ಆಟಗಾರ. ಇನ್ನು ಇವರ ಫೀಲ್ಡಿಂಗ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಜಡ್ಡು ಆಸುಪಾಸಿನಲ್ಲಿ ಚೆಂಡು ಹೋದರೂ ಸಹ ಬ್ಯಾಟರ್ ರನ್ ಕದಿಯಲು ಎರಡು ಬಾರಿ ಯೋಚಿಸುತ್ತಾರೆ. ಏಕೆಂದರೆ ಜಡೇಜಾ ಗನ್ ಥ್ರೋ ಫೀಲ್ಡರ್. ಇದಕ್ಕೆ ಸಾಕ್ಷಿ ಎಂಬಂತೆ ರಾಜಸ್ಥಾನ ರಾಯಲ್ಸ್ ಅಭ್ಯಾಸದ ವೇಳೆ ಜಡೇಜಾ ತಮ್ಮ ಫೀಲ್ಡಿಂಗ್ ಕ್ಷಮತೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಅದರ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ರಾಜಸ್ಥಾನ ರಾಯಲ್ಸ್ ತಂಡ ತನ್ನ ಸಾಮಾಜಿಕ ತಾಣದಲ್ಲಿ ವಿಡಿಯೊಗಳನ್ನು ಅಪ್‌ಲೋಡ್ ಮಾಡುತ್ತಾ ಇರುತ್ತದೆ. ಇದರಲ್ಲಿ ಶನಿವಾರ ಹಂಚಿಕೊಂಡ ವೀಡಿಯೋ ಜಡೇಜಾ ಅವರ ಫೀಲ್ಡಿಂಗ್ ಸಾಮರ್ಥ್ಯವನ್ನು ಎತ್ತಿ ತೋರಿಸಿದಂತೆ ಇದೆ.
ಸ್ಟಂಪ್ ಪೀಸ್ ಪೀಸ್
ಜಡೇಜಾ ಫೀಲ್ಡಿಂಗ್ ಮಾಡುವ ವಿಡಿಯೋವನ್ನು ರಾಜಸ್ಥಾನ ಹಂಚಿಕೊಂಡಿದೆ. ಈ ವೇಳೆ ಜಡೇಜಾ ಮಾಡಿದ ಗನ್ ಥ್ರೋಗೆ ಮಿಡ್ಲ್ ಸ್ಟಂಪ್ ಪೀಸ್ ಪೀಸ್ ಆಗಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸುತ್ತಿದೆ. ಜಡೇಜಾ ಮೊದಲು ಓಡುವಾಗ ಚೆಂಡನ್ನು ಹಿಡಿದು ನಂತರ ನೇರವಾಗಿ ಮಧ್ಯದ ಸ್ಟಂಪ್‌ಗೆ ಹೊಡೆಯುತ್ತಾರೆ. ಈ ಥ್ರೋ ದಿಂದ ಮಧ್ಯದ ಸ್ಟಂಪ್ ಮುರಿಯುತ್ತದೆ. 37 ವರ್ಷದಲ್ಲೂ ಜಡೇಜಾ ಅವರ ಫೀಲ್ಡಿಂಗ್ ಯುವಕರನ್ನು ನಾಚಿಸುವಂತೆ ಇದೆ. ಇವರನ್ನು ವಿಶ್ವದ ಶ್ರೇಷ್ಠ ಫೀಲ್ಡರ್‌ಗಳಲ್ಲಿ ಗುರುತಿಸಲಾಗುತ್ತದೆ.
ರವೀಂದ್ರ ಜಡೇಜಾ ಸದ್ಯ ಭಾರತದ ನಂಬರ್ ಫೀಲ್ಡರ್. ಇವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಮಾತ್ರ ಆಡುತ್ತಾರೆ. ಈ ಬಾರಿ ಜಡ್ಡು ತಮ್ಮ ಐಪಿಎಲ್ ವೃತ್ತಿ ಜೀವನವನ್ನು ಆರಂಭಿಸಿದ ರಾಜಸ್ಥಾನ ರಾಯಲ್ಸ್ ತಂಡವನ್ನು ಸೇರಿದ್ದಾರೆ. ಐಪಿಎಲ್ ಹರಾಜಿಗೂ ಮುನ್ನ ಆರ್‌ಆರ್ ಜಡೇಜಾ ಅವರನ್ನು 14 ಕೋಟಿ ರೂ.ಗೆ ಖರೀದಿಸಿತ್ತು. ಜಡೇಜಾ ಬಹು ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರರಾಗಿದ್ದರು.
ರಾಜಸ್ಥಾನ ರಾಯಲ್ಸ್ ಪ್ರಸಕ್ತ ಆವೃತ್ತಿಯ ಮೊದಲ ಪಂದ್ಯವನ್ನು ಮಾರ್ಚ್ 30 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications