ಜುಲೈ 17 ಬುಧವಾರ, ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿದಕ್ಕೆ ಇಡೀ ದೇಶ ಸಂಭ್ರಮಾಚರಣೆ ಮಾಡಿತ್ತು. ಚಾಂಪಿಯನ್ ಟೀಮ್ ಇಂಡಿಯಾ ಆಟಗಾರರು ತವರಿಗೆ ಮರಳಿದಾಗ ಅದ್ದೂರಿಯಾಗಿ ಸ್ವಾಗತ ಕೋರಲಾಗಿತ್ತು.
ಇದಾದ ನಂತರ ಪ್ರತಿಯೊಬ್ಬ ಆಟಗಾರರು ವಿಭಿನ್ನ ರೀತಿಯಲ್ಲಿ ವಿಜಯೋತ್ಸವನ್ನು ಆಚರಿಸಿದ್ದರು. ಇದೀಗಾ ಟೀಮ್ ಇಂಡಿಯಾ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಆಚರಿಸಿದ ಶೈಲಿ ಎಲ್ಲರ ಮನ ಮುಟ್ಟಿದೆ.

ರವೀಂದ್ರ ಜಡೇಜಾ ತಮ್ಮ ತಾಯಿ ಲತಾ ಅವರನ್ನು ನೆನೆದು ಭಾವುಕ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಜಡೇಜಾ ತನ್ನ ತಾಯಿಯೊಂದಿಗೆ ಇದ್ದಾರೆ.
ಒಂದು ಕೈಯಲ್ಲಿ ಟಿ20 ವಿಶ್ವಕಪ್ ಹಿಡಿದು ಇನ್ನೊಂದು ಕೈಯಿಂದ ತಾಯಿಯನ್ನು ಹಿಡಿದಿರುವ ಜಡೇಜಾ ಅವರ ಸ್ಕೆಚ್ ಮಾಡಿರುವ ಫೋಟೋ ಸಖತ್ ವೈರಲ್ ಆಗಿದೆ. 'ನಾನು ಮೈದಾನದಲ್ಲಿ ಏನು ಮಾಡಿದರೂ ಅದು ನಿಮಗೆ ಸಮರ್ಪಣೆ' ಎಂದು ಈ ಫೋಟೋದೊಂದಿಗೆ ಜಡೇಜಾ ಭಾವನಾತ್ಮಕ ಬರಹವನ್ನು ಬರೆದುಕೊಂಡಿದ್ದಾರೆ.
ಟಿ20 ವಿಶ್ವಕಪ್ 2024ರಲ್ಲಿ ಜಡೇಜಾ ಯಾವುದೇ ಸ್ಫೋಟಕ ಪ್ರದರ್ಶನ ನೀಡದೆ ಹೋದರೂ, ತಂಡದಲ್ಲಿ ಸಮತೋಲನ ಕಾಯ್ದುಕೊಂಡು ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2005ರಲ್ಲಿ ಜಡ್ಡುಗೆ ಕೇವಲ 17 ವರ್ಷ ವಯಸ್ಸಾಗಿದ್ದಾಗ ಅವರ ತಾಯಿ ಲತಾ ನಿಧನರಾದರು.
ಭಾರತ ಟಿ20 ವಿಶ್ವಕಪ್ ಗೆದ್ದ ಬಳಿಕ ಜಡೇಜಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಇದಾದ ಬಳಿಕ ಪೋಸ್ಟ್ ಮಾಡಿದ್ದ ಜಡ್ಡು, "ಈ ಗೆಲುವು ತನ್ನ ವೃತ್ತಿಜೀವನದ 'ಪರಾಕಾಷ್ಠೆ' ಮತ್ತು ಆಟದ ಇತರ ಸ್ವರೂಪಗಳಲ್ಲಿಯೂ ಹೆಚ್ಚಿನ ಎತ್ತರವನ್ನು ಸಾಧಿಸಲು ಬಯಸುತ್ತೇನೆ. ಕೃತಜ್ಞತೆಯಿಂದ ತುಂಬಿದ ಹೃದಯದಿಂದ ನಾನು ಟಿ20 ಅಂತರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳುತ್ತೇನೆ ಎಂದು ಬರೆದಿದ್ದರು.
ರವೀಂದ್ರ ಜಡೇಜಾ 2009ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಶ್ರೀಲಂಕಾ ವಿರುದ್ಧ ಜಡೇಜಾ ಚೊಚ್ಚಲ ಟಿ20 ಪಂದ್ಯವನ್ನಾಡಿದರು. ಈವರೆಗೆ ಒಟ್ಟು 74 ಟಿ20 ಪಂದ್ಯಗಳಲ್ಲಿ 515 ರನ್ ಗಳಿಸಿ ಜಡ್ಡು 54 ವಿಕೆಟ್ ಪಡೆದಿದ್ದಾರೆ.
ಈ ಅಪಾಯಕಾರಿ ಆಲ್‌ರೌಂಡರ್‌ನ ಅಂಕಿ-ಅಂಶಗಳು ಟಿ20 ಕ್ರಿಕೆಟ್‌ನಲ್ಲಿ ಉತ್ತಮವಾಗಿಲ್ಲದಿರಬಹುದು. ಆದರೆ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಜಡೇಜಾ ಅವರ ಅಂಕಿಅಂಶಗಳು ಅತ್ಯುತ್ತಮವಾಗಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಹೆಸರಿನಲ್ಲಿ ಶತಕವೂ ದಾಖಲಾಗಿದೆ.