Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ravindra Jadeja: ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಬೇರೆ ತಂಡಗಳ ಭಯ ಹುಟ್ಟಿಸಿರುವ ಟೀಮ್ ಇಂಡಿಯಾ ಆಲ್‌ರೌಂಡರ್‌

ಇನ್ನೇನು ಕೆಲವೇ ದಿನಗಳಲ್ಲಿ ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಲಿದೆ. ಈ ಟೂರ್ನಿಯಲ್ಲಿ ಭಾರತ ಭಾಗವಹಿಸುತ್ತಿದೆ. ಎರಡು ಬಾರಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿರುವ ಭಾರತ, ಮೂರನೇ ಕಪ್‌ ಕನಸಿನಲ್ಲಿದೆ. ಭಾರತ "ಎ" ಗುಂಪಿನಲ್ಲಿ ಸ್ಥಾನ ಪಡೆದಿದ್ದು ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿವೆ. ಈ ಟೂರ್ನಿ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರ ಒಬ್ಬ ಭರ್ಜರಿ ಲಯಕ್ಕೆ ಮರಳಿರುವುದು ಎದುರಾಳಿ ತಂಡಗಳ ನಿದ್ದೆ ಗೆಡಿಸಿದೆ.

ಇಂಗ್ಲೆಂಡ್‌, ಭಾರತದಲ್ಲಿ ಏಕದಿನ ಸರಣಿಯನ್ನು ಆಡುತ್ತಿದೆ. ಈ ವೇಳೆ ಟೀಮ್ ಇಂಡಿಯಾ ಪರ ಸ್ಟಾರ್ ಆಟಗಾರರು ಮೈದಾನ ಪ್ರವೇಶಿಸಿದ್ದಾರೆ. ಕಟಕ್‌ನಲ್ಲಿ ಇಂಗ್ಲೆಂಡ್ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಇಂಗ್ಲೆಂಢ್ ಟಾಪ್‌ ಆರ್ಡರ್‌ ಬ್ಯಾಟರ್‌ಗಳು ಜೋಸ್ ಬಟ್ಲರ್‌ ಅವರ ನಿರ್ಧಾರವನ್ನು ಸಮರ್ಥಿಸಿಕೊಂಡರು. ಆದರೆ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್‌ ರವೀಂದ್ರ ಜಡೇಜಾ ಇಂಗ್ಲೆಂಡ್‌ ಬ್ಯಾಟರ್‌ಗಳನ್ನು ಬಹುವಾಗಿ ಕಾಡಿದರು.

Ravindra Jadeja Shines Against England Strengthens Claim for Champions Trophy Spot

ಆಸ್ಟ್ರೇಲಿಯಾ ಪ್ರವಾಸದಲ್ಲಿ ರವೀಂದ್ರ ಜಡೇಜಾ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ರು. ಹೀಗಾಗಿ ತವರಿಗೆ ವಾಪಸ್ ಆಗುತ್ತಿದ್ದಂತೆ ಜಡೇಜಾ ರಣಜಿ ಟೂರ್ನಿಯಲ್ಲಿ ಬೌಲಿಂಗ್ ಮಾಡಿದರು. ಈ ವೇಳೆ ಸೌರಾಷ್ಟ್ರ ಪರ ಬೌಲಿಂಗ್ ಮಾಡಿದ್ದ ಜಡ್ಡು ವಿಕೆಟ್‌ ಬೇಟೆ ನಡೆಸಿ ಎಲ್ಲರ ಚಿತ್ತ ಕದ್ದಿದ್ದರು. ಬಳಿಕ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಆಡುವ ಅವಕಾಶ ಸಿಕ್ಕಿತು. ಆದರೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಜಡೇಜಾ ಆರ್ಭಟಿಸಿದರು.

ಆಲ್‌ರೌಂಡರ್‌ ಕಮಾಲ್

ನಾಗ್ಪುರ್‌ದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಮೂರು ವಿಕೆಟ್‌ ಪಡೆದಿದ್ದ ಜಡೇಜಾ, ಕಟಕ್‌ನಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ರವೀಂದ್ರ ಜಡೇಜಾ ಅಮೋಘ ಬೌಲಿಂಗ್ ನಡೆಸಿದರು. ಆರಂಭದಲ್ಲಿ ಬೆನ್‌ ಡಕೆಟ್‌, ಜೋ ರೂಟ್‌, ಓವರ್‌ಟನ್‌ ಅವರ ವಿಕೆಟ್‌ ಪಡೆದ ಜಡ್ಡು ಆರ್ಭಟಿಸಿದರು. ಅಲ್ಲದೆ ಸಂಪೂರ್ಣ 10 ಓವರ್‌ಗಳ ತಮ್ಮ ಕೋಟಾವನ್ನು ಪೂರ್ಣಗೊಳಿಸಿ 35 ನೀಡಿ ಮೂರು ವಿಕೆಟ್‌ ಕಬಳಿಸಿದ್ದಾರೆ.

Ravindra Jadeja Shines Against England Strengthens Claim for Champions Trophy Spot

ಚಾಂಪಿಯನ್ಸ್‌ ಟ್ರೋಫಿ ತಂಡದಲ್ಲಿ ಇವರಿಗೆ ಸ್ಥಾನ ನೀಡಬೇಕೋ ಬೇಡವೋ ಎಂಬ ಬಗ್ಗೆಯೇ ಗೊಂದಲಗಳು ಇದ್ದವು. ಆದರೆ ಇವರು ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ಆರ್ಭಟಿಸಿದ್ದಾರೆ. ಈ ಮೂಲಕ ಚಾಂಪಿಯನ್ಸ್‌ ಟ್ರೋಫಿಯ ಆಡುವ ತಂಡದಲ್ಲಿ ತಮಗೆ ಸ್ಥಾನ ನೀಡಬೇಕು ಎಂದು ಜಡೇಜಾ ತಮ್ಮ ಪ್ರದರ್ಶನದ ಮೂಲಕ ಒತ್ತಾಯಿಸಿದ್ದಾರೆ.

ರೂಟ್‌ ಅರ್ಧಶತಕ

ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿತು. ಈ ವೇಳೆ ಆರಂಭಿಕರಾದ ಫಿಲ್ ಸಾಲ್ಟ್ (26) ಹಾಗೂ ಬೆನ್ ಡಕೆಟ್ ಮೊದಲ ವಿಕೆಟ್‌ಗೆ 81 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಆರಂಭಿಕ ಬೆನ್‌ ಡಕೆಟ್‌ 56 ಎಸೆತಗಳಲ್ಲಿ 10 ಬೌಂಡರಿ ನೆರವಿನಿಂದ 65 ರನ್‌ ಸಿಡಿಸಿದರು. ಭರವಸೆಯ ಬ್ಯಾಟರ್ ಜೋ ರೂಟ್‌ 72 ಎಸೆತಗಳಲ್ಲಿ 69 ರನ್‌ ಸಿಡಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ಹ್ಯಾರಿ ಬ್ರೂಕ್‌ 31, ಜೋಸ್ ಬಟ್ಲರ್ 34, ಲಿಯಾಮ್‌ ಲಿವಿಂಗ್‌ಸ್ಟೋನ್‌ 41 ರನ್‌ ಸಿಡಿಸಿದರು. ಪರಿಣಾಮ ಇಂಗ್ಲೆಂಡ್ 49.5 ಓವರ್‌ಗಳಲ್ಲಿ 304 ರನ್‌ಗಳಿಗೆ ಆಲೌಟ್ ಆಯಿತು.

Story first published: Sunday, February 9, 2025, 17:56 [IST]
Other articles published on Feb 9, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+