Ravindra Jadeja: ಮುಂಬೈನಲ್ಲಿ ಮತ್ತೊಂದು ಮೈಲಿಗಲ್ಲು ಮುಟ್ಟಿದ ರವೀಂದ್ರ ಜಡೇಜಾ
ಬೆಂಗಳೂರು ಹಾಗೂ ಪುಣೆ ಟೆಸ್ಟ್‌ನಲ್ಲಿ ಸ್ಥಿರ ಬೌಲಿಂಗ್ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಟೀಮ್ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾ, ಮುಂಬೈ ಟೆಸ್ಟ್‌ನಲ್ಲಿ ಸೊಗಸಾದ ಬೌಲಿಂಗ್ ನಡೆಸಿದರು. ನ್ಯೂಜಿಲೆಂಡ್ ಬೌಲರ್‌ಗಳನ್ನು ಮೊದಲ ಇನಿಂಗ್ಸ್‌ನಲ್ಲಿ ಹಾಗೂ ಎರಡನೇ ಇನಿಂಗ್ಸ್‌ನಲ್ಲೂ ಕಿವೀಸ್ ಬ್ಯಾಟರ್‌ಗಳಿಗೆ ಕಾಟ ನೀಡಿದರು. ಮುಂಬೈನಲ್ಲಿ ಮ್ಯಾಜಿಕಲ್ ಸ್ಪೆಲ್ ಮಾಡಿದ ಜಡ್ಡು ಮೂರನೇ ಟೆಸ್ಟ್‌ನಲ್ಲಿ ಈವರೆಗೆ ಒಟ್ಟು 9 ವಿಕೆಟ್ ಕಬಳಿಸಿದ್ದಾರೆ.
ಇನ್ನು ನ್ಯೂಜಿಲೆಂಡ್ ತಂಡ ಎರಡನೇ ಇನಿಂಗ್ಸ್‌ನಲ್ಲಿ ಇನ್ನೊಂದು ವಿಕೆಟ್ ಉಳಿಸಿಕೊಂಡಿದ್ದು, ಜಡೇಜಾ 5 ವಿಕೆಟ್ ಪಡೆಯುವ ಅವಕಾಶವನ್ನು ಸಹ ಹೊಂದಿದ್ದಾರೆ. ಈಗಾಗಲೇ ಎರಡನೇ ಇನಿಂಗ್ಸ್‌ನಲ್ಲಿ ಜಡ್ಡು 4 ವಿಕೆಟ್ ಕಬಳಿಸಿದ್ದಾರೆ. ಸದ್ಯ ಇವರ ಬುಟ್ಟಿಯಲ್ಲಿ ಈಗ ಒಟ್ಟು 9 ವಿಕೆಟ್‌ಗಳಿವೆ. ಇದೇ ಟೆಸ್ಟ್‌ನಲ್ಲಿ ಇವರಿಗೆ 10 ವಿಕೆಟ್ ಕಬಳಿಸುವ ಅವಕಾಶವೂ ಇದೆ.

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಸಾಧನೆ
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಜಡೇಜಾ ಮತ್ತೊಂದು ಅಪರೂಪದ ಸಾಧನೆ ಮಾಡಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಜಡ್ಡು ಒಟ್ಟು 50 ವಿಕೆಟ್ ಕಬಳಿಸಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ನ್ಯೂಜಿಲೆಂಡ್ ತಂಡದ ಎರಡನೇ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ ಮ್ಯಾಟ್ ಹೆನ್ರಿ ಅವರ ವಿಕೆಟ್ ಪಡೆದು, ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂದರೆ WTC 2023-25 ರಲ್ಲಿ ತಮ್ಮ 50 ವಿಕೆಟ್‌ಗಳನ್ನು ಪೂರೈಸಿದರು.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ 50ಕ್ಕೂ ಹೆಚ್ಚು ವಿಕೆಟ್ ಪಡೆದ ಎರಡನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಜಡೇಜಾ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಆರ್ ಅಶ್ವಿನ್ ಸಹ ಈ ಸಾಧನೆ ಮಾಡಿದ್ದರು. 2021-23ರಲ್ಲಿ ನಡೆದಿದ್ದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಜಡೇಜಾ 13 ಪಂದ್ಯಗಳಲ್ಲಿ 47 ವಿಕೆಟ್‌ಗಳನ್ನು ಪಡೆದಿದ್ದರು.

ಕಳೆದ ಕೆಲವು ವರ್ಷಗಳಿಂದ ಜಡೇಜಾ ಅವರು ಬೌಲಿಂಗ್ ಹಾಗೂ ಬ್ಯಾಟಿಂಗ್‌ನಿಂದ ತಂಡಕ್ಕೆ ನೆರವಾಗುತ್ತಿದ್ದಾರೆ. ದೇಶದಲ್ಲಿ ನಡೆಯುವ ಪಂದ್ಯಗಳೇ ಆಗಿರಲಿ, ವಿದೇಶಿದಲ್ಲಿ ನಡೆಯುವ ಪಂದ್ಯಗಳೇ ಆಗಿರಲಿ ಜಡ್ಡು ತಂಡದಲ್ಲಿದ್ದರೆ ಎದುರಾಳಿಗೆ ಭಯ. ಜಡೇಜಾ ಅವರ ಪ್ರದರ್ಶನದಿಂದ ಟೀಮ್ ಮ್ಯಾನೇಜ್ಮೆಂಟ್ ಸಹ ಫುಲ್ ಖುಷ್ ಆಗಿದೆ.
ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಯಿಂದ ಹಿನ್ನಡೆ ಅನುಭವಿಸಿರುವ ಟೀಮ್ ಇಂಡಿಯಾ, ಸರಣಿಯಲ್ಲಿ ತನ್ನ ಗೌರವವನ್ನು ಉಳಿಸಿಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದೆ. ಬೆಂಗಳೂರಿನಲ್ಲಿ ಟೀಮ್ ಇಂಡಿಯಾ 8 ವಿಕೆಟ್ ಸೋಲು ಕಂಡಿದ್ದರೆ, ಪುಣೆಯಲ್ಲಿ ರೋಹಿತ್ ಪಡೆ 113 ರನ್‌ಗಳಿಂದ ಆಘಾತ ಅನುಭವಿಸಿತ್ತು.
ಮೂರನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಎಚ್ಚರಿಕೆಯ ಬ್ಯಾಟಿಂಗ್ ನಡೆಸುವ ಅನಿವಾರ್ಯತೆ ಇದೆ. ಏಕೆಂದರೆ ಮುಂಬೈನ ವಾಂಖೇಡೆ ಪಿಚ್ ನಲ್ಲಿ ನಾಲ್ಕನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ಈ ಪಂದ್ಯವನ್ನು ಗೆಲ್ಲಲು ಟೀಂ ಇಂಡಿಯಾ ಕೊನೆಯ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಬೇಕಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications