ಅಜೇಯ ಅರ್ಧ ಶತಕ ಬಾರಿಸಿದ ಆಲ್ ರೌಂಡರ್ ರವೀಂದ್ರ ಜಡೇಜಾ: ವಿಡಿಯೋ

ಲಂಡನ್: ಭಾರತ-ನ್ಯೂಜಿಲೆಂಡ್ ನಡುವಿನ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ಟೀಮ್ ಇಂಡಿಯಾ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಅಂತರ್ ತಂಡದ ಅಭ್ಯಾಸ ಪಂದ್ಯದಲ್ಲಿ ಆಲ್ ರೌಂಡರ್ ರವೀಂದ್ರ ಜಡೇಜಾ ಅರ್ಧ ಶತಕ ಬಾರಿಸಿದ್ದಾರೆ. ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಇದರ ಚಿತ್ರ ಹಂಚಿಕೊಂಡಿದೆ.
ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಜೂನ್ 18-22ರ ವರೆಗೆ ಸೌತಾಂಪ್ಟನ್‌ನ ಏಜಸ್ ಬೌಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇದಕ್ಕಾಗಿ ಭಾರತೀಯ ತಂಡ ಮೂರು ದಿನಗಳ ಅಂತರ್ ಅಭ್ಯಾಸ ಪಂದ್ಯ ಆಡಿದೆ. ಇದರಲ್ಲಿ ಭಾರತೀಯ ಆಟಗಾರರ ಉತ್ತಮ ಪ್ರದರ್ಶನ ನೀಡಿದ್ದಾರೆ.
ಅಂತರ್ ಅಭ್ಯಾಸ ಪಂದ್ಯದ ಹೆಚ್ಚಿನ ಮಾಹಿತಿಯನ್ನು ಬಿಸಿಸಿಐ ನೀಡಿಲ್ಲ. ಆದರೆ ರಿಷಭ್ ಪಂತ್ ಅಜೇಯ ಶತಕ, ಶುಬ್ಮನ್ ಗಿಲ್ ಅರ್ಧ ಶತಕ ಮತ್ತು ವೇಗಿ ಇಶಾಂತ್ ಶರ್ಮಾ 3 ವಿಕೆಟ್ ಪಡೆದಿರುವ ಬಗ್ಗೆ ಈ ಮೊದಲು ಮಾಹಿತಿ ನೀಡಿತ್ತು. ಸೋಮವಾರ ಕೊನೇ ದಿನದಾಟದ ಸಣ್ಣ ವಿಡಿಯೋ ತುಣುಕನ್ನು ಬಿಸಿಸಿಐ ಟ್ವಿಟರ್‌ನಲ್ಲಿ ಹಾಕಿಕೊಂಡಿದೆ.
'ರವೀಂದ್ರ ಜಡೇಜಾ ತನ್ನ ಅರ್ಧ ಶತಕವನ್ನು ಪೂರೈಸಿದ್ದಾರೆ (76 ಎಸೆತಗಳಿಗೆ ಅಜೇಯ 54 ರನ್). ಇಲ್ಲಿಗೆ ಮೂರು ದಿನಗಳ ಅಂತರ್ ಅಭ್ಯಾಸ ಪಂದ್ಯ ಕೊನೆಗೊಂಡಿದೆ. ಮೊಹಮ್ಮದ್ ಸಿರಾಜ್ 22 ರನ್‌ಗೆ 2 ವಿಕೆಟ್ ಪಡೆದಿದ್ದಾರೆ' ಎಂದು ಬಿಸಿಸಿಐ ಹಾಕಿಕೊಂಡಿದ್ದ ಟ್ವೀಟ್‌ನಲ್ಲಿ ಬರೆದುಕೊಳ್ಳಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications