For Quick Alerts
ALLOW NOTIFICATIONS  
For Daily Alerts
 

ಅಪರೂಪದ ದಾಖಲೆ ಬರೆದ ಜಡೇಜ ಮರೆತ ಸೆಹ್ವಾಗ್ ಗೆ ಟ್ವೀಟ್ ಟಾಂಗ್!

Ravindra Jadeja takes a dig at Virender Sehwag for ignoring his performance against South Africa

ವಿಶಾಖಪಟ್ಟಣಂ, ಅಕ್ಟೋಬರ್ 08: ಟೀಮ್ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಜಡೇಜಾ 200 ಟೆಸ್ಟ್‌ ವಿಕೆಟ್‌ ಮೈಲಿಗಲ್ಲು ಸ್ಥಾಪಿಸಿದ್ದರೂ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ಸೆಹ್ವಾಗ್ ಗೆ ಮಾತ್ರ ಜಡೇಜಾ ನೆನಪಿಲ್ಲವೇಕೆ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡಿದೆ.

ವಿಶಾಕಪಟ್ಟಣಂ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ದಾಖಲಿಸಲು ಕಾರಣರಾದ ಆಟಗಾರರನ್ನು ಹೆಸರಿಸಿ, ಮೆಚ್ಚುಗೆ ವ್ಯಕ್ತಪಡಿಸಿದ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

1
46113

ಆದರೆ, ಆಲ್‌ ರೌಂಡರ್‌ ರವೀಂದ್ರ ಜಡೇಜಾ ಹೆಸರನ್ನು ಸೇರಿಸಲು ಸೆಹ್ವಾಗ್ ಮರೆತ್ತಿದ್ದು ಏಕೆ? ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಮೈದಾನದಲ್ಲಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ ಮಾಡುವಾಗ ಜಡೇಜಾರ ಪ್ರದರ್ಶನವನ್ನು ನಿಮಗೆ ಕಾಣಿಸಲಿಲ್ಲವೇ ಎಂದು ಅಭಿಮಾನಿಯೊಬ್ಬರು ಮಾಡಿದ್ದ ಟ್ವೀಟ್‌ ಅನ್ನು ಜಡೇಜಾ ರೀಟ್ವೀಟ್ ಮಾಡುವ ಮೂಲಕ ಸೆಹ್ವಾಗ್ ಗೆ ಟಾಂಗ್ ನೀಡಿದ್ದಾರೆ.

ಕೆಲವರು ಸೆಹ್ವಾಗ್ ಪರ ವಹಿಸಿ, ಸೆಹ್ವಾಗ್ ಬೇಕಾಂತಲೆ ಮಾಡಿರುವುದಿಲ್ಲ, ಮರೆತಿರಬಹುದು. ಜಡೇಜ ರೀಟ್ವೀಟ್ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದು ಸರಿಯಲ್ಲ ಎಂದಿದ್ದಾರೆ. ಒಟ್ಟಾರೆ, ಪರ ವಿರೋಧ ಚರ್ಚೆ ಟ್ವಿಟ್ಟರ್ ನಲ್ಲಿ ಜೋರಾಗಿ ನಡೆದಿದೆ.

ವಿವಾದಕ್ಕೆ ಕಾರಣವಾದ ಸೆಹ್ವಾಗ್ ಟ್ವೀಟ್

ಟೀಂ ಇಂಡಿಯಾಕ್ಕೆ ಶುಭಾರಂಭ ಸಿಕ್ಕಿದೆ. ಈ ಪಂದ್ಯದಲ್ಲಿ ಮಯಾಂಕ್, ರೋಹಿತ್, ಶಮಿ, ಅಶ್ವಿನ್, ಪೂಜಾರಾ ಕೊಡುಗೆಯನ್ನ ಮರೆಯುವಂತಿಲ್ಲ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದರು. ವಿಶಾಖಪಟ್ಟಣಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದ ನಂತರ ಸೆಹ್ವಾಗ್ ಮಾಡಿದ ಟ್ವೀಟ್ ನಂತರ ವಿವಾದಕ್ಕೆ ಕಾರಣವಾಯಿತು.

ನಿದ್ದೆ ಮಾಡ್ತಾ ಇದ್ರಾ ಎಂದು ಸೆಹ್ವಾಗ್ ಗೆ ಪ್ರಶ್ನೆ

ನಿದ್ದೆ ಮಾಡ್ತಾ ಇದ್ರಾ ಎಂದು ಸೆಹ್ವಾಗ್ ಗೆ ಪ್ರಶ್ನೆ

ವಿರೇಂದ್ರ ಸೆಹ್ವಾಗ್ ಅವರೇ ನಿಮ್ಮ ಟಿವಿಯಲ್ಲಿ ಜಡೇಜಾ ಅವರ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಪ್ರದರ್ಶನ ಕಾಣಿಸಲಿಲ್ಲವೆ ಅಥವಾ ಆ ಸಮಯದಲ್ಲಿ ನಿದ್ದೆ ಮಾಡುತ್ತಿದ್ರಾ? ಎಂದು ಬಿನಿತ್ ಪಟೇಲ್ ಎಂಬುವರು ಟ್ವೀಟ್ ಮಾಡಿದ್ದರು. ಇದನ್ನು ಜಡೇಜಾ ರೀಟ್ವೀಟ್ ಮಾಡಿದ್ದು, ಕಿಚ್ಚು ಹೆಚ್ಚಾಗಲು ಕಾರಣವಾಯಿತು.

ವಿವಾದವೆಲ್ಲ ಏಕೆ ಎಂದು ಪ್ರಶ್ನೆ

ರೀ ಟ್ವೀಟ್ ಮಾಡಿ ವಿವಾದ ಹೆಚ್ಚಾಗಲು ಏಕೆ ಕಾರಣರಾಗುತ್ತೀರಿ? ನಿಮ್ಮ ಆಟದ ಮೇಲೆ ನಿಗಾ ಇರಲಿ, ವಿವಾದಗಳಲ್ಲಿ ಸಿಲುಕಿ ಏನು ಸಾಧಿಸಲು ಸಾಧ್ಯ ಎಂದು ಅಭಿಮಾನಿಯೊಬ್ಬರು ಜಡೇಜಾರ ನಡೆಯನ್ನು ಪ್ರಶ್ನಿಸಿದ್ದಾರೆ.

ಜಡೇಜಾ ಮಾಡಿದ್ದರಲ್ಲಿ ತಪ್ಪೇನಿಲ್ಲ

ಜಡೇಜಾ ಮಾಡಿದ್ದರಲ್ಲಿ ತಪ್ಪೇನಿಲ್ಲ, ಜಡೇಜಾ ಅವರ ಆಟ ನೋಡಿದ ಮೇಲೂ ಹೀಗೆ ಮಾತನಾಡುವುದು ಸರಿಯಲ್ಲ. ಸೆಹ್ವಾಗ್ ಅವರು ಮಾಡಿದ್ದು ಸರಿಯಲ್ಲ ಎಂಬುದನ್ನು ಒಪ್ಪಿಕೊಳ್ಳೋಣ ಎಂದು ಜಡೇಜ ಪರ ವಹಿಸಿ ಒಬ್ಬರು ಟ್ವೀಟ್ ಮಾಡಿದ್ದಾರೆ.

Story first published: Tuesday, October 8, 2019, 12:11 [IST]
Other articles published on Oct 8, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+