Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅದ್ಭುತ ಕ್ಯಾಚ್ ಮೂಲಕ ಜಡೇಜಾ ಮಿಂಚು: ವಿಡಿಯೋ

Ravindra Jadeja Takes A One Handed Screamer Mid Air To Dismiss Neil Wagner

ಟೀಮ್ ಇಂಡಿಯಾದ ಅಲ್‌ರೌಂಡರ್ ರವೀಂದ್ರ ಜಡೇಜಾ ಸದ್ಯ ವಿಶ್ವ ಶ್ರೇಷ್ಟ ಫೀಲ್ಡರ್ ಅನ್ನೋದರಲ್ಲಿ ಎರಡು ಮಾತಿಲ್ಲ. ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಅದ್ಭುತ ಕ್ಯಾಚ್‌ಮೂಲಕ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳನ್ನು ಮೂಕವಿಸ್ಮಿತರನ್ನಾಗಿಸಿದರು.

ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನ ಎರಡನೇ ದಿನ ಈ ಅದ್ಭುತ ಕ್ಯಾಚ್‌‌ಅನ್ನು ರವೀಂದ್ರ ಜಡೇಜಾ ಪಡೆದು ಎಲ್ಲರನ್ನೂ ಚಕಿತರನ್ನಾಗಿಸಿದರು. ಈ ಮೂಲಕ ಜಡೇಜಾ ತಾನೇಕೆ ವಿಶ್ವಶ್ರೇಷ್ಟ ಫೀಲ್ಡರ್ ಎನ್ನುವುದನ್ನು ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ.

ಆಗ 72ನೇ ಓವರ್‌ ಚಾಲ್ತಿಯಲ್ಲಿತ್ತು. ಮೊಹಮ್ಮದ್ ಶಮಿ ಈ ಓವರ್‌ಅನ್ನು ಬೌಲಿಂಗ್ ಮಾಡುತ್ತಿದ್ದರು. ನ್ಯೂಜಿಲೆಂಡ್ ಆಟಗಾರ ವ್ಯಾಗ್ನರ್ ಮೊಹಮ್ಮದ್ ಶಮಿ ಎಸೆದ ಬೌನ್ಸರ್‌ಅನ್ನು ಲೆಗ್‌ ಸ್ಕ್ವೇರ್‌ನತ್ತ ಬೀಸಿದರು. ಈ ವೇಳೆ ಅಲ್ಲಿದ್ದ ಫೀಲ್ಡರ್ ಜಡೇಜ ಅದ್ಭುತ ರೀತಿಯಲ್ಲಿ ಕ್ಯಾಚ್ ಪಡೆದುಕೊಂಡರು.

ವ್ಯಾಗ್ನಾರ್ ಬೀಸಿದ ಚೆಂಡು ಗಾಳಿಯಲ್ಲಿ ಬರುತ್ತಿರುವುದನ್ನು ಗಮನಿಸಿದ ರವೀಂದ್ರ ಜಡೇಜಾ ಗಾಳಿಯಲ್ಲಿ ಹಾರಿ ಕೈಯಲ್ಲಿ ಕ್ಯಾಚ್ ಒಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಈ ವಿಕೆಟನ್ನು ನೋಡುತ್ತಿದ್ದ ಆಟಗಾರರು ಮತ್ತು ವೀಕ್ಷಕರು ಮೂಕವಿಸ್ಮತರಾದರು.

ರವೀಂದ್ರ ಜಡೆಜಾ ಪಡೆದ ಕ್ಯಾಚ್ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದುಮಾಡುತ್ತಿದೆ. ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲ ಕ್ರಿಕೆಟ್ ಕಮೆಂಟೇಟರ್ ಹರ್ಷ ಭೋಗ್ಲೆ ಸೇರಿಸಂತೆ ಅನೇಕರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

Story first published: Sunday, March 1, 2020, 15:49 [IST]
Other articles published on Mar 1, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+