IND vs BAN: ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವ ತವಕದಲ್ಲಿ ರವೀಂದ್ರ ಜಡೇಜಾ!
ಆಗಸ್ಟ್ 13 ಮಂಗಳವಾರ, ಟೀಮ್ ಇಂಡಿಯಾದ ಅನುಭವಿ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಜಡೇಜಾ ಹೊಸ ಮೈಲಿಗಲ್ಲು ಸೃಷ್ಟಿಸುವ ತವಕದಲ್ಲಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯವು ಸೆಪ್ಟೆಂಬರ್ 19 ರಿಂದ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಉಭಯ ದೇಶಗಳ ನಡುವಿನ ಈ ಟೆಸ್ಟ್ ಪಂದ್ಯ ಬೆಳಗ್ಗೆ 9:30 ರಿಂದ ಆರಂಭವಾಗಲಿದೆ. ಇನ್ನು ಎರಡನೇ ಟೆಸ್ಟ್ ಪಂದ್ಯ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 1 ರವರೆಗೆ ನಡೆಯಲಿದೆ.

ಜಡೇಜಾ ಟೆಸ್ಟ್ ಕ್ರಿಕೆಟ್‌ನಲ್ಲಿ ದಿಗ್ಗಜರ ಪಟ್ಟಿ ಸೇರಲು ಬಹಳ ಹತ್ತಿರದಲ್ಲಿದ್ದಾರೆ. ಅವರು ಭಾರತ ಪರ 72 ಟೆಸ್ಟ್ ಪಂದ್ಯಗಳಲ್ಲಿ 294 ವಿಕೆಟ್ ಪಡೆದಿದ್ದಾರೆ. ಬಾಂಗ್ಲಾದೇಶ ವಿರುದ್ಧ ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಜಡ್ಡು 6 ವಿಕೆಟ್ ಪಡೆದರೆ ಇತಿಹಾಸ ನಿರ್ಮಿಸಲಿದ್ದಾರೆ.
ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಜಡೇಜಾ 300 ವಿಕೆಟ್ ಪೂರೈಸಲಿದ್ದಾರೆ. ಟೆಸ್ಟ್ ಸರಣಿಯ ಎರಡು ಪಂದ್ಯಗಳನ್ನು ಚೆನ್ನೈ ಮತ್ತು ಕಾನ್ಪುರದಲ್ಲಿ ಆಯೋಜನೆಗೊಂಡಿರುವುದರಿಂದ ಸ್ಪಿನ್ನರ್‌ಗಳಿಗೆ ಹೆಚ್ಚು ಅನುಕೂಲಕರವಾಗಲಿದೆ. ಈ ಎರಡು ಪಂದ್ಯಗಳ ಟೆಸ್ಟ್ ಸರಣಿಗಳಲ್ಲಿ ಜಡೇಜಾ ಆನೇಕ ಸಾಧನೆಗಳನ್ನು ಮಾಡುವ ಅವಕಾಶವನ್ನು ಹೊಂದಿದ್ದಾರೆ.
ಚೆನ್ನೈನಲ್ಲಿ ಹೆಚ್ಚಿನ ಅವಕಕಾಶ
ಈ ವಿಶೇಷ ದಾಖಲೆಯನ್ನು ಚೆನ್ನೈನಲ್ಲಿ ಮಾಡಲು ಜಡ್ಡುಗೆ ಹೆಚ್ಚಿನ ಅವಕಾಶವಿದೆ. ಏಕೆಂದರೆ ಚೆನ್ನೈ ಪಿಚ್ ಸ್ಪಿನ್ನರ್‌ಗಳಿಗೆ ನೆರವಾಗುತ್ತದೆ. ಅಲ್ಲದೆ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪರ ಆಡುವ ಜಡ್ಡುಗೆ ತವರಿನ ಪಿಚ್ ಆಗಿದೆ.
ಹೀಗಾಗಿ ಚೆನ್ನೈ ಪಿಚ್‌ನ ಏರಿಳಿತಗಳು ಜಡ್ಡು ತಿಳಿದಿದ್ದು, ಮೊದಲ ಟೆಸ್ಟ್ ಪಂದ್ಯದಲ್ಲಿ ಅವರು ತಮ್ಮ ಮಾರಕ ಸ್ಪಿನ್ ಬೌಲಿಂಗ್‌ನಿಂದ ಬಾಂಗ್ಲಾದೇಶ ಬ್ಯಾಟರ್‌ಗಳನ್ನು ಕಟ್ಟಿ ಹಾಕಬಹುದು. ಜೊತೆಗೆ ಭಾರತ ತಂಡದ ಗೆಲುವಿಗೂ ನೆರವಾಗಬಹುದು.
ಇದುವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಜಡ್ಡು 72 ಟೆಸ್ಟ್ ಪಂದ್ಯಗಳಲ್ಲಿ 294 ವಿಕೆಟ್ ಪಡೆದಿದ್ದು, 3036 ರನ್ ಗಳಿಸಿದ್ದಾರೆ. 13 ಬಾರಿ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿ ಸಾಧನೆ ಮಾಡಿದ್ದಾರೆ. ಇದಲ್ಲದೇ ಅವರು ಟೆಸ್ಟ್ ಪಂದ್ಯಗಳಲ್ಲಿ ಎರಡು ಬಾರಿ 10 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್
1) ಅನಿಲ್ ಕುಂಬ್ಳೆ - 619 ವಿಕೆಟ್
2) ರವಿಚಂದ್ರನ್ ಅಶ್ವಿನ್ - 516 ವಿಕೆಟ್
3) ಕಪಿಲ್ ದೇವ್ - 434 ವಿಕೆಟ್
4) ಹರ್ಭಜನ್ ಸಿಂಗ್ - 417 ವಿಕೆಟ್
5) ಇಶಾಂತ್ ಶರ್ಮಾ/ಜಹೀರ್ ಖಾನ್ - 311 ವಿಕೆಟ್
6) ರವೀಂದ್ರ ಜಡೇಜಾ - 294 ವಿಕೆಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications