ಲಂಕನ್ನರಿಗೆ 'ಸಿಂಹ' ಸ್ವಪ್ನವಾದ ಅಂಬಟಿ ರಾಯಡು
ಅಹಮದಾಬಾದ್, ನ.7: ಮತ್ತೊಮ್ಮೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾವನ್ನು ಆರು ವಿಕೆಟ್ ಗಳಿಂದ ಮಣಿಸಿದೆ. ಚೊಚ್ಚಲ ಏಕದಿನ ಶತಕ ಸಿಡಿಸಿದ ಅಂಬಟಿ ರಾಯಡು ಈ ಬಾರಿ ಭಾರತದ ಗೆಲುವಿನ ರೂವಾರಿಯಾದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆಮಾಡಿಕೊಂಡ ಶ್ರೀಲಂಕಾ 8 ವಿಕೆಟ್ ನಷ್ಟಕ್ಕೆ 274 ರನ್ ಗಳಿಸಿತು. ನಾಯಕ ಮ್ಯಾಥ್ಯೂಸ್ 92 ರನ್ ಸಿಡಿಸಿ ಭಾರತದ ಬೌಲರ್ ಗಳನ್ನು ಕಾಡಿದರು. ಆದರೆ ಬ್ಯಾಟಿಂಗ್ ಗೆ ನೆರವಾಗುತ್ತಿದ್ದ ಪಿಚ್ ನಲ್ಲಿ ಸಾಧಾರಣ ಮೊತ್ತ ಬೆನ್ನಟ್ಟಿದ ಭಾರತ 44.3 ಓವರ್'ಗಳಲ್ಲಿ ಗೆಲುವಿನ ದಡ ಸೇರಿತು. ಈ ಗೆಲುವಿನೊಂದಿಗೆ ಭಾರತ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡಿತು.[ಮ್ಯಾಚ್ ಫಿಕ್ಸಿಂಗ್ ಬಗ್ಗೆ ಸಚಿನ್ ಏನು ಬರೆದಿದ್ದಾರೆ?]
ರಾಯಡು ಸ್ಫೋಟ
ಗೆಲುವಿನ ಗುರಿ ಬೆನ್ನುಹತ್ತಿದ ಭಾರತ ಯಾವ ಕ್ಷಣದಲ್ಲೂ ಶ್ರೀಲಂಕಾಕ್ಕೆ ಮಣಿಯುವ ಲಕ್ಷಣ ತೋರಲಿಲ್ಲ. ರಾಯಡು ಅವರನ್ನು 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿಸಿದ್ದು ಫಲ ನೀಡಿತು.
118 ಬಾಲ್ ಎದುರಿಸಿದ ರಾಯಡು 121 ರನ್ ಗಳಿಸಿ ಮಿಂಚಿದರು. ಇದರಲ್ಲಿ 10 ಬೌಡರಿ ಮತ್ತು 4 ಸಿಕ್ಸ್ ಸೇರಿದ್ದವು. ಅಲ್ಲದೇ ಶಿಖರ್ ಧವನ್ ಮತ್ತು ನಾಯಕ ವಿರಾಟ್ ಕೋಹ್ಲಿ ಜತೆಗೆ ಎರಡು ಅತ್ಯುತ್ತಮ ಜೊತೆಯಾದಲ್ಲಿ ಭಾಗಿಯಾದರು. ನಾಟೌಟ್ ಆಗಿ ಉಳಿದ ರಾಯಡು ತಮ್ಮ ಚೊಚ್ಚಲ ಶತಕ ದಾಖಲಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.[ಕ್ರಿಕೆಟ್ ದೇವರ ಆತ್ಮಕಥೆ ಬಿಡುಗಡೆಗೆ ಯಾರೆಲ್ಲ ಬಂದಿದ್ದರು?]
ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ನಾಯಕ ಮ್ಯಾಥ್ಯೂಸ್(92) ಮತ್ತು ಸಂಗಾಕ್ಕಾರ(61) ಉತ್ತಮ ಪ್ರದರ್ಶನದ ನೆರವಿನಿಂದ ಎಂಟು ವಿಕೆಟ್ ಕಳೆದುಕೊಂಡು 274 ರನ್ ಗಳಿಸಿತು. ಒಂದು ಸಮಯದಲ್ಲಿ 64 ರನ್ ಗೆ 3 ವಿಕೆಟ್ ಕಳೆದುಕೊಂಡು ಸಂಕಟಕ್ಕೆ ಸಿಲುಕಿದ್ದ ಲಂಕಾಕ್ಕೆ ಈ ಜೊತೆಯಾಟ ನೆರವಾಯಿತು. ಮುಂದಿನ ಏಕದಿನ ಪಂದ್ಯ ನವೆಂಬರ್ 9 ರಂದು ಹೈದ್ರಾಬಾದ್ ನಲ್ಲಿ ನಡೆಯಲಿದೆ.

ಜಯದ ಅಭಿನಂದನೆ
ಭಾರತ ಪಂದ್ಯ ಗೆದ್ದ ನಂತರ ಶತಕವೀರ ಆಂಬಟಿ ರಾಯಡುಗೆ ಶ್ರೀಲಂಕಾದ ಕುಮಾರ ಸಂಗಾಕ್ಕಾರ ಅವರಿಂದ ಅಭಿನಂದನೆ.

ಚೊಚ್ಚಲ ಶತಕ
ಚೊಚ್ಚಲ ಏಕದಿನ ಶತಕ ಸಿಡಿಸಿದ ಅಂಬಟಿ ರಾಯಡು.

ಶಿಖರ್ ಧವನ್
79 ರನ್ ಗಳಿಸಿ ಮತ್ತೆ ಮಿಂಚಿದ ಶಿಖರ್ ಧವನ್.

ರನೌಟ್
ಶ್ರೀಲಂಕಾದ ಪ್ರಿಯಂಜನ್ ಅವರನ್ನು ರನೌಟ್ ಮಾಡಿದ ರವೀಂದ್ರ ಜಡೇಜಾ.

ಆಟಗಾರರ ಸಂಭ್ರಮ
ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ ವಿಕೆಟ್ ಪಡೆದ ವೇಳೆ ಸಂಭ್ರಮಿಸಿದ ಭಾರತದ ಆಟಗಾರರು.

ಉತ್ತಮ ಜತೆಯಾಟ
ಉತ್ತಮ ಜತೆಯಾಟ ನೀಡಿದ ಶ್ರೀಲಂಕಾ ನಾಯಕ ಮ್ಯಾಥ್ಯೂಸ್(92) ಮತ್ತು ಸಂಗಾಕ್ಕಾರ(61)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications