Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2026: ನಾಡಿನ್ ಡಿ ಕ್ಲರ್ಕ್ ಮಿಂಚಿನ ದಾಳಿ: ಆರ್‌ಸಿಬಿಗೆ 144 ರನ್‌ ಟಾರ್ಗೆಟ್‌ ನೀಡಿದ ಯುಪಿ

ವಡೋದರಾ: ಆಲ್‌ರೌಂಡರ್ ಆಟಗಾರ್ತಿ ದೀಪ್ತಿ ಶರ್ಮಾ ಅವರು ಬಾರಿಸಿದ ಅರ್ಧಶತಕದ ನೆರವಿನಿಂದ ಯುಪಿ ವಾರಿಯರ್ಸ್‌ ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ತಂಡಕ್ಕೆ 144 ರನ್‌ಗಳ ಗುರಿಯನ್ನು ನೀಡಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಹಾಗೂ ದೀಪ್ತಿ ಶರ್ಮಾ ಜೋಡಿ ಮೊದಲ ವಿಕೆಟ್‌ಗೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಲೀಗ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದ ದೀಪ್ತಿ ಶರ್ಮಾ ಆರಂಭಿಕ ಆಟಗಾರ್ತಿ ಅಮೋಘ ಕಾಣಿಕೆ ನೀಡಿದರು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಆರ್‌ಸಿಬಿ ಬೌಲರ್‌ಗಳು ಆರಂಭದಲ್ಲಿ ವಿಫಲರಾದರು.

RCB

ಮೆಗ್ ಲ್ಯಾನಿಂಗ್ ಹಾಗೂ ದೀಪ್ತಿ ಶರ್ಮಾ ಮೊದಲ ವಿಕೆಟ್‌ಗೆ 8.1 ಓವರ್‌ಗಳಲ್ಲಿ 74 ರನ್‌ ಸೇರಿಸಿತು. ಈ ವೇಳೆ 6 ಬೌಂಡರಿ, 1 ಸಿಕ್ಸರ್ ಬಾರಿಸಿ 41 ರನ್ ಸಿಡಿಸಿದ್ದ ಮೆಗ್ ಲ್ಯಾನಿಂಗ್ ಅವರಿಗೆ ನಡಿನ್‌ ಡಿ ಕ್ಲರ್ಕ್‌ ಖೆಡ್ಡಾ ತೋಡಿದರು. ಇದೇ ಓವರ್‌ನಲ್ಲಿ ಆಮಿ ಜೋನ್ಸ್ ಅವರಿಗೆ ಕ್ಲರ್ಕ್‌ ಎಲ್‌ಬಿಡಬ್ಲ್ಯೂ ಬಲೆಗೆ ಕೆಡವಿದರು.ಈ ಮೂಲಕ ಆರ್‌ಸಿಬಿ ತಂಡ ಹಿಡಿತ ಸಾಧಿಸಲು ಕ್ಲರ್ಕ್ ನೆರವಾದರು.

ಮಧ್ಯಮ ಕ್ರಮಾಂಕದಲ್ಲಿ ಹರ್ಲಿನ್‌ ಡಿಯೋಲ್‌ 14, ಸಿಮ್ರಾನ್ ಶೇಖ್ 10 ರನ್‌ ಸಿಡಿಸಿದರು. ಉಳಿದ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು.

ದೀಪ್ತಿ ಅರ್ಧಶತಕ

ಭರವಸೆಯ ಬ್ಯಾಟರ್‌ ದೀಪ್ತಿ ಶರ್ಮಾ ಅಮೋಘ ಬ್ಯಾಟಿಂಗ್ ನಡೆಸಿ ಅಬ್ಬರಿಸಿದರು. ಇವರು 43 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 55 ರನ್‌ ಬಾರಿಸಿ ಮಿಂಚಿದರು. ಅಲ್ಲದೆ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. ಅಂತಿಮವಾಗಿ ಯುಪಿ ವಾರಿಯರ್ಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 143 ರನ್‌ ಸೇರಸಿತು.

ನಾಡಿನ್‌ ಡಿ ಕ್ಲರ್ಕ್

ಆರ್‌ಸಿಬಿ ತಂಡದ ಪರ ಸ್ಟಾರ್ ಆಟಗಾರ್ತಿ ನಾಡಿನ್ ಡಿ ಕ್ಲರ್ಕ್‌ ಬಿಗುವಿನ ದಾಳಿ ನಡೆಸಿ ಮಿಂಚಿದರು. ತಾವು ಎಸೆದ ಮೊದಲ ಓವರ್‌ನಲ್ಲಿ 2 ಹಾಗೂ ಕೊನೆಯ ಓವರ್‌ನಲ್ಲಿ 2 ವಿಕೆಟ್‌ ಕಬಳಿಸಿ ಯುಪಿ ವಾರಿಯರ್ಸ್‌ಗೆ ಶಾಕ್ ನೀಡಿದರು. ಇವರು 22 ರನ್‌ ನೀಡಿ 4 ವಿಕೆಟ್‌ ಕಬಳಿಸಿದರು. ಗ್ರೇಸ್ ಹ್ಯಾರಿಸ್‌ ಸಹ 22 ರನ್‌ ನೀಡಿ 2 ವಿಕೆಟ್‌ ಉರುಳಿಸಿದರು. ವೇಗಿ ಲಾರೆನ್‌ ಬೆಲ್‌, ಶ್ರೇಯಾಂಕಾ ಪಾಟೀಲ್‌ ತಲಾ ಒಂದು ವಿಕೆಟ್‌ ಕಬಳಿಸಿದರು.

Story first published: Thursday, January 29, 2026, 21:13 [IST]
Other articles published on Jan 29, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+