ಬೆಂಗಳೂರು ಎಂ ಚಿನ್ನಸ್ವಾಮಿ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗೆಲುವಿನ ಟ್ರ್ಯಾಕ್‌ಗೆ ಮರಳಲು ಯೋಜನೆ ಮಾಡಿಕೊಂಡಿದೆ. ಶನಿವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಪಂಜಾಬ್ ಕಿಂಗ್ಸ್ ತಂಡದ ಸವಾಲು ಎದುರಿಸಲಿದೆ. ಈ ಪಂದ್ಯ ಆರ್‌ಸಿಬಿಗೆ ಮಹತ್ವದಾಗಿದೆ. ತವರಿನಲ್ಲಿ ಕಂಡಿರುವ ಹ್ಯಾಟ್ರಿಕ್ ಸೋಲಿನ ಕಹಿಯನ್ನು ಮರೆಯಲು 18ನೇ ಆವೃತ್ತಿಯ 17ನೇ ಪಂದ್ಯದಲ್ಲಿ ಗೆಲುವು ದಾಖಲಿಸುವುದು ಅನಿವಾರ್ಯವಾಗಿದೆ. ಅಂದಾಗ ಮಾತ್ರ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯಬಹುದು.
ಉಭಯ ತಂಡಗಳು ಈಗಾಗಲೇ 34 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಈ ವೇಳೆ ಆರ್‌ಸಿಬಿ 16 ಹಾಗೂ ಪಂಜಾಬ್ 18 ಜಯ ಸಾಧಿಸಿದೆ. ಉಭಯ ತಂಡಗಳ ನಡುವೆ ನಡೆದ ಪಂದ್ಯದಲ್ಲಿ 241 ರನ್ ಗರಿಷ್ಠ ಸ್ಕೋರ್ ಆಗಿದೆ.

ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್‌ಗೆ ಅನುಕೂಲಕಾರಿಯಾಗಿರುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ ಕೆಕೆಅರ್ ವಿರುದ್ಧ ಪಂಜಾಬ್ 112 ರನ್‌ಗಳು ಡಿಫೆಂಡ್ ಮಾಡಿಕೊಂಡಿರುವುದು ಲೆಕ್ಕಾಚಾರಗಳನ್ನು ಉಲ್ಟಾ ಮಾಡಿದೆ. ಈ ಮೈದಾನದಲ್ಲಿ ಈಗಾಗಲೇ 8 ಐಪಿಎಲ್ ಪಂದ್ಯಗಳು ನಡೆದಿದ್ದು, ಮೊದಲು ಬ್ಯಾಟ್ ಮಾಡಿದ ತಂಡ 5 ಬಾರಿ ಪಂದ್ಯವನ್ನು ಗೆದ್ದಿದೆ. ಈ ಪಿಚ್‌ನಲ್ಲಿ ಚೇಸ್ ಮಾಡಿದ ತಂಡ ಮೂರು ಬಾರಿ ಜಯ ಸಾಧಿಸಿದೆ. ಈ ಪಿಚ್‌ನಲ್ಲಿ ಪಂಜಾಬ್ ಕಿಂಗ್ಸ್ ದಾಖಲೆ ಸಾಧಾರಣವಾಗಿದೆ. ಈ ಪಿಚ್‌ನಲ್ಲಿ ಪಂಜಾಬ್ ಆಡಿದ 8 ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ. ಈ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 170 ರಿಂದ 175 ರನ್ ಸೇರಿಸಬಹುದು.
ಆರ್‌ಸಿಬಿ ಬ್ಯಾಟರ್‌ಗಳು ಕಳೆದ ಪಂದ್ಯದಲ್ಲಿ ಮಾಡಿದ ತಪ್ಪಿನಿಂದ ಪಾಠ ಕಲಿತು ಬ್ಯಾಟ್ ಮಾಡಬೇಕಿದೆ. ಎಂ ಚಿನ್ನಸ್ವಾಮಿ ಅಂಗಳದಲ್ಲಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆಗಿದ್ದನ್ನು, ಭಾನುವಾರ ನಡೆಯುವ ಪಂದ್ಯದಲ್ಲಿ ಮಾಡ ಬಾರದು. ಈ ವೇಳೆ ಓಪನರ್ಸ್ ವಿರಾಟ್ ಕೊಹ್ಲಿ (Virat Kohli) ಹಾಗೂ ಫಿಲ್ ಸಾಲ್ಟ್ (Phil Salt) ಎದುರಾಳಿಗಳ ತವರಿನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ನಡೆಸಿದೆ ಇದೇ ಪ್ರದರ್ಶನವನ್ನು ನ್ಯೂ ಚಂಡೀಗಡ್ ಅಂಗಳದಲ್ಲೂ ಮಾಡುವ ಅನಿವಾರ್ಯತೆ ಇದೆ.

ಪವರ್ ಪ್ಲೇನಲ್ಲಿ ವಿಕೆಟ್ ಬೀಳದಂತೆ ಕಾಯ್ದುಕೊಂಡು ತಾಳ್ಮೆಯಿಂದ ಆಡಿದ ಕಿಂಗ್ಸ್ ಅಸ್ತ್ರಗಳಿಗೆ ಪ್ರತಿ ಅಸ್ತ್ರ ಪ್ರಯೋಗಿಸಬೇಕಿದೆ. ಇನ್ನು ಆರಂಭದಲ್ಲಿ ರನ್‌ಗಳು ಬಾರದೇ ಇದ್ದರೂ ತಲೆ ಕೆಡಿಸಿಕೊಳ್ಳದೇ ವಿಕೆಟ್ ಕಾಯ್ದುಕೊಂಡು, ರನ್ ವೇಗಕ್ಕೆ ಕ್ರಮೇಣ ಚುರುಕು ಮುಟ್ಟಿಸುವುದು ಅನಿವಾರ್ಯ. ಅಂದಾಗ ಮಾತ್ರ ದೊಡ್ಡ ಮೊತ್ತದ ಕನಸು ನನಸಾಗುತ್ತದೆ.
ಇನ್ನು ಬೌಲರ್‌ಗಳು ತಮ್ಮ ಲಯ ಬದ್ಧ ದಾಳಿಯನ್ನು ಪವರ್ ಪ್ಲೇನಲ್ಲಿ ತೋರಿಸುವ ಅವಶ್ಯಕತೆ ಇದೆ. ಅಂದಾಗ ಮಾತ್ರ ಪಂಜಾಬ್ ಕಿಂಗ್ಸ್‌ಗೆ ತವರಿನಲ್ಲಿ ಕಟ್ಟಿ ಹಾಕಲು ಸಾಧ್ಯ. ಈ ಹಂತೆದಲ್ಲಿ ವಿಕೆಟ್ ಬೇಟೆ ನಡೆಸುವಲ್ಲಿ ಆರ್‌ಸಿಬಿ ಬೌಲರ್ಸ್ ಸಫಲರಾದರೆ, ಗೆಲುವಿನ ಆಸೆ ಚಿಗುರುತ್ತದೆ.
ಆರ್‌ಸಿಬಿ (RCB) ಬ್ಯಾಟಿಂಗ್ ಲೈನ್ ಅಪ್ ಬಲಿಷ್ಠವಾಗಿದೆ. ಆದರೆ ಟಾಪ್ ಆರ್ಡರ್ ಬ್ಯಾಟರ್‌ಗಳಿಂದ ರನ್ ಹೊಳೆ ಹರಿದರೆ ಇನ್ನು ಚೆನ್ನಾಗಿ ಕಾಣುತ್ತದೆ. ಆರ್‌ಸಿಬಿ ಗೆದ್ದಿರುವ ಮೂರು ಪಂದ್ಯಗಳಲ್ಲಿ ಟಾಪ್ ಆರ್ಡರ್ ಬ್ಯಾಟರ್‌ಗಳು ತಮ್ಮದೇ ಆದ ಕಾಣಿಕೆ ನಿಡಿದ್ದಾರೆ. ಪಂಜಾಬ್ ವಿರುದ್ಧ ರೈವಲರಿ ಪಂದ್ಯದಲ್ಲೂ ಇಂತಹದ್ದೇ ಇನಿಂಗ್ಸ್ ಕಟ್ಟುವ ಅನಿವಾರ್ಯತೆ ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಅವರಿಗೆ ಇದೆ. ಇವರು ಕೆಲವು ಎಸೆತಗಳನ್ನು ನೋಡಿಕೊಂಡು ಎದುರಿಸಿದ್ದೇ ಆದಲ್ಲಿ ರನ್ ವೇಗಕ್ಕೆ ಚುರುಕು ಮುಟ್ಟಿಸಬಲ್ಲರು. ಪಂಜಾಬ್ ವಿರುದ್ಧ ವಿರಾಟ್ ಅಂಕಿ ಅಂಶಗಳು ಉತ್ತಮವಾಗಿದ್ದು ಎಚ್ಚರಿಕೆಯಿಂದ ಆಡಿದ್ದೇ ಆದಲ್ಲಿ ಐದನೇ ಗೆಲುವು ಸಾಧಿಸುವ ಕನಸು ನನಸಾಗುತ್ತದೆ. ಈ ಮೂಲಕ ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಬಡ್ತಿ ಕಾಣಬಹುದು.
ಪ್ರಸಕ್ತ ಐಪಿಎಲ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿರುವ ಪಂಜಾಬ್ ಕಿಂಗ್ಸ್ ಬ್ಯಾಟರ್‌ಗಳಿಗೆ ಆರ್‌ಸಿಬಿ ಬೌಲರ್ಸ್ ಕಾಟ ನೀಡಬೇಕಿದೆ. ಇವರ ನ್ಯೂನತೆಗಳನ್ನು ಗುರುತಿಸಿ ಸರಿಯಾದ ಸ್ಥಳದಲ್ಲಿ ಬೌಲಿಂಗ್ ನಡೆಸಿದ್ದೇ ಆದಲ್ಲಿ ಗೆಲುವಿನ ಕನಸು ನನಸಾಗುತ್ತದೆ. ಪಂಜಾಬ್ ಪರ ಶ್ರೇಯಸ್ ಅಯ್ಯರ್ (Shreyas Iyer), ಪ್ರಿಯಾಂಶ್ ಆರ್ಯ (Priyansh Arya), ಶಶಾಂಕ್ ಸಿಂಗ್ ಭರ್ಜರಿ ಟಚ್‌ನಲ್ಲಿದ್ದಾರೆ. ಇವರ ಆಟಕ್ಕೆ ಆರ್‌ಸಿಬಿ ಬ್ರೇಕ್ ಹಾಕುವಲ್ಲಿ ಸಫಲರಾದಲ್ಲಿ ಹಾಫ್ ಮ್ಯಾಚ್ ಗೆದ್ದಂತೆ.
ಐಪಿಎಲ್ ಈಗ ಹಾಫ್‌ವೇ ಮಾರ್ಕ್ ಕ್ರಾಸ್ ಮಾಡಿದೆ. ಈ ಹಂತದಲ್ಲಿ ವೈಫಲ್ಯ ಅನುಭವಿಸಿದ ಆಟಗಾರರಿಗೆ ಕೈ ಬಿಟ್ಟು ಬೇರೆ ಆಟಗಾರರಿಗೆ ಅವಕಾಶ ನೀಡುವ ಅನಿವಾರ್ಯತೆ ಇದೆ. ಕಳೆದ ಏಳು ಪಂದ್ಯಗಳಲ್ಲಿ ಆರ್‌ಸಿಬಿ ಜೆರ್ಸಿ ತೊಟ್ಟು ಅಂಗಳಕ್ಕೆ ಇಳಿಯುತ್ತಿರುವ ಇಂಗ್ಲೆಂಡ್ ತಂಡದ ಸ್ಟಾರ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ (Liam Livingstone) ತಮ್ಮ ಕ್ಷಮತೆಗೆ ತಕ್ಕ ಆಟವನ್ನು ಪ್ರದರ್ಶಿಸುವಲ್ಲಿ ವಿಫಲರಾಗುತ್ತಿದ್ದಾರೆ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಫ್ಲಾಪ್ ಶೋ ನೀಡುತ್ತಿರುವುದು ತಂಡದ ಚಿಂತೆಯನ್ನು ದ್ವಿಗುಣ ಗೊಳಿಸಿದೆ. ಹೀಗಾಗಿ ಇವರನ್ನು ತಂಡದಿಂದ ಕೈ ಬಿಟ್ಟು ಬೇರೆ ವಿದೇಶಿ ಆಟಗಾರರಿಗೆ ಅವಕಾಶ ನೀಡುವುದು ಬೆಸ್ಟ್ ಎಂಬ ಮಾತುಗಳು ಕೇಳಿ ಬರುತ್ತಿವೆ.
ಲಿಯಾಮ್ ಲಿವಿಂಗ್‌ಸ್ಟೋನ್ ಸ್ಥಾನದ ಮೇಲೆ ಇಂಗ್ಲೆಂಡ್ ತಂಡದ ಯುವ ಆಟಗಾರ ಜಾಕಬ್ ಬೇತೆಲ್ (Jacob Bethell) ಹಾಗೂ ವೆಸ್ಟ್ ಇಂಡೀಸ್ ತಂಡದ ರೊಮಾರಿಯೊ ಶೆಫರ್ಡ್ (Romario Shepherd) ಅವಕಾಶಕ್ಕಾಗಿ ಕಾಯುತ್ತಿದ್ದಾರೆ. 30 ವರ್ಷದ ಭರವಸೆಯ ಆಟಗಾರ ಶೆಫರ್ಡ್ ಬೌಲಿಂಗ್ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಲಿಯಾಮ್ ಬದಲಿಗೆ ಇವರಿಗೆ ಅವಕಾಶ ಸಿಗುತ್ತದಾ ಎಂಬುದನ್ನು ಕಾದು ನೋಡಬೇಕಿದೆ.
ಆರ್‌ಸಿಬಿ ತಂಡದ ಮಿಡ್ಲ್ ಆರ್ಡರ್ ಬ್ಯಾಟರ್‌ಗಳು ತಮ್ಮ ಸ್ಥಿರ ಬ್ಯಾಟಿಂಗ್ ಪ್ರದರ್ಶನವನ್ನು ನೀಡಬೇಕಿದೆ. ಈ ವೇಳೆ ಬ್ಯಾಟಿಂಗ್ ವಿಭಾಗದ ಜವಾಬ್ದಾರಿಯನ್ನು ರಜತ್ ಪಟಿದಾರ್ (Rajat Patidar) ತಮ್ಮ ಮೇಲೆ ಹೊತ್ತುಕೊಂಡು ಆಡಬೇಕಿದೆ. ಜಿತೇಶ್ ಶರ್ಮಾ, ದೇವದತ್ ಪಡಿಕ್ಕಲ್ ಪರಿಸ್ಥಿತಿಗೆ ತಕ್ಕಂತಹ ಆಟವನ್ನು ಆಡಬೇಕಿದೆ. ಇನ್ನು ಟೀಮ್ ಡೇವಿಡ್ ಡೆತ್ ಓವರ್‌ಗಳಲ್ಲಿ ತಮ್ಮ ಬಿರುಸಿಬ ಬ್ಯಾಟಿಂಗ್‌ನಿಂದ ಎದುರಾಳಿ ಬೌಲರ್‌ಗಳ ಲೆಕ್ಕಾಚಾರ ಉಲ್ಟಾ ಮಾಡ್ತಾ ಇದ್ದಾರೆ. ಮಿಡ್ಲ್ ಆರ್ಡರ್‌ನಲ್ಲೂ ಬ್ಯಾಟರ್‌ಗಳು ಇಂತಹದ್ದೇ ಪ್ರದರ್ಶನ ನೀಡಿದರೆ ಸವಾಲಿನ ಮೊತ್ತವನ್ನು ಕಲೆ ಹಾಕುವ ಕನಸು ನನಸಾಗುತ್ತದೆ.
ಆರ್‌ಸಿಬಿ ಸಂಭಾವ್ಯ ತಂಡ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ತ ಪದಿಕ್ಕಲ್, ರಾಜತ್ ಪಾಟಿದಾರ್ (ನಾಯಕ), ಲಿಯಾಂ ಲಿವಿಂಗ್‌ಸ್ಟೋನ್ / ರೊಮಾರಿಯೋ ಶೆಫರ್ಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃಣಾಲ್ ಪಾಂಡ್ಯಾ, ಭುವನೇಶ್ವರ ಕುಮಾರ್, ಜೋಷ್ ಹೇಜಲ್‌ವುಡ್, ಯಶ್ ದಯಾಲ್, ಸುಯಶ್ ಶರ್ಮಾ.
ಪಂದ್ಯದ ಸಮಯ: ಮಧ್ಯಾಹ್ನ 3.30ಕ್ಕೆ (ಟಾಸ್ 3ಕ್ಕೆ)