For Quick Alerts
ALLOW NOTIFICATIONS  
For Daily Alerts
 

IPL 2025 RCB: ಬೆಂಗಳೂರು ತಂಡಕ್ಕೆ ಚಾಂಪಿಯನ್‌ ಪಟ್ಟಕ್ಕೇರಿಸಲು ಇಂಗ್ಲೆಂಡ್ ಪ್ಲೇಯರ್ ಸಿದ್ಧ

ಇಂಡಿಯನ್ ಪ್ರೀಮಿಯರ್‌ ಲೀಗ್‌ ಈಗ 18ನೇ ಆವೃತ್ತಿಗೆ ಕಾಲಿಡಲಿದೆ. ಈ ವೇಳೆ ಐಪಿಎಲ್‌ನ ತಂಡಗಳು ಭರ್ಜರಿ ತಯಾರಿ ನಡೆಸಿದ್ದಾರೆ. ಐಪಿಎಲ್‌ನಲ್ಲಿ ಈ ಬಾರಿಯೂ 10 ತಂಡಗಳು ಭಾಗವಹಿಸಲಿದ್ದು, ರೋಚಕ ಕಾದಾಟ ಕಾಣುವುದು ಖಚಿತ. ಐಪಿಎಲ್ ಇತಿಹಾಸದಲ್ಲಿ ಕಪ್‌ ಗೆದ್ದ ತಂಡಗಳ ಪಟ್ಟಿಗೇನು ಕಮ್ಮಿ ಇಲ್ಲ. ಆದರೆ ಕಪ್‌ ಗೆಲ್ಲದ ತಂಡಗಳು ಸಹ ಇಷ್ಟೇ ಇವೆ. ಕಪ್‌ ಗೆಲ್ಲದ ತಂಡಗಳಲ್ಲಿ ಆರ್‌ಸಿಬಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತದೆ. ಈ ತಂಡ 17 ಆವೃತ್ತಿಗಳಲ್ಲಿ ಭಾಗವಹಿಸಿದ್ರೂ ಸಹ ಕಪ್‌ ಬರ ಅನುಭವಿಸುತ್ತಿದೆ. ಆದರೆ ಈ ಬಾರಿ ಆರ್‌ಸಿಬಿ ಭರ್ಜರಿ ಪ್ರದರ್ಶನ ನೀಡಿ ಕಪ್‌ ಗೆಲ್ಲುವ ಇರಾದೆಯನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ತಂಡಕ್ಕೆ ಸ್ಟಾರ್ ಪ್ಲೇಯರ್‌ಗಳ ಎಂಟ್ರಿ ಸಹ ಆಗಿದೆ.

ಐಪಿಎಲ್‌ ಆಗಿರಲಿ ಅಥವಾ ಯಾವುದೇ ತಂಡವಾಗಿರಲಿ, ಒಬ್ಬನೇ ಪ್ಲೇಯರ್‌ ಮೇಲೆ ಅವಲಂಬಿತವಾಗಿರುವುದು ಕಷ್ಟ. ಕಳೆದ ಕೆಲವು ವರ್ಷಗಳಿಂದ ಆರ್‌ಸಿಬಿ ಆ ಒಬ್ಬ ಪ್ಲೇಯರ್‌ ಮೇಲೆ ಬಹಳ ನಂಬಿಕೆಯನ್ನು ಇಟ್ಟುಕೊಂಡಿತ್ತು. ಆದರೆ ಆತ ಒಬ್ಬ ಕೈ ಕೊಟ್ಟರೆ, ತಂಡ ಠುಸ್ ಪಟಾಕಿ ಎಂಬುದನ್ನು ಅರಿತಿರುವ ಮ್ಯಾನೇಜ್ಮೆಂಟ್‌, ಈ ಬಾರಿ ಬಲಾಢ್ಯ ತಂಡವನ್ನು ಕಟ್ಟಿದೆ. ಈ ತಂಡದಲ್ಲಿ ಸ್ಟಾರ್ ಆಟಗಾರರ ಗೊಂಚಲೇ ಇದೆ. ಅಲ್ಲದೆ ಚಾಂಪಿಯನ್‌ ಆಟಗಾರರು ಇದ್ದಾರೆ.

RCB Aims for IPL 2025 Glory with Phil Salt s Explosive Batting Boost

ಕಳೆದ ಆವೃತ್ತಿಯಲ್ಲಿ ತಮ್ಮ ಧಮಾಕೆದಾರ್ ಪ್ರದರ್ಶನದಿಂದ ಬ್ಯಾಟಿಂಗ್ ನಲ್ಲಿ ಕೆಕೆಆರ್‌ ತಂಡಕ್ಕೆ ನೆರವಾಗಿದ್ದ, ಆರಂಭಿಕ ಆಟಗಾರ ಫಿಲ್ ಸಾಲ್ಟ್ ಈಗ ಆರ್‌ಸಿಬಿ ತಂಡದಲ್ಲಿದ್ದಾರೆ. ಇವರು ಪವರ್‌ ಪ್ಲೇನಲ್ಲಿ ಬಿಗ್‌ ಹಿಟ್‌ಗಳನ್ನು ಬಾರಿಸುವಲ್ಲಿ ಹೆಸರುವಾಸಿ. ಇವರ ಆಗಮನ ತಂಡದ ಟಾಪ್‌ ಆರ್ಡರ್‌ಗೆ ಆನೆ ಬಲ ಬಂದಂತೆ ಆಗಿದೆ.

ಸಾಲ್ಟ್ ಸಾಧನೆ

17ನೇ ಆವೃತ್ತಿಯ ಐಪಿಎಲ್‌ನಲ್ಲಿ ಫಿಲ್ ಸಾಲ್ಟ್ ಆಡಿದ 12 ಪಂದ್ಯಗಳಲ್ಲಿ 435 ರನ್‌ ಸಿಡಿಸಿದ್ದಾರೆ. ಈ ವೇಳೆ ಇವರ ಸ್ಟ್ರೈಕ್‌ ರೇಟ್‌ 182 ರನ್‌ ಗಳಿಸಿದ್ದಾರೆ. ಈ ವೇಳೆಯಲ್ಲಿ 4 ಅರ್ಧಶತಕಗಳನ್ನು ಬಾರಿಸಿದ್ದಾರೆ. ಒಟ್ಟಾರೆ ಐಪಿಎಲ್‌ನಲ್ಲಿ ಇವರು ಆಡಿದ 21 ಪಂದ್ಯಗಳಲ್ಲಿ 653 ರನ್‌ ಸಿಡಿಸಿದ್ದಾರೆ. ಇವರು ಕೆಕೆಆರ್‌ ತಂಡಕ್ಕೂ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ಪರ ಸಹ ಆಡಿದ ಅನುಭವ ಹೊಂದಿದ್ದಾರೆ.

RCB Aims for IPL 2025 Glory with Phil Salt s Explosive Batting Boost

11,50 ಕೋಟಿ

ಆರ್‌ಸಿಬಿ ಈ ಬಾರಿ ಸೌದಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ಅತಿ ಹೆಚ್ಚು ಹಣದೊಂದಿಗೆ ಕಣಕ್ಕೆ ಇಳಿದಿತ್ತು. ಈ ವೇಳೆ ಆರ್‌ಸಿಬಿ ಮ್ಯಾನೇಜ್ಮೆಂಟ್‌ ತಾನು ಹಾಕಿಕೊಂಡಿದ್ದ ಪ್ಲ್ಯಾನ್‌ಗೆ ಅನುಸಾರವಾಗಿ ಆಟಗಾರರನ್ನು ಖರೀದಿ ಮಾಡಿದೆ. ಈ ವೇಳೆ ಮ್ಯಾನೇಜ್ಮೆಂಟ್‌ ಫಾಫ್‌ ಡುಪ್ಲೇಸಿಸ್ ಅವರಿಂದ ತೆರವಾದ ಆರಂಭಿಕರ ಸ್ಥಾನಕ್ಕೆ ಹರಾಜು ಅಂಗಳದಲ್ಲಿದ್ದ ಫಿಲ್‌ ಸಾಲ್ಟ್‌ ಅವರಿಗೆ ಮಣೆ ಹಾಕಿದೆ. ಇವರಿಗೆ ಆರ್‌ಸಿಬಿ ಬರೋಬ್ಬರಿ 11.50 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಫಿಲ್‌ ಸಾಲ್ಟ್‌ ಕಳೆದ ಬಾರಿ ನೀಡಿದ ಪ್ರದರ್ಶನವನ್ನೇ ಪುನಾರವರ್ತಿಸಿದರೆ, ನಿಶ್ಚಿತವಾಗಿಯೂ ಆರ್‌ಸಿಬಿ ಅಭಿಮಾನಿಗಳ ಮುಳದಲ್ಲಿ ಮಂದಹಾಸ ಮೂಡಲಿದೆ.

Story first published: Friday, March 14, 2025, 9:21 [IST]
Other articles published on Mar 14, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+