Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025 RCB: ಅಬುಧಾಬಿಯಲ್ಲಿ ಆರ್‌ಸಿಬಿ ಆಲ್‌ರೌಂಡರ್‌ ಅಬ್ಬರ; 5 ಎಸೆತಗಳಲ್ಲಿ 26 ರನ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಟೂರ್ನಿ ಆರಂಭಕ್ಕೆ ಇನ್ನೂ ಎರಡು ತಿಂಗಳುಗಳು ಬಾಕಿ ಉಳಿದಿವೆ. ಅದಕ್ಕೂ ಮುನ್ನ ವಿಶ್ವದ ವಿವಿಧ ಭಾಗಗಳಲ್ಲಿ ಟಿ20 ಲೀಗ್‌ಗಳನ್ನು ಆಯೋಜಿಸಲಾಗುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ SA20 ಮತ್ತು ಯುಎಇಯಲ್ಲಿ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿ ನಡೆಯುತ್ತಿದೆ. ಇಂಟರ್ ನ್ಯಾಷನಲ್ ಲೀಗ್ ಟಿ20ಯ 14ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ ಆಲ್ ರೌಂಡರ್ ರೊಮಾರಿಯೊ ಶೆಫರ್ಡ್ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಚಿತ್ತ ಕದ್ದಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಹೀಗಾಗಿ ಶೆಫರ್ಡ್ ಪಂದ್ಯದ ಆಟಗಾರರಾಗಿಯೂ ಆಯ್ಕೆಯಾಗಿದ್ದಾರೆ.

ರೊಮಾರಿಯೊ ಶೆಫರ್ಡ್ ಅವರನ್ನು ಐಪಿಎಲ್ ಮೆಗಾ ಹರಾಜು 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ರೂ 1.50 ಕೋಟಿಗೆ ಖರೀದಿಸಿದೆ. ಇಂತಹ ಸಂದರ್ಭದಲ್ಲಿ ಅದ್ಭುತ ಬ್ಯಾಟಿಂಗ್ ಫಾರ್ಮ್ ತೋರಿರುವ ರೊಮಾರಿಯೊ ಶೆಫರ್ಡ್ ಆರ್‌ಸಿಬಿ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ.

RCB all-rounder Romario Shepherd scores 26 runs off last 5 balls in UAE International League T20

ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ರೋಚಕ ಪಂದ್ಯದಲ್ಲಿ ಎಂಐ ಎಮಿರೇಟ್ಸ್ ತಂಡ ಅಬುಧಾಬಿ ನೈಟ್ ರೈಡರ್ಸ್ ತಂಡವನ್ನು 28 ರನ್‌ಗಳಿಂದ ಸೋಲಿಸಿತು. ಎಂಐ ಎಮಿರೇಟ್ಸ್ ಪರ ರೊಮಾರಿಯೊ ಶೆಫರ್ಡ್ ಮತ್ತು ನಿಕೋಲಸ್ ಪೂರನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಪರಿಣಾಮ ಎಂಐ ಎಮಿರೇಟ್ಸ್ ಗೆಲುವಿನ ನಗೆ ಬೀರಿತು. ಈ ಗೆಲುವನೊಂದಿಗೆ
ಅಂಕಪಟ್ಟಿಯಲ್ಲಿ ಎಂಐ ತಂಡ 6 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಡೆಸರ್ಟ್ ವೈಪರ್ಸ್ 8 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.

ಶೆಫರ್ಡ್ ಅಬ್ಬರ

ಎಂಐ ಬ್ಯಾಟಿಂಗ್‌ನ ಕೊನೆಯ ಓವರ್‌ನಲ್ಲಿ ರೊಮಾರಿಯೊ ಶೆಫರ್ಡ್ ಸಿಡಿದೆದ್ದರು. ನೈಟ್ ರೈಡರ್ಸ್ ಬೌಲರ್ ಅಲಿ ಖಾನ್ ಅವರನ್ನು ಶೆಫರ್ಡ್ ತರಾಟೆಗೆ ತೆಗೆದುಕೊಂಡರು. 20ನೇ ಓವರ್‌ನಲ್ಲಿ ಅಲಿಖಾನ್ ಅವರ ಮೊದಲ ಎಸೆತದಲ್ಲಿ ಅಕಿಲ್ ಹುಸೇನ್ ರನ್ ಗಳಿಸಿದರು. ಇದಾದ ನಂತರ ಶೆಫರ್ಡ್ ಎರಡನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಮೂರನೇ ಮತ್ತು ನಾಲ್ಕನೇ ಎಸೆತಗಳಲ್ಲಿ ಬೌಂಡರಿ ಬಾರಿಸಿದರು. ಇಷ್ಟಕ್ಕೆ ಸುಮ್ಮನಾಗದ ಶೆಫರ್ಡ್ ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದರು. ಇದರೊಂದಿಗೆ ಎಂಐ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 186 ರನ್ ಗಳಿಸಿತು.

ಎಂಐ ಎಮಿರೇಟ್ಸ್ ಪರ ನಾಯಕ ನಿಕೋಲಸ್ ಪೂರನ್ 26 ಎಸೆತಗಳಲ್ಲಿ 49 ರನ್ ಗಳಿಸಿದರು. ಮುಹಮ್ಮದ್ ವಾಸಿಮ್ 35 ಎಸೆತಗಳಲ್ಲಿ 38 ರನ್ ಮತ್ತು ಕುಸಲ್ ಪೆರೆರಾ 20 ಎಸೆತಗಳಲ್ಲಿ 23 ರನ್ ಕಲೆ ಹಾಕಿದರು. ಶೆಫರ್ಡ್ ಕೊನೆಯ ಓವರ್‌ಗಳಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿ ತಂಡವನ್ನು ಸವಾಲಿನ ಗುರಿಯತ್ತ ಕೊಂಡೊಯ್ದರು. ಶೆಫರ್ಡ್ 292.31 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡುವ ಮೂಲಕ 13 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ 38 ರನ್ ಬಾರಿಸಿದರು.

187 ರನ್‌ಗಳ ಗುರಿಯನ್ನು ಎದುರಿಸಿದ ಡೆಸರ್ಟ್ ವೈಪರ್ಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 158 ರನ್ ಗಳಿಸಲಷ್ಟೇ ಶಕ್ತವಾಯಿತು. ಆಂಡ್ರೆ ರಸೆಲ್ 23 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ ಅಜೇಯ 37 ರನ್ ಗಳಿಸಿದರು. ಆಂಡ್ರೆಸ್ ಗಸ್ 34, ಕೈಲ್ ಮೇಯರ್ಸ್ 22 ರನ್ ಬಾರಿಸಿದರು. ಎಂಐ ಎಮಿರೇಟ್ಸ್ ಪರ ಅಲ್ಜಾರಿ ಜೋಸೆಫ್ ಮತ್ತು ರೊಮಾರಿಯೊ ಶೆಫರ್ಡ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.

Story first published: Wednesday, January 22, 2025, 12:36 [IST]
Other articles published on Jan 22, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+