RCB vs PBKS: ಇಂದು ಪಂಜಾಬ್, ಆರ್‌ಸಿಬಿ ಕ್ವಾಲಿಫೈಯರ್ ಹೋರಾಟ: ಫೈನಲ್‌ಗೆ ಟಿಕೆಟ್ ಪಡೆಯುವುದು ಯಾರು?
18ನೇ ಆವೃತ್ತಿಯ ಲೀಗ್ ಹಂತದ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಕಾದಾಟ ನಡೆಸಲಿವೆ. ಕ್ವಾಲಿಫೈಯರ್ ಮೊದಲ ಪಂದ್ಯದಲ್ಲಿ ಅಂಕ ಪಟ್ಟಿಯಲ್ಲಿ ಎರಡು ಸ್ಥಾನ ಪಡೆದಿರುವ ಪಂಜಾಬ್ ಹಾಗೂ ಆರ್‌ಸಿಬಿ ತಂಡಗಳು ಹೋರಾಟ ನಡೆಸಲಿವೆ. ಈ ಪಂದ್ಯದಲ್ಲಿ ಜಯ ಸಾಧಿಸಿ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲು ಉಭಯ ತಂಡಗಳು ಪ್ಲ್ಯಾನ್ ಮಾಡಿಕೊಂಡಿವೆ. ಆರ್‌ಸಿಬಿ ನಾಲ್ಕನೇ ಬಾರಿಗೆ ಫೈನಲ್ ಪ್ರವೇಶಿಸುವ ಕನಸು ಕಾಣುತ್ತಿವೆ.
ಆರ್‌ಸಿಬಿ ಹಾಗೂ ಪಂಜಾಬ್ ತಂಡಗಳು ಲೀಗ್ ಹಂತದಲ್ಲಿ ಎರಡು ಬಾರಿ ಮುಖಾಮುಖಿ ಆಗಿದ್ದು, ಎರಡೂ ತಂಡಗಳು ತಲಾ ಒಂದು ಬಾರಿ ಜಯ ಸಾಧಿಸಿವೆ. ಎರಡೂ ತಂಡಗಳು ಲೀಗ್ ಹಂತದಲ್ಲಿ ಒಟ್ಟು 19 ಅಂಕಗಳನ್ನು ಕಲೆ ಹಾಕಿವೆ. ಪಂಜಾಬ್ ಮೊದಲ ಸ್ಥಾನ, ಆರ್‌ಸಿಬಿ ಎರಡನೇ ಸ್ಥಾನದಲ್ಲಿವೆ. ಇನ್ನು ಒಟ್ಟಾರೆ ತಂಡಗಳು 35 ಬಾರಿ ಕಾದಾಟ ನಡೆಸಲಿವೆ. ಈ ವೇಳೆ ಪಂಜಾಬ್ 18, ಆರ್‌ಸಿಬಿ 17 ಪಂದ್ಯಗಳಲ್ಲಿ ಜಯ ಸಾಧಿಸಿದೆ.

ಮುಲ್ಲನ್‌ಪುರ ಪಿಚ್ ಬ್ಯಾಟರ್‌ಗಳಿಗೆ ಕೊಂಚ ಸಹಾಯ ನೀಡಲಿದೆ. ಅಲ್ಲದೆ ಈ ಪಿಚ್‌ನಲ್ಲಿ 200 ರನ್‌ಗಳಿಸುವುದು ಸುಲಭದ ಮಾತಲ್ಲ. ಈ ಪಿಚ್ ಮೇಲೆ ಪಂಜಾಬ್ 111 ರನ್‌ಗಳಿ ಡಿಫೆಂಡ್ ಮಾಡಿಕೊಟ್ಟಿತ್ತು. ಆರ್‌ಸಿಬಿ ಇದೇ ಅಂಗಳದಲ್ಲಿ ಚೇಸ್ ಮಾಡಿ ಗೆದ್ದಿತ್ತು. ಕ್ವಾಲಿಫೈಯರ್ ಒಂದರಲ್ಲಿ ಯಾವ ತಂಡ ಗೆಲುವು ದಾಖಲಿಸುತ್ತದೆ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ ಆಗಿದೆ.
ಸಂಘಟಿತ ಆಟವೇ ಬಲ
ಆರ್‌ಸಿಬಿ ತಂಡ 18ನೇ ಆವೃತ್ತಿಯಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡುತ್ತಿದೆ. ಆರ್‌ಸಿಬಿ ತಂಡದ ಸ್ಟಾರ್ ಆಟಗಾರರು ಲಯದಲ್ಲಿರುವುದು ತಂಡದ ಆಸೆಯನ್ನು ಚಿಗುರಿಸಿದೆ. ಈ ವೇಳೆ ವಿರಾಟ್ ಕೊಹ್ಲಿಯ ಮೇಲೂ ಹೆಚ್ಚಿನ ಒತ್ತಡವಿಲ್ಲ. ಭರವಸೆಯ ಆಟಗಾರರು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡುತ್ತಿದ್ದಾರೆ. ಹೀಗಾಗಿ ಟಾಪ್ ಆರ್ಡರ್ ಮೇಲಿನ ಒತ್ತಡ ಕಡಿಮೆ ಆಗಿದೆ. ಟಾಪ್ ಆರ್ಡರ್‌ನಲ್ಲಿ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಅಮೋಘ ಪ್ರದರ್ಶನ ನೀಡುತ್ತಿರುವುದು ವಿಶ್ವಾಸ ಮೂಡಿಸಿದೆ.

ಆರ್‌ಸಿಬಿ ತಂಡದ ಮಧ್ಯಮ ಕ್ರಮಾಂಕದ ಆಟಗಾರರು ಸ್ಥಿರ ಪ್ರದರ್ಶನ ನೀಡುತ್ತಿರುವುದು ವಿಶ್ವಾಸ ಮೂಡಿಸಿದೆ. ಮಧ್ಯಮ ಕ್ರಮಾಂಕದಲ್ಲಿ ರಜತ್ ಪಾಟಿದಾರ್, ಮಯಾಂಕ್ ಅಗರ್‌ವಾಲ್, ಜಿತೇಶ್ ಶರ್ಮಾ, ರೊಮಾರೊಯೊ ಶೆಫರ್ಡ್, ಟೀಮ್ ಡೇವಿಡ್ ಸಮೊಯೋಚಿತ ಆಟದ ಪ್ರದರ್ಶನ ನೀಡಿದರೆ ಗೆಲುವು ಸಾಧ್ಯ. ಇನ್ನು ಟೀಮ್ ಡೇವಿಡ್ ಗಾಯದ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿಲ್ಲ. ಇವರು ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಗರಿಷ್ಠ ರನ್ ಸಾಧಕರು
ವಿರಾಟ್ ಕೊಹ್ಲಿ, 13 ಪಂದ್ಯ, 602 ರನ್
ಫಿಲ್ ಸಾಲ್ಟ್, 11 ಪಂದ್ಯ, 331 ರನ್
ರಜತ್ ಪಾಟಿದಾರ್, 13 ಪಂದ್ಯ, 271 ರನ್
ಜೋಶ್ ಎಂಟ್ರಿ
ಜೋಶ್ ಹ್ಯಾಜಲ್‌ವುಡ್ ಮತ್ತೆ ತಂಡಕ್ಕೆ ಮರಳಿದ್ದು, ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಈ ವೇಳೆ ಜೋಶ್ ಹ್ಯಾಜಲ್‌ವುಡ್ ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಬಲ್ಲರು. ಇನ್ನು ಭುವನೇಶ್ವರ್ ಕುಮಾರ್, ಯಶ್ ದಾಯಳ ಬಿಗುವಿನ ದಾಳಿ ನಡೆಸಿ ತಂಡಕ್ಕೆ ನೆರವಾಗಬಲ್ಲರು. ಇನ್ನು ಸ್ಪಿನ್ ಬೌಲರ್‌ಗಳಾಗಿ ಕೃನಾಲ್ ಪಾಂಡ್ಯ, ಸುಯೇಶ್ ಶರ್ಮಾ ಸ್ಪಿನ್ ಮೋಡಿ ನಡೆಸಬೇಕಿದೆ. ಅಂದಾಗ ಮಾತ್ರ ಗೆಲುವಿನ ಕನಸು ನನಸಾಗುತ್ತದೆ.
ಅತಿ ಹೆಚ್ಚು ವಿಕೆಟ್ ಪಡೆದವರು
ಜೋಶ್ ಹ್ಯಾಜಲ್‌ವುಡ್, 10 ಪಂದ್ಯ, 18 ವಿಕೆಟ್
ಕೃನಾಲ್ ಪಾಂಡ್ಯ, 13 ಪಂದ್ಯ, 15 ವಿಕೆಟ್
ಭುವನೇಶ್ವರ್ ಕುಮಾರ್, 12 ಪಂದ್ಯ, 14 ವಿಕೆಟ್
ಸಂಭಾವ್ಯ ಆರ್‌ಸಿಬಿ ತಂಡ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಮಯಾಂಕ್ ಅಗರ್ವಾಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ, ಲಿಯಾಮ್ ಲಿವಿಂಗ್‌ಸ್ಟೋನ್, ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಯಶ್ ದಯಾಲ್, ಜೋಶ್ ಹ್ಯಾಜಲ್‌ವುಡ್.
ತವರಿನ ಬಲ
ಪಂಜಾಬ್ ಕಿಂಗ್ಸ್ ತಂಡ ತವರಿನಲ್ಲಿ ಅಬ್ಬರದ ಪ್ರದರ್ಶನ ನೀಡಿ ಫೈನಲ್‌ಗೆ ಪ್ರವೇಶಿಸುವ ಕನಸು ಕಾಣುತ್ತಿದೆ. ಪಂಜಾಬ್ ಕಿಂಗ್ಸ್ ತಂಡದ ಯುವ ಆಟಗಾರರು ಭರ್ಜರಿ ಪ್ರದರ್ಶನ ನೀಡುತಿದ್ದು ಭರವಸೆ ಮುಡಿಸಿದ್ದಾರೆ. ನಾಯಕ ಶ್ರೇಯಸ್ ಅಯ್ಯರ್, ಜೋಸ್ ಇಂಗ್ಲಿಂಷ್, ಮಾರ್ಕಸ್ ಸ್ಟೋಯ್ನಿಸ್ ಅವರ ಅನುಭವ ತಂಡಕ್ಕೆ ನೆರವಾಗಬೇಕಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಅರ್ಷದೀಪ್ ಸಿಂಗ್, ಮಾರ್ಕೊ ಜಾನ್ಸನ್ ಬಿಗುವಿನ ದಾಳಿ ನಡೆಸಬೇಕಿದೆ. ಇನ್ನು ಹರ್ಪಿತ್ ಬ್ರಾರ್, ಯುಜುವೇಂದ್ರ ಚಹಾಲ್ ತಮ್ಮ ಸ್ಪಿನ್ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಾಡಿದರೆ ಫೈನಲ್ ಪಂದ್ಯವನ್ನು ಆಡುವ ಕನಸು ನನಸಾಗುತ್ತದೆ.

ಪಂಜಾಬ್ ಪರ ಗರಿಷ್ಠ ರನ್ ಬಾರಿಸಿದವರು
ಶ್ರೇಯಸ್ ಅಯ್ಯರ್, 14 ಪಂದ್ಯ, 514 ರನ್
ಪ್ರಭಸಿಮ್ರನ್ ಸಿಂಗ್, 14 ಪಂದ್ಯ, 499 ರನ್
ಪ್ರಿಯಾಂಶ್ ಆರ್ಯ, 14 ಪಂದ್ಯ, 424 ರನ್
ಸಂಭಾವ್ಯ ಪಂಜಾಬ್ ತಂಡ: ಪ್ರಿಯಾಂಶ್ ಆರ್ಯ, ಪ್ರಭಾಸಿಮ್ರಾನ್ ಸಿಂಗ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಅಜ್ಮತುಲ್ಲಾ ಒಮರ್ಜಾಯ್, ಕೈಲ್ ಜೇಮಿಸನ್, ಅರ್ಶ್‌ದೀಪ್ ಸಿಂಗ್, ಯುಜುವೇಂದ್ರ ಚಹಾಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications